ವಿಜೃಂಭಣೆಯಿಂದ ಜರಗಿದ 38ನೇ ವಾರ್ಷಿಕೋತ್ಸವ ಸಮಾರಂಭ : ಒಗ್ಗಟ್ಟಿನ ಮಂತ್ರದಿಂದ ಯಾವುದೇ ಕಾರ್ಯ ಸಾಧ್ಯ : ಸಂತೋಷ್ ಪುತ್ರನ್
ಮುಂಬಯಿ, ಜ. 7 - ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾಭ್ಯಾಸ ಎನ್ನುವುದು ಮೊದಲಿನಂತೆ ಇಲ್ಲವಾಗಿದ್ದು ತುಂಬಾ ದುಬಾರಿಯಾಗಿದೆ. ಸಮಾಜ ಬಾಂಧವರ ಏಳಿಗೆಗಾಗಿ ಕೋ - ಆಪರೇಟಿವ್ ಸೊಸೈಟಿ ಮೂಲಕ ಉದ್ಯೋಗಿಗಳಿಗೆ, ವಿಧ್ಯಾಭಾಸಕ್ಕೆ ಸಹಾಯ ಮಾಡಿ ಮುನ್ನಡೆಯಿರಿ. ಸಂಘದ ಅಧ್ಯಕ್ಷರ ಬೆನ್ನಿಗೆ ಬೆನ್ನೆಲುಬಾಗಿ ನಿಂತು ಸಂಘವು ಮುಂದೆ ಬರಲು ಸಹಾಯ ಮಾಡಿ. ಒಗ್ಗಟ್ಟಿನ ಮಂತ್ರದಿಂದ ಯಾವುದೇ ಕಾರ್ಯ ಸಾಧ್ಯ ಎಂದು ದೇವಾಡಿಗ ಸಮಾಜ ಬಾಂಧವರಿಗೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ, ಸಾಯಿ ಸನ್ನಿಧಿ ಬಾರ್ ಅಂಡ್ ರೆಸ್ಟೋರೆಂಟಿನ ಮಾಲಕ ಸಂತೋಷ್ ಪುತ್ರನ್ ಕರೆನೀಡಿದರು.
ಜ. 4 ರಂದು ರವಿವಾರ ಮೈಸೂರು ಅಸೋಸಿಯೇಷನ್, ಮಾಟುಂಗ ಇಲ್ಲಿ ಅದ್ದೂರಿಯಾಗಿ ನಡೆದ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ 38ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಅವರು, ಜಾತಿಯ ಸಂಘ ಸಂಸ್ಥೆ ಕಟ್ಟಿ ಬೆಳೆಸಿದ ಹಿರಿಯರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿ ಅಂದಿನವರ ಸಮಾಜದ ಬಗೆಗಿನ ಕಳಕ್ಕಳಿಯ ಬಗ್ಗೆ ಪ್ರಶಂಸಿಸಿದರು.
ಗೌರವ ಅತಿಥಿ, ಶ್ರೀ ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟೀ ಜನಾರ್ಧನ್ ಉಪ್ಪುಂದ ಮಾತನಾಡಿ, ಹಲವು ಸಮಯದ ಬಳಿಕ ದೇವಾಡಿಗ ವೆಲ್ಫೇರ್ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಸಂಘದ ಹುಟ್ಟಿನ ಬಗ್ಗೆ, ಆ ಸಂದರ್ಭದ ಹಿರಿಯರ ನೋವಿನ ಬಗ್ಗೆ, ಸಂಘ ಭಾಷೆಯ ವಿಷಯದಲ್ಲಿ ಒಡೆದು ಕನ್ನಡದ ಸಂಘವಾಗಿ ಈ ಸಂಘ ರೂಪುಗೊಂಡ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳ ಭವಿಷ್ಯವನ್ನು ಸಂಘಟನೆಯ ಮೂಲಕ ರೂಪಿಸುವತ್ತ ಮುನ್ನಡೆಯಬೇಕು ಎಂದರು. ಅಲ್ಲದೆ ಯಾವುದೇ ಉದ್ಯೋಗದಲ್ಲಿದ್ದರೂ ಅದೇ ಉದ್ಯೋಗದಲ್ಲಿ ಯಶಸ್ಸಿನೆಡೆಗೆ ಮುಂದುವರಿಯಿರಿ, ಸ್ವಂತದ ಉದ್ಯೋಗ ಮಾಡುವಲ್ಲಿ ಪ್ರಯತ್ನಿಸಿ. ನಮ್ಮವರೇ ನಮ್ಮ ಕಾಲೆಳೆಯುವ ಮನಸ್ಥಿತಿ ಬಿಟ್ಟು ಬೆಂಬಲಿಸುವ ಮನಸ್ಥಿತಿ ಹೊಂದಿದಲ್ಲಿ ಸಮಾಜ, ಸಮುದಾಯ ಮುಂದುವರಿಯಲು ಸಾಧ್ಯ. ಹಾಗಾಗಿ ನಾವು ಒಗ್ಗಟ್ಟಿನಿಂದ ಮುಂದುವರಿಯೋಣ ಎಂದರು. ಅಧ್ಯಕ್ಷರ ಯೋಚನೆಯಲ್ಲಿನ ವಿಧ್ಯಾಭಾಸದ ಯೋಜನೇ, ವೈದ್ಯಕೀಯ ಯೋಜನೆ, ಇತ್ಯಾದಿ ಯೋಜನೆ - ಯೋಚನೆಗಳು ಯಶಸ್ವಿಯಾಗಲಿ ಎಂದು ಆಶಿಸಿ ನಿಮ್ಮ ಜೊತೆ ಸದಾ ನಾವಿದ್ದೇನೆ ಎಂದು ಆಶ್ವಾಸನೆ ನೀಡಿದರು.
ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ್ ಡಿ. ಪಡುಕೋಣೆ ಮಾತನಾಡಿ, ಹಿರಿಯರು ಹಾಕಿಕೊಟ್ಟ ಈ ಸಂಘದ ಗಿಡವು ಈಗ ಮರವಾಗಿ ಫಲಕೊಟ್ಟಿದೆ ಎಂಬುದಾಗಿ ಸಂಘದ ಮರುನಿರ್ಮಾಣಗೊಂಡ ಕಚೇರಿಯನ್ನು ಉಲ್ಲೇಖಿಸಿ ತಿಳಿಸಿದರು. ಇದೀಗ ನಾವು ನಮ್ಮ ಕಾಲಮೇಲೆ ನಿಂತು ನಮ್ಮ ಕಾರ್ಯಕಲಾಪಗಳನ್ನು ಮುಂದುವರಿಸಿಕೊಂಡು ಹೋಗಬಹುದು. ಸಂಘದ ಸ್ಥಾಪನೆಗೆ ಕಾರಣವಾದವರನ್ನು ನೆನೆದು ಕೃತಜ್ಞತೆ ಸಲ್ಲಿಸಿದರಲ್ಲದೆ ನಿಕಟಪೂರ್ವ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗರಿಗೆ ವಿಶೇಷವಾಗಿ ಕೃತಜ್ಞೆತೆ ಸಲ್ಲಿಸಿದರು. ಅಲ್ಲದೆ ಸಂಘಟನೆ ಬಲಪಡಿಸುವ ಬಗ್ಗೆ, ವೈದ್ಯಕೀಯ, ಶಿಕ್ಷಣ ಯೋಜನೆಯ ಬಗ್ಗೆ ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗನ್ನು ಹಮ್ಮಿಕೊಳ್ಳೋಣ. ವಿಧ್ಯಾಭ್ಯಾಸಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿವೇತನ ನೀಡಿ ಮಕ್ಕಳನ್ನು ಬೆಂಬಲಿಸಿವ ಬಗ್ಗೆ ತಿಳಿಸಿದರು. ಹಾಗೆ ಸ್ವ ಉದ್ಯೋಗಿಗಳಾಗುವತ್ತ ಗಮನಹರಿಸಿ ಎಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.
ಸಂಘದ ಗೌರವ ಅಧ್ಯಕ್ಷರಾದ ಸುಬ್ಬ ಜಿ ದೇವಾಡಿಗರು ಮಾತನಾಡಿ, ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಿಕೊಂಡುಹೋಗಿ ಎಂದು ಮನವಿ ಮಾಡಿ ಎಲ್ಲರಿಗು ಶುಭಕೋರಿದರು.
