38ನೇ ವಾರ್ಷಿಕ ಮಹಾಸಭೆ ಮತ್ತು ನೂತನವಾಗಿ ಮರುನಿರ್ಮಾಣಗೊಂಡ ಕಚೇರಿಯಲ್ಲಿ ವಾಸ್ತುಪೂಜೆ.

 
2025/08/23

ಮುಂಬೈ, ಆಗಸ್ಟ್ 24, 2025: ದೇವಾಡಿಗ ಸಮುದಾಯದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅಗ್ರಗಣ್ಯವಾದ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ತನ್ನ 38ನೇ ವಾರ್ಷಿಕ ಮಹಾಸಭೆಯನ್ನು ಮುಂಬರುವ ಆಗಸ್ಟ್ 24, 2025 ರಂದು ಅದ್ದೂರಿಯಾಗಿ ಆಯೋಜಿಸಿದೆ.
ಮರುನಿರ್ಮಾಣಗೊಂಡ ಕಚೇರಿಯಲ್ಲಿ ಪೂಜೆಗಳು ಅದೇ ದಿನ ಬೆಳಿಗ್ಗೆ 10.30ಕ್ಕೆ ಸಂಘದ ನೂತನವಾಗಿ ಮರುನಿರ್ಮಾಣಗೊಂಡ ಕಚೇರಿಯಲ್ಲಿ ವಾಸ್ತುಪೂಜೆ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ಭಕ್ತಿಭಾವದಿಂದ ನೆರವೇರಲಿದೆ. ಈ ಹಿನ್ನಲೆಯಲ್ಲಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿವೇತನ ವಿತರಣೆ :

ಮಧ್ಯಾಹ್ನ 2.00 ಗಂಟೆಗೆ ಸಂಘದ ಕಚೇರಿಯಾದ Flat No. 805, ಲಾಂಬಾ ಬಿಲ್ಡಿಂಗ್ (ಪಾರ್ಕ್ ವೇ), ಸರ್ ಬಾಲಚಂದ್ರ ರೋಡ್, ಮಟುಂಗಾ, ಮುಂಬೈಯಲ್ಲಿ ಮಹಾಸಭೆಯು ನಡೆಯಲಿದೆ. ಈ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕೂಡ ಜರುಗಲಿದೆ.

ಸಮಾಜ ಬಾಂಧವರಿಗೆ ಆಹ್ವಾನ :

ಈ  ಕಾರ್ಯಕ್ರಮಗಳಲ್ಲಿ ಸಮಾಜದ ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹೃತ್ಪೂರ್ವಕ ವಿನಂತಿ ಮಾಡಿದ್ದಾರೆ.


 
 
Next Post Previous Post
No Comment
Add Comment
comment url
sr7themes.eu.org