ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ : ಮಹಿಳಾ ವಿಭಾಗದ ನೇತೃತ್ವದಲ್ಲಿ ಶಾರದಾ ಪೂಜೆ.
ಮುಂಬಯಿ : ಸೆಪ್ಟೆಂಬರ್ 28 ರವಿವಾರದಂದು ಸಂಘದ ನೂತನವಾಗಿ ಉದ್ಘಾಟನೆಗೊಂಡ ಕಚೇರಿ ಲಂಬಾ ಬಿಲ್ಡಿಂಗ್ ಮಾಟುಂಗ ಇಲ್ಲಿ ಮಹಿಳಾ ವಿಭಾಗ ನೇತೃತ್ವದಲ್ಲಿ ನವರಾತ್ರಿ ಶುಭಾಶಯಗಳು ಸಂದರ್ಭದಲ್ಲಿ ಶಾರದಾ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು.
ಸಂಘದ ಉಪಾಧ್ಯಕ್ಷರಾದ ಬಿ. ಮಂಜು ದೇವಾಡಿಗರು ಪೂಜಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾಗಿರುವ ಸುಬ್ಬ ಜಿ. ದೇವಾಡಿಗ, ನೂತನ ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ ಆರ್ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲ ಎಸ್ ದೇವಾಡಿಗ, ಉಪಾಧ್ಯಕ್ಷೆ ಸೀತಾ ಎಂ. ದೇವಾಡಿಗ, ಕಾರ್ಯದರ್ಶಿ ಭಾಗ್ಯಶ್ರೀ ದೇವಾಡಿಗ, ಸಂಘದ ಜೊತೆ ಕಾರ್ಯದರ್ಶಿ ಲಕ್ಷ್ಮಣ ದೇವಾಡಿಗ, ಕೋಶಾಧಿಕಾರಿ ಮಂಜುನಾಥ್ ದೇವಾಡಿಗ, ಜೊತೆ ಕೋಶಾಧಿಕಾರಿ ದಿನೇಶ್ ದೇವಾಡಿಗ, ಯುವ ವೇದಿಕೆಯ ನೂತನ ಅಧ್ಯಕ್ಷರಾದ ಅವಿನಾಶ್ ದೇವಾಡಿಗ, ಕಾರ್ಯದರ್ಶಿ ಹರ್ಷವರ್ಧನ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಮಂಜುಳಾ ಹಾಗೂ ಪ್ರಿಯ ದೇವಾಡಿಗ, ಕೋಶಾಧಿಕಾರಿ ಸವಿತಾ ದೇವಾಡಿಗ ಮತ್ತು ಜೊತೆ ಕೋಶಾಧಿಕಾರಿ ಸುಶೀಲ ದೇವಾಡಿಗ ಹಾಗೂ ಮತ್ತಿತರರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