ಶ್ರೀಮತಿ ವಿಮಲಾ ದೇವಾಡಿಗರ ಪ್ರಾರ್ಥನೆ ಹಾಗೂ ಕುಮಾರಿ ರೋಶನಿ ದೇವಾಡಿಗ ಇವರ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸಮಾರಂಭವನ್ನು ಮುಖ್ಯ ಅತಿಥಿ ಸಂತೋಷ್ ಪುತ್ರನ್, ಗೌರವ ಅತಿಥಿ ಜನಾರ್ಧನ್ ಉಪ್ಪುಂದ, ಸಂಘದ ಅಧ್ಯಕ್ಷರಾದ ನಾಗರಾಜ್ ಡಿ. ಪಡುಕೋಣೆ ಹಾಗೂ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಶ್ರೀ ಸುಬ್ಬ ಜಿ. ದೇವಾಡಿಗ, ಉಪಾಧ್ಯಕ್ಷರಾದ ಶ್ರೀ ಬಿ.ಎಂ. ದೇವಾಡಿಗ, ಶ್ರೀ ಭಾಸ್ಕರ್ ದೇವಾಡಿಗ, ಗೌ. ಕೋಶಾಧಿಕಾರಿ ಶ್ರೀ ಮಂಜುನಾಥ್ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲ ಎಸ್. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ಅವಿನಾಶ್ ಬಿ. ದೇವಾಡಿಗ ಮತ್ತು ಶ್ರೀಮತಿ ಕುಸುಮ ನಾಗರಾಜ್ ಡಿ. ಪಡುಕೋಣೆ ಉಪಸ್ಥಿತರಿದ್ದರು.
ಸಂಘದ ಕಾರ್ಯರೂಪಗಳ ಕುರಿತು ಜೂತೆ ಕಾರ್ಯದರ್ಶಿ ಲಕ್ಷ್ಮಣ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ ಮಾಹಿತಿ ನೀಡಿದರೆ, ಯುವ ವಿಭಾಗದ ಕಾರ್ಯ ಚಟುವಟಿಕೆಗಳ ವರಧಿಯನ್ನು ಯುವ ವಿಭಾಗದ ಕಾರ್ಯದರ್ಶಿ ಹರ್ಷವರ್ಧನ್ ದೇವಾಡಿಗ ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಕು. ಮಂಜುಳಾ ಮತ್ತು ಕು. ಭಾಗ್ಯಶ್ರೀ ಹಾಗೆಯೇ ಸಭಾ ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲಾ ಎಸ್. ದೇವಾಡಿಗ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಚಂದ್ರ ಎಂ. ದೇವಾಡಿಗ ಎಲ್ಲರನ್ನು ಸ್ವಾಗತಿಸಿದರು.
ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ 5 ಮಂದಿ ಸಾಧಕರಾದ ಗುರುಕೃತಿಕ್ ನಾಗರಾಜ್ ಪಡುಕೋಣೆ, ಕುಮಾರಿ ಅಶ್ಮಿತಾ ಆನಂದ್ ದೇವಾಡಿಗ, ಪನ್ಸುಲ್ ಈಶ್ವರ್ ದೇವಾಡಿಗ, ಕುಮಾರಿ ಮಾನಸ ಸತೀಶ್ ದೇವಾಡಿಗ, ಅಭಿನ್ ದೇವಾಡಿಗ ಹಾಗೂ ಸಂಘದಲ್ಲಿ ನೀಡಿದ ದೀರ್ಘ ಕಾಲದ ಸೇವೆಯನ್ನು ಗುರುತಿಸಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀ ಚಂದ್ರ ಎನ್. ದೇವಾಡಿಗ, ಶ್ರೀ ರವೀಂದ್ರ ದೇವಾಡಿಗ, ಶ್ರೀ ಮಂಜುನಾಥ್ ದೇವಾಡಿಗ ಈ ಮೂವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಲ್ಲದೆ ಸಂಘದ ಚಟುವಟಿಕೆಗಳಿಗೆ ಸದಾ ಆರ್ಥಿಕ ಸಹಾಯ ನೀಡುತ್ತಾ ಬಂದಿರುವ ಶ್ರೀ ಸುಂದರ್ ಡಿ. ಅರೆಬೈಲ್ ಇವರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿ ಸಂತೋಷ್ ಪುತ್ರನ್ ಮತ್ತು ಗೌರವ ಅತಿಥಿ ಜನಾರ್ಧನ್ ಉಪ್ಪುಂದ ಇವರ ಪರಿಚಯವನ್ನು ಉಪಾಧ್ಯಕ್ಷರಾದ ಶ್ರೀ ಬಿ.ಎಂ. ದೇವಾಡಿಗ ಮಾಡಿದರೆ, ಸಂಘದ ಅಧ್ಯಕ್ಷ ನಾಗರಾಜ್ ಡಿ ಪಡುಕೋಣೆ ಮತ್ತು ಸುಂದರ್ ಡಿ. ಅರೆಬೈಲ್ ಇವರ ಪರಿಚಯವನ್ನು ಲಕ್ಷ್ಮಣ್ ದೇವಾಡಿಗ, ಗೌರವ ಅಧ್ಯಕ್ಷ ಸುಬ್ಬ ಜಿ ದೇವಾಡಿಗರ ಪರಿಚಯವನ್ನು ಸುರೇಶ ದೇವಾಡಿಗ ಮಾಡಿದರು.
