38ನೇ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಾಂಸ್ಕೃತಿಕ ಸ್ಪರ್ಧೆ


ದಿನಾಂಕ 4 ಜನವರಿ 2026 ರಂದು ಮತ್ತುಂಗದ ಮೈಸೂರ್ ಅಸೋಸಿಯೇಷನ್ ನಲ್ಲಿ ನಡೆಯಲಿರುವ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ 38ನೇ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ 28, ಡಿಸೇಂಬರ್ 2025 ರಂದು ಮೈಸೂರು ಅಸೋಸಿಯೇಷನ್ ನಲ್ಲಿ ನಡೆಯಿತು.


ಆ ಪ್ರಯುಕ್ತ ವಿವಿಧ ವಯೋಮನದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಚಿತ್ರಕಲೆ, ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಅಡುಗೆ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಮತ್ತು ಸದಸ್ಯರ ಕುಟುಂಬದವರು ಪಾಲ್ಗೊಂಡಿದ್ದರು.

ಸ್ಪರ್ಧೆಗಳು ಆಕರ್ಷಕವಾಗಿ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಿದರು.


ಈ ಎಲ್ಲ ಸ್ಪರ್ಧೆಗಳ ತೀರ್ಪುಗಾರರಾಗಿ ಸುಮಂಗಲಾ ಶೆಟ್ಟಿ ಮತ್ತು ಉಷಾ ಶೆಟ್ಟಿ ಸಹಕರಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ. ಎಂ. ದೇವಾಡಿಗ, ಕೋಷಾಧಿಕಾರಿ ಮಂಜುನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಚಂದ್ರ ದೇವಾಡಿಗ ಹಾಗೂ ಲಕ್ಷ್ಮಣ್ ದೇವಾಡಿಗ, ಮಹಿಳಾ  ವಿಭಾಗದ ಅಧ್ಯಕ್ಷೆ ಸುಶೀಲಾ ಎಸ್ ದೇವಾಡಿಗ, ಉಪಾಧ್ಯಕ್ಷೆ ಸೀತಾ ಎಂ. ದೇವಾಡಿಗ, ಕಾರ್ಯದರ್ಶಿ ಭಾಗ್ಯಶ್ರೀ ದೇವಾಡಿಗ, ಯುವ ವೇದಿಕೆಯ ಅಧ್ಯಕ್ಷರಾದ ಅವಿನಾಶ್ ದೇವಾಡಿಗ, ಕಾರ್ಯದರ್ಶಿ ಹರ್ಷವರ್ಧನ್ ದೇವಾಡಿಗ, ಜೊತೆ ಕಾರ್ಯದರ್ಶಿ ಮಂಜುಳಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.


ಇವತ್ತಿನ ಎಲ್ಲ ಸ್ಪರ್ಧಾ ವಿಜೇತರಿಗೆ ಸಂಘದ ವಾರ್ಷಿಕೋತ್ಸವದ ದಿನ ಬಹುಮಾನವನ್ನು ವಿತರಿಸಲಾಗುವುದು.





























































Next Post Previous Post
No Comment
Add Comment
comment url
sr7themes.eu.org