ದೇವಾಡಿಗ ವೆಲ್ಫೇರ್ ಅಸೂಸಿಯೇಷನ್ ಮುಂಬಯಿ ; 38ನೇ ವಾರ್ಷಿಕ ಮಹಾಸಭೆ

 

ಪುನರ್ ನಿರ್ಮಾಣಗೊಂಡ ಸಂಘದ ನೂತನ ಕಚೇರಿಯ ಉದ್ಘಾಟನೆ

2025/09/01

ಮುಂಬಯಿ, ಆ. 29 - ಮುಂಬಯಿಯ ಪ್ರತಿಷ್ಠಿತ ಸಂಘಸಂಸ್ಥೆಗಳಲ್ಲೊಂದಾದ ದೇವಾಡಿಗ ವೆಲ್‌ಫೇ‌ರ್ ಅಸೋಸಿಯೇಶನ್ ಮುಂಬಯಿ ಇದರ 38ನೇ ವಾರ್ಷಿಕ ಮಹಾಸಭೆಯು ಆ. 24 ರಂದು ಮಾಟುಂಗಾದ ಸಂಘದ ಕಚೇರಿಯಲ್ಲಿ ಜರಗಿತು.ಅಂದು ಬೆಳಿಗ್ಗೆ 10.30ಕ್ಕೆ ಸಂಘದ ಪುನರ್ ನಿರ್ಮಾಣಗೊಂಡ ನೂತನ ಕಚೇರಿಯನ್ನು ವಾಸ್ತುಪೂಜೆ, ಗಣಹೋಮ ಮತ್ತುಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಉದ್ಘಾಟನೆ ಮಾಡಲಾಯಿತು. ಈ ಪೂಜಾ ಕಾರ್ಯಕ್ರಮವನ್ನು ಶ್ರೀಮತಿ ಸುಶೀಲಾ ಎಸ್. ದೇವಾಡಿಗ ಮತ್ತು ಸಣ್ಣಯ್ಯ ದೇವಾಡಿಗ ದಂಪತಿಗಳು ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗರು ಸಂಘದ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟನೆ ಮಾಡಿ ಸಮಾಜ ಬಾಂಧವರಿಗೆ ಅರ್ಪಣೆ ಮಾಡಿದರು. ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಂಘದ 38ನೇ ವಾರ್ಷಿಕ ಮಹಾಸಭೆ ನಡೆಯಿತು. ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗರ ಅಧ್ಯಕ್ಷತೆಯಲ್ಲಿ ಮಹಾಸಭೆಯು ಜರಗಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ಗೌರವ ಅಧ್ಯಕ್ಷರಾದ ನಾಗರಾಜ್ ಡಿ. ಪಡುಕೋಣೆ, ಗೌ.ಪ್ರ. ಕಾರ್ಯದರ್ಶಿ ಬಿ.ಎಂ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ಉಪಸ್ಥಿತರಿದ್ದರು. ಕು. ಭಾಗ್ಯಶ್ರೀ ದೇವಾಡಿಗರ ಪ್ರಾರ್ಥನೆಯೊಂದಿಗೆ ಮಹಾಸಭೆಯು ಆರಂಭಗೊಂಡಿತು.

37ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿ ಮತ್ತು ಗತ ವರ್ಷದ ವಾರ್ಷಿಕ ವರದಿಯನ್ನು ಸುರೇಶ್ ಕೆ. ದೇವಾಡಿಗ ವಾಚಿಸಿದರು. 2024-25ನೇ ಸಾಲಿನ ಲೆಕ್ಕಪತ್ರ ವರದಿಯನ್ನು ಕೋಶಾಧಿಕಾರಿ ಮಂಜುನಾಥ ದೇವಾಡಿಗ ಮಂಡಿಸಿದರು. ಸಂಘದ ಸ್ಥಾಪಕ ಮತ್ತು ಹಿರಿಯ ಸದಸ್ಯರಾದ ಜಿ.ಎ. ದೇವಾಡಿಗರು ಸಂಘದ ಕಚೇರಿಯ ಹಿನ್ನೆಲೆ ಮತ್ತು ಅದಕ್ಕೆ ಪರಿಶ್ರಮಿಸಿದ ತಮ್ಮ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ್ ಡಿ. ಪಡುಕೋಣೆ ಆಯ್ಕೆ

ಮಹಾಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಹೆಸರಾಂತ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ನಾಗರಾಜ್ ಡಿ. ಪಡುಕೋಣೆ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರನ್ನಾಗಿ ನಿರ್ಗಮನ ಅಧ್ಯಕ್ಷ ಸುಬ್ಬ ಜಿ. ದೇವಾಡಿಗರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಅಣ್ಣಯ್ಯ ಶೇರಿಗಾ‌ರ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

ಮಹಾಸಭೆಯಲ್ಲಿ ಎಲ್‌ಜಿ ಫೌಂಡೇಶನ್ ಮತ್ತು ದೇವಾಡಿಗ ವೆಲ್‌ಫೇರ್ ಅಸೋಸಿಯೇಶನ್ ಜಂಟಿಯಾಗಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಸುಮಾರು 47 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸುಮಾರು 28 ವರ್ಷಗಳ ಕಾಲ ನಿರಂತರವಾಗಿ ಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಸೇವೆ ಸಲ್ಲಿಸಿ ಸಂಘದ ಆರ್ಥಿಕತೆಯನ್ನು ವೃದ್ಧಿಸಿ, ತನು-ಮನ-ಧನ 'ಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಸಂಘದ ಕಚೇರಿಯನ್ನು ಸಮಾಜಕ್ಕೆ ಧಾರೆಎರೆದು ಕೊಟ್ಟ ಸುಬ್ಬ ಜಿ. ದೇವಾಡಿಗರ ಕೊಡುಗೆಯನ್ನು ಪರಿಗಣಿಸಿ ಅಧ್ಯಕ್ಷರಾಗಿ ನಿವೃತ್ತಿ ಹೊಂದಿದ ಇವರಿಗೆ ಸಮಾಜ ಬಾಂಧವರ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.

ನೂತನ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ನಾಗರಾಜ್ ಡಿ. ಪಡುಕೋಣೆಯವರು, ಬೇರೆ ಸಂಘಗಳಿಗೆ ಹೊಲಿಸಿದರೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತದೆ. ಆದರೆ, ಇಲ್ಲಿ ಹಾಗಿಲ್ಲ. ತಾವಾಗಿಯೇ ಮುಂದೆ ಬಂದು ಆಸಕ್ತಿ ವಹಿಸಿ ಕೆಲಸ ಮಾಡಬಹುದು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದರ ಜೊತೆಗೆ ವೃತ್ತಿ ಕೌಶಲ್ಯ (skil develophment) ನೀಡುವುದರ ಕುರಿತು ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಸಂಘಗಳು ಕಾರ್ಯಪ್ರವೃತ್ತರಾಗಿರುವುದ್ದುನು ಸ್ಮರಿಸಬಹುದು ಎಂದಲ್ಲದೆ, ನಿ ಧೂತನವಾಗಿ ಉದ್ಯೋಗ ಸೃಷ್ಟಿಸಲು, ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಸಾಲ ಸೌಲಭ್ಯಗಳನ್ನು ಪಡೆದು ಉದ್ಯೋಗದಲ್ಲಿ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನೂತನವಾಗಿ ಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಾಗರಾಜ್ ಡಿ. ಪಡುಕೋಣೆಯವರನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು. ಮಹಾಸಭೆಯ ನಿರೂಪಣೆ, ವಂದನಾರ್ಪಣೆಯನ್ನು ಗೌ.ಪ್ರ. ಕಾರ್ಯದರ್ಶಿ ಬಿ.ಎಂ. ದೇವಾಡಿಗ ಮಾಡಿದರು. ಮಧ್ಯಾಹ್ನ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

 
 
Next Post Previous Post
No Comment
Add Comment
comment url
sr7themes.eu.org