ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ: ಕುಂದಾಪುರದ ದೇವಾಡಿಗ ಸಹೋದರಿಯರ ಸಾಧನೆ


ಕುಂದಾಪುರ:
ಪುದುಚೇರಿಯಲ್ಲಿ ಇತ್ತೀಚೆಗೆ ನಡೆದ 21ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಕುಂದಾಪುರದ ಓಕವುಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ದೇವಾಡಿಗ ಸಹೋದರಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಮಾರಿ ಪ್ರಗ್ಯಾ ದೇವಾಡಿಗ ಅವರು ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಅದೇ ವೇಳೆ, ಅವರ ಸಹೋದರಿ ಕುಮಾರಿ ದ್ವಿತಾ ದೇವಾಡಿಗ ಅವರು ದ್ವಿತೀಯ ಸ್ಥಾನ ಗಳಿಸಿ ಕುಂದಾಪುರಕ್ಕೆ ಕೀರ್ತಿ ತಂದಿದ್ದಾರೆ.

ಈ ಸಾಧನೆ ಮಾಡಿದ ಸಹೋದರಿಯರು ಶಿಕ್ಷಕಿ ಶ್ರೀಮತಿ ಅಂಬಿಕಾ ಕುಂದಾಪುರ ಹಾಗೂ ಕೊಂಕಣ ರೈಲ್ವೆಯ ಉದ್ಯೋಗಿ ಶ್ರೀ ಮೋಹನ ದೇವಾಡಿಗ (ಬಿಜೂರು) ಅವರ ಪುತ್ರಿಯರಾಗಿದ್ದಾರೆ.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದೇವಾಡಿಗ ಸಹೋದರಿಯರಿಗೆ ಹಾಗೂ ಅವರನ್ನು ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ವಿವಿಧ ವಲಯಗಳಿಂದ ಹಾರ್ದಿಕ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

Previous Post
No Comment
Add Comment
comment url
sr7themes.eu.org