ವಾರ್ಷಿಕ ಕ್ರಿಡಾಕೂಟ ಹಾಗೂ DPL ಕ್ರಿಕೆಟ್‌ ಟೂರ್ನಮೆಂಟ್‌- 2025

ವಾರ್ಷಿಕ ಕ್ರಿಡಾಕೂಟ ಹಾಗೂ DPL  ಕ್ರಿಕೆಟ್‌ ಟೂರ್ನಮೆಂಟ್‌- 2025


ಮುಂಬೈಯ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಅದರ ಯುವ ವಿಭಾಗದ ನೇತೃತ್ವದಲ್ಲಿ ಸಮಾಜ ಬಾಂಧವರಿಗಾಗಿ ವಾರ್ಷಿಕ ಕ್ರೀಡಾಕೂಟ ಹಾಗೂ DPL 2025 ಕ್ರಿಕೆಟ್ ಟೂರ್ನಮೆಂಟ್ ಅನ್ನು ಡಿಸೆಂಬರ್ 14ರಂದು ಗುರುನಾನಕ್ ಕಾಲೇಜು ಮೈದಾನ, ಜಿ.ಟಿ.ಬಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕ್ರೀಡಾಕೂಟವನ್ನು ಸಂಘದ ಅಧ್ಯಕ್ಷರಾದ ನಾಗರಾಜ್ ಡಿ. ಪಡುಕೋಣೆಯವರು ಉದ್ಘಾಟಿಸಲಿದ್ದಾರೆ.

ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ವಯೋಮಿತಿಯವರಿಗಾಗಿ ಹಾಗೂ ಚಿಕ್ಕ ಮಕ್ಕಳಿಗಾಗಿ ಹಲವು ಆಟೋಟ ಸ್ಪರ್ಧೆಗಳು ಏರ್ಪಡಿಸಲಾಗಿದೆ. ಕ್ರಿಕೆಟ್ ಟೂರ್ನಮೆಂಟ್ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಈಗಾಗಲೇ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆ.

ರನ್ನಿಂಗ್ ರೇಸ್, ಗುಂಡು ಎಸೆತ, ಹಗ್ಗಜಗ್ಗಾಟ, ಗೋಣಿಚೀಲದ ಓಟ ಇತ್ಯಾದಿ ಸ್ಪರ್ಧೆಗಳು ನಡೆಯಲಿರುವುದಲ್ಲದೆ, ಹಿರಿಯರಿಗಾಗಿ ಕೆಲವು ವಿಶೇಷ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 8 ಗಂಟೆಯಿಂದ ಕ್ರೀಡಾಕೂಟ ಆರಂಭವಾಗಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷ ಶ್ರೀ ನಾಗರಾಜ್ ಡಿ. ಪಡುಕೋಣೆ, ಗೌರವಾಧ್ಯಕ್ಷ ಶ್ರೀ ಸುಬ್ಬ ಜಿ. ದೇವಾಡಿಗ, ಗೌ. ಉಪಾಧ್ಯಕ್ಷ ಶ್ರೀ ಅಣ್ಣಯ್ಯ ಶೇರಿಗಾರ್, ಉಪಾಧ್ಯಕ್ಷರುಗಳಾದ ಶ್ರೀ ಬಿ.ಎಂ. ದೇವಾಡಿಗ ಹಾಗೂ ಶ್ರೀ ಭಾಸ್ಕರ್ ದೇವಾಡಿಗ, ಗೌ. ಪ್ರಧಾನ ಕಾರ್ಯದರ್ಶಿ ಶ್ರೀ ಉಮೇಶ್ ಆರ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಶೀಲ ಎಸ್. ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಅವಿನಾಶ್ ಬಿ. ದೇವಾಡಿಗ ಹಾಗೂ ಸಂಘದ ಇತರೆ ಪದಾಧಿಕಾರಿಗಳು ವಿನಂತಿಸಿದ್ದಾರೆ.

Next Post Previous Post
No Comment
Add Comment
comment url
sr7themes.eu.org