ದೇವಾಡಿಗ ವೆಲ್ಫೇರ್ ಆಸೋಸಿಯೇಶನ್ (ರಿ.) ಮುಂಬಯಿ 2025-28 ನೇ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

 

2025/10/08

ಮುಂಬಯಿ : ದೇವಾಡಿಗ ವೆಲ್ಫೇರ್ ಅಶೋಶಿಯೇಷನ್ (R) ಮುಂಬಯಿ ಇದರ ನೂತನ ಕಾರ್ಯಕಾರಿ ಸದಸ್ಯರ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಮೈಸೂರು ಅಸೂಸಿಯೇಷನ್ ನಲ್ಲಿ ನಡೆದ ಸಮಿತಿ ಸಭೆಯಲ್ಲಿ ನಡೆಯಿತು.

ಆ. 24 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ್ ಡಿ ಪಡುಕೋಣೆಯವರು ಆಯ್ಕೆಯಾಗಿದ್ದರೆ, ನಿಕಟಪೂರ್ವ ಅಧ್ಯಕ್ಷರಾಗಿರುವ ಸುಬ್ಬ ಜಿ. ದೇವಾಡಿಗ ಅವರು ಗೌರವ ಅಧ್ಯಕ್ಷರಾಗಿ, ಅಣ್ಣಯ್ಯ ಶೇರಿಗಾರ್ ಗೌರವ ಉಪಾಧ್ಯಕ್ಷರಾಗಿ ಹಾಗೂ ಬಿ. ಮಂಜು ದೇವಾಡಿಗ ಮತ್ತು ಭಾಸ್ಕರ್ ದೇವಾಡಿಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇತ್ತೀಚೆಗೆ ನಡೆದ ಸಭೆಯಲ್ಲಿ ಇನ್ನುಳಿದ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಆರ್. ದೇವಾಡಿಗ ಇವರು ಆಯ್ಕೆಯಾದರು.

ಜೊತೆ ಕಾರ್ಯದರ್ಶಿಯಾಗಿ ಚಂದ್ರ ಎಂ. ದೇವಾಡಿಗ & ಲಕ್ಷ್ಮಣ್ ದೇವಾಡಿಗ,

ಕೋಶಾಧಿಕಾರಿಯಾಗಿ  ಮಂಜುನಾಥ್ ದೇವಾಡಿಗ,  ಜೊತೆ ಕೋಶಾಧಿಕಾರಿಯಾಗಿ ದಿನೇಶ್ ದೇವಾಡಿಗ  ಇವರುಗಳು ಆಯ್ಕೆಯಾದರು.


ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸುಶೀಲಾ ಎಸ್. ದೇವಾಡಿಗ

ಮಹಿಳಾ ವಿಭಾಗಕ್ಕೂ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಸುಶೀಲಾ ಎಸ್ ದೇವಾಡಿಗ ಆಯ್ಕೆಯಾದರೆ,

ಕಾರ್ಯದರ್ಶಿಯಾಗಿ ಭಾಗ್ಯಶ್ರೀ ದೇವಾಡಿಗ ಆಯ್ಕೆಯಾದರು.

ಉಪಾಧ್ಯಕ್ಷೆಯಾಗಿ ಸೀತಾ ಎಂ ದೇವಾಡಿಗ,
ಜೊತೆ ಕಾರ್ಯದರ್ಶಿಯಾಗಿ ಪ್ರಿಯಾ ದೇವಾಡಿಗ,
ಕೋಶಾಧಿಕಾರಿಯಾಗಿ ಸವಿತಾ ಎ. ದೇವಾಡಿಗ,
ಜೊತೆ ಕೋಶಾಧಿಕಾರಿಯಾಗಿ  ಸುಶೀಲ ದೇವಾಡಿಗ ಇವರುಗಳು ಆಯ್ಕೆಯಾಗಿದ್ದಾರೆ.


ಯುವ ವೇದಿಕೆ ಅಧ್ಯಕ್ಷರಾಗಿ ಅವಿನಾಶ್ ಬಿ. ದೇವಾಡಿಗ


ಯುವ ವೇದಿಕೆ ಅಧ್ಯಕ್ಷರಾಗಿ ಅವಿನಾಶ್ ಬಿ. ದೇವಾಡಿಗ ಆಯ್ಕೆಯಾದರು.


ಕಾರ್ಯದರ್ಶಿಯಾಗಿ ಹರ್ಷವರ್ಧನ್ ದೇವಾಡಿಗ ಆಯ್ಕೆಯಾದರೆ, ಜೊತೆ ಕಾರ್ಯದರ್ಶಿಯಾಗಿ ಮಂಜುಳಾ ದೇವಾಡಿಗ  ಆಯ್ಕೆಯಾದರು.

 

Next Post Previous Post
No Comment
Add Comment
comment url
sr7themes.eu.org