ಯುವ ವೇದಿಕೆ ನೇತೃತ್ವದಲ್ಲಿ ವಾರ್ಷಿಕ ವಿಹಾರಕೂಟ - 2025
ಮುಂಬಯಿ : ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಇದರ ಯುವ ವೇದಿಕೆ ನೇತೃತ್ವದಲ್ಲಿ ಅಕ್ಟೊಬರ್ 26 , 2025 ರಂದು ಒಂದು ದಿನದ ವಾರ್ಷಿಕ ವಿಹಾರಕೂಟವನ್ನು ಹಮ್ಮಿಕೊಂಡು ಯಶಸ್ವಿಯಾಗಿಸಿತು.
ಥಾಣೆಯ BK Water Park ನಲ್ಲಿ ಆಯೋಜಿಸಲಾದ ಈ ವಿಹಾರಕೂಟಕ್ಕೆ ದಾದರ್ ನಿಂದ ಬಸ್ ಮುಖಾಂತರ ಬೆಳಿಗ್ಗೆ 7 .45 ಕ್ಕೆ ಹೊರಟು 9 .45 ರ ಸುಮಾರಿಗೆ ವಾಟರ್ ಪಾರ್ಕ್ ತಲುಪಲಾಯಿತು. ಬಸ್ ನಲ್ಲಿ ಮಾರ್ಗ ಮಧ್ಯದಲ್ಲಿ ವಿವಿಧ ವಿನೋದಮಯ games ಗಳನ್ನು ಆಡಿಸಲಾಯಿತು.
ಬೆಳಿಗ್ಗೆಯ ಉಪಹಾರ ಸೇವಿಸಿ ಭಾಗವಹಿಸಿದ ಎಲ್ಲರೂ ವಿಹಾರಕೂಟದ ಮನೋರಂಜನೆ ಪಡೆದರು. ವಿಹಾರಕೂಟದಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ಭೋಜನ ನಂತರ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ರೀತಿಯ ಆಟೋಟಗಳನ್ನು ಯುವ ವೇದಿಕೆಯವರು ಏರ್ಪಡಿಸಿದ್ದು ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಯಿತು.ಅಲ್ಲದೆ ವಿಹಾರಕೂಟದ ನೆನಪಿಗಾಗಿ ಭಾಗವಹಿಸಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ಹಾಗೂ ಐಸ್ಕ್ರೀಮ್ ನೀಡಿ ಸ್ಮರಣೀಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಆರ್ ದೇವಾಡಿಗ, ಯುವ ವೇದಿಕೆಯ ಅಧ್ಯಕ್ಷ ಅವಿನಾಶ್ ಬಿ. ದೇವಾಡಿಗ, ಕಾರ್ಯದರ್ಶಿ ಹರ್ಷವರ್ಧನ್ ದೇವಾಡಿಗ, ಯುವ ವಿಭಾಗದ ಮಾಜಿ ಅಧ್ಯಕ್ಷ ರವೀಂದ್ರ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲ ಎಸ್ ದೇವಾಡಿಗ, ಕಾರ್ಯಕಾರಿ ಸಮಿತಿಯ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ದೇವಾಡಿಗ, ಜೊತೆ ಕೋಶಾಧಿಕಾರಿ ದಿನೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದು ವಿಹಾರಕೂಟವನ್ನು ಯಶಸ್ವಿಗೊಳಿಸಿದರು.















































