ಶ್ರೀ ವಿಜಯ್ ಎಸ್। ದೇವಾಡಿಗ ಅವರಿಗೆ ವರ್ಷದ ಅತ್ಯುತ್ತಮ ಕಂಪನಿ ಕಾರ್ಯದರ್ಶಿ ಪ್ರಶಸ್ತಿ .
ಮುಂಬೈ 14 : ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಇದರ ಸದಸ್ಯ ಮತ್ತು ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ವಿಜಯ್ ಎಸ್ ದೇವಾಡಿಗ ಅವರಿಗೆ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಿಂದ ವರ್ಷದ ಅತ್ಯುತ್ತಮ ಕಂಪನಿ ಕಾರ್ಯದರ್ಶಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲೂ ಸ್ಟಾರ್ ವರ್ಷದ ಅತ್ಯುತ್ತಮ ಆಡಳಿತ ಕಂಪನಿ ಎಂದು ಗುರುತಿಸಲ್ಪಟ್ಟಿದೆ ಹಾಗು ವರ್ಷದ ಆಡಳಿತ ವೃತ್ತಿಪರವಾಗಿ ನೀಡಲಾಗಿದೆ. ಪ್ರಶಸ್ತಿ ಟ್ರೋಫಿಯನ್ನು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶ್ರೀ ದೀಪಕ್ ಮಿಶ್ರಾ ಮತ್ತು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹಸ್ತಾಂತರಿಸಿದರು.