ಸಾಧಕರಾದ ಗುರುಕೃತಿಕ್ ದೇವಾಡಿಗರ ಪರಿಚಯವನ್ನು ರವೀಂದ್ರ ದೇವಾಡಿಗ, ಅಭಿನ್ ದೇವಾಡಿಗರ ಪರಿಚಯವನ್ನು ದಿನೇಶ್ ದೇವಾಡಿಗ, ಅಶ್ಮಿತಾ ದೇವಾಡಿಗರ ಪರಿಚಯವನ್ನು ಶ್ರೀಮತಿ ಪ್ರೇಮಾ ದೇವಾಡಿಗ, ಮಾನಸಾ ದೇವಾಡಿಗರ ಪರಿಚಯವನ್ನು ಸುಧೀರ್ ಬಿಜೂರ್ ಹಾಗೂ ಪನ್ಸುಲ್ ದೇವಾಡಿಗರ ಪರಿಚಯವನ್ನು ಸಂತೋಷ್ ದೇವಾಡಿಗ ಮಾಡಿದರು.
ಸನ್ಮಾನ ಸ್ವೀಕರಿಸಿದ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರ ಎನ್ ದೇವಾಡಿಗರ ಪರಿಚಯವನ್ನು ಗಣೇಶ್ ದೇವಾಡಿಗ, ರವೀಂದ್ರ ದೇವಾಡಿಗರ ಪರಿಚಯವನ್ನು ಚಂದ್ರ ದೇವಾಡಿಗ ಹಾಗೂ ಮಂಜುನಾಥ್ ದೇವಾಡಿಗರ ಪರಿಚಯವನ್ನು ಶ್ರೀಮತಿ ಸೀಮಾ ದೇವಾಡಿಗ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ (ಶೈಕ್ಷಣಿಕ ವರ್ಷದಲ್ಲಿ) ಅತ್ಯಧಿಕ ಅಂಕಗಳನ್ನು ಗಳಿಸಿದವರಿಗೆ ಹಾಗೂ ಸಾಂಸ್ಕೃತಿಕ ಸ್ಫರ್ಧಾ ವಿಜೇತರಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಅಂದು ಬೆಳಿಗ್ಗೆ ಸಮಾಜ ಬಾಂಧವರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಸಂಘದ ಸದಸ್ಯರಿಂದ ನೃತ್ಯ ವೈವಿಧ್ಯ ನೆರವೇರಿತು.
ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಸುಮಂಗಲ ಶೆಟ್ಟಿ ಮತ್ತು ಶ್ರೀಮತಿ ಉಷಾ ಶೆಟ್ಟಿ ಸಹಕರಿಸಿದರು. ಇವರಿಗೆ ಸಂಘದ ಪರವಾಗಿ ಅಧ್ಯಕ್ಷರು ಹೂಗುಚ್ಛ ನೀಡಿ ಗೌರವಿಸಿದರು.
ಬೆಳಗ್ಗಿನ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಮಹಿಳಾ ವಿಭಾಗದ ಸದಸ್ಯರಿಂದ ಹಳದಿ - ಕುಂಕುಮ ಕಾರ್ಯಕ್ರಮ ನೆರವೇರಿದವು.
ಸಭಾ ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಡಿಸೆಂಬರ್ 28 ರಂದು ನಡೆದ ಸ್ಪರ್ಧೆಗಳ ವಿಜೇತರುಗಳಿಗೆ ಹಾಗೂ ವಾರ್ಷಿಕೋತ್ಸವದ ದಿನದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಂತಿಮವಾಗಿ ಯುವ ವೇದಿಕೆಯ ಅಧ್ಯಕ್ಷ ಅವಿನಾಶ್ ಬಿ. ದೇವಾಡಿಗ ಇವರು ಸರ್ವರಿಗೂ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.