ಯಶಸ್ವಿಯಾಗಿ ನೆರವೇರಿದ ವಾರ್ಷಿಕ ಕ್ರೀಡಾಕೂಟ ಹಾಗೂ ಡಿಪಿಎಲ್ -2025 ಕ್ರಿಕೆಟ್ ಟೂರ್ನಮೆಂಟ್
ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ ಯುವ ವಿಭಾಗದ ನೇತೃತ್ವದಲ್ಲಿ ವಾರ್ಷಿಕ ಕ್ರೀಡಾಕೂಟ ಹಾಗೂ ಡಿಪಿಎಲ್ -2025 ಕ್ರಿಕೆಟ್ ಟೂರ್ನಮೆಂಟ್ ಡಿ. 14 ರಂದು ಗುರುನಾನಕ್ ಕಾಲೇಜು ಮೈದಾನ ಜಿಟಿಬಿ ನಗರ ಮುಂಬಯಿ ಇಲ್ಲಿ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಕ್ರೀಡಾಕೂಟವನ್ನು ಸಂಘದ ಅಧ್ಯಕ್ಷರಾದ ನಾಗರಾಜ್ ಡಿ. ಪಡುಕೋಣೆ ಅವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ವೇದಿಕೆಯಲ್ಲಿ ಅಧ್ಯಕ್ಷರೊಂದಿಗೆ ಸಂಘದ ಗೌರವ ಅಧ್ಯಕ್ಷರಾದ ಸುಬ್ಬಾ ಜಿ. ದೇವಾಡಿಗ, ಉಪಾಧ್ಯಕ್ಷರಾದ ಭಾಸ್ಕರ್ ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಉಮೇಶ್ ಆರ್. ದೇವಾಡಿಗ, ಕ್ರೀಡಾಕೂಟದ ಪ್ರಮುಖ ಪ್ರಾಯೋಜಕರಲ್ಲೊರ್ವರಾದ ಹೋಟೆಲ್ ಸಾಯಿ ಸಾಗರ್ ನ ಮಾಲಕರಾದ ಸುಂದರ್ ಡಿ. ಅರೆಬೈಲ್, ಕೋಶಾಧಿಕಾರಿ ಮಂಜುನಾಥ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಶೀಲ ಎಸ್. ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಅವಿನಾಶ್ ಬಿ. ದೇವಾಡಿಗ, ಪ್ರೀತಮ್ ಕ್ಯಾಟರರ್ಸ್ ನ ಈಶ್ವರ್ ದೇವಾಡಿಗ, ಈಶ್ವರ್ ಸೆಕ್ಯೂರಿಟಿ ಫೋರ್ಸ್ ನ ಮಾಲಕ ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟಕರು ಹಾಗೂ ಅತಿಥಿಗಳು ಸಂದರ್ಭಯೋಚಿತವಾಗಿ ಮಾತನಾಡಿ, ಸಮಸ್ತ ಸ್ಪರ್ಧಾಳುಗಳಿಗೆ ಶುಭಾಶಯಗಳನ್ನು ತಿಳಿಸುವುದರೊಂದಿಗೆ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.
ಡಿ.ಪಿ.ಲ್ - 2025 ಕ್ರಿಕೆಟ್ ಟೂರ್ನಮೆಂಟಿನಲ್ಲಿ ಪ್ರದೀಪ್ ದೇವಾಡಿಗ ನೇತೃತ್ವದ ಶ್ರೀ ಭಗವತಿ ಫ್ರೆಂಡ್ಸ್ ಕೆರ್ಗಾಲ್ ಇವರು ಟ್ರೋಪಿಯನ್ನು ಮುಡಿಗೇರಿಸಿಕೊಂಡರೆ, ಚಂದ್ರ ಎಂ. ದೇವಾಡಿಗ ನೇತೃತ್ವದ ಮಕರ ಜ್ಯೋತಿ ಇಲೆವೆನ್ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಹಾಗೆಯೇ ಮಹಿಳೆಯರ ಕ್ರಿಕೆಟ್ ಪಂದ್ಯಾಟದ ವಿಜೇತರಾಗಿ ರಕ್ಷಾ ದೇವಾಡಿಗ ನೇತೃತ್ವದ ದೇವಾಡಿಗ ಸಂಘ ಮುಂಬಯಿ ತಂಡ ಹೊರಹೊಮ್ಮಿದರೆ, ಸಿಂಚನ ದೇವಾಡಿಗ ನೇತೃತ್ವದ ಶ್ರೀ ಶನೇಶ್ವರ ಚಾಮುಂಡೇಶ್ವರಿ ಟೈಗರ್ಸ್ ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಹಾಗೆಯೇ ಪುರುಷರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಶ್ರೀ ಶನೇಶ್ವರ ಚಾಮುಂಡೇಶ್ವರಿ ಟೈಗರ್ಸ್ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಬಿಜೂರ್ ಫ್ರೆಂಡ್ಸ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸುಮಾರು 300 ಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ವಿಜೇತರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಕ್ರೀಡಾಕೂಟದ ಅಂಗವಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕ್ರೀಡಾಕೂಟಕ್ಕೆ ಪ್ರಾಯೋಜಕತ್ವವನ್ನು ವಹಿಸಿಕೊಂಡ ಹಾಗೂ ಜಾಹಿರಾತುಗಳನ್ನು ನೀಡಿ ಪ್ರೋತ್ಸಾಹಿಸಿದ ದಾನಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು.
ಸಂಘದ ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ದೇವಾಡಿಗ, ಚಂದ್ರ ಎಂ. ದೇವಾಡಿಗ, ಜೊತೆ ಕೋಶಾಧಿಕಾರಿ ದಿನೇಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಭಾಗ್ಯಶ್ರೀ ದೇವಾಡಿಗ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಕ್ರೀಡಾಕೊಟದ ಯಶಸ್ಸಿಗೆ ಸಹಕರಿಸಿದರು.
ಕ್ರೀಕೆಟ್ ಪಂದ್ಯಾಕೂಟದ ತೀರ್ಪುಗಾರರಾಗಿ ವಿಕಾಸ್ ದೇಸಾಯಿ ಮತ್ತು ಆದಿತ್ಯ ಪವಾರ್ ಸಹಕರಿಸಿದರೆ, ವೀಕ್ಷಕ ವಿವರಣೆಗಾರರಾಗಿ ಹರೀಶ್ ಉಪ್ರಳ್ಳಿ ಸಹಕರಿಸಿದರು. ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ಮಂಜುಳಾ ದೇವಾಡಿಗ ನೆರವೇರಿಸಿಕೊಟ್ಟರು. ಯುವ ವಿಭಾಗದ ಕಾರ್ಯದರ್ಶಿ ಹರ್ಷವರ್ಧನ್ ದೇವಾಡಿಗ ಧನ್ಯವಾದ ಸಮರ್ಪಿಸಿದರು.
.jpeg)
.jpeg)

.jpeg)
.jpeg)


.jpeg)
.jpeg)


.jpeg)

.jpeg)
.jpeg)



.jpeg)



.jpeg)

.jpeg)
.jpeg)


.jpeg)

.jpeg)


.jpeg)


.jpeg)

.jpeg)

.jpeg)

.jpeg)



.jpeg)
.jpeg)



.jpeg)

.jpeg)




.jpeg)






.jpeg)






.jpeg)

.jpeg)













.jpeg)



.jpeg)




.jpeg)





.jpeg)




