32ನೇ ವಾರ್ಷಿಕೋತ್ಸವ : ದೇವಾಡಿಗ ಸಮುದಾಯದಲ್ಲಿ ಹುಟ್ಟಿರುವುದೇ ಹೆಮ್ಮೆ : ರಮೇಶ್ ದೇವಾಡಿಗ ವಂಡ್ಸೆ.
2020/01/25/
ದೇವಾಡಿಗ ಸಮಾಜದ ಪ್ರತಿಷ್ಠಿತ ಸಂಸ್ಥೆ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್, ಮುಂಬೈ ಇದರ 32 ನೇ ವಾರ್ಷಿಕೋತ್ಸವ ಸಮಾರಂಭವು ಜನವರಿ 19, 2020 ರಂದು ವಡಾಲದ ಎನ್ .ಕೆ .ಇ . ಎಸ್ ಹೈಸ್ಕೂಲ್ ಸಭಾಗ್ರಹ ಇಲ್ಲಿ ನೆರವೇರಿತು.
ಸಮಾರಂಭವನ್ನು ಮುಖ್ಯ ಅತಿಥಿ ಎನ್. ರಮೇಶ್ ದೇವಾಡಿಗ ವಂಡ್ಸೆ (ಕೈಗಾರಿಕೋದ್ಯಮಿ ಮತ್ತು ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕೆಗಳ ವಿಶೇಷ ಆಹ್ವಾನಿತರು) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ನಾರಾಯಣ ದೇವಾಡಿಗ ಬಡಾಕೆರೆ (ಪ್ರಾದೇಶಿಕ ಹಣಕಾಸು ವ್ಯವಸ್ಥಾಪಕ - NES Global talent bangalore ) ಹಾಗೂ ಸಂಘದ ಗೌ.ಅಧ್ಯಕ್ಷರಾದ ಸುರೇಶ ಡಿ. ಪಡುಕೋಣೆ, ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ಗೌ.ಉಪಾಧ್ಯಕ್ಷರಾದ ಅಣ್ಣಯ್ಯ ಶೇರಿಗಾರ್ ಮತ್ತು ನಾಗರಾಜ್ ಡಿ. ಪಡುಕೋಣೆ, ಗೌ. ಪ್ರ.ಕಾರ್ಯದರ್ಶಿ ಶ್ರೀ. ಬಿ.ಎಂ. ದೇವಾಡಿಗ, ಗೌ. ಜೊತೆ ಕಾರ್ಯದರ್ಶಿ ಪ್ರಭಾಕರ್ ದೇವಾಡಿಗ, ಗೌ. ಕೋಶಾಧಿಕಾರಿ ಮಂಜುನಾಥ್ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭವನ್ನು ಉದ್ಘಾಟಿಸಿದ ಮುಖ್ಯ ಅಥಿತಿ ಎನ್. ರಮೇಶ್ ದೇವಾಡಿಗ ವಂಡ್ಸೆ ಮಾತನಾಡಿ, ನಾನು ಸಂಮಾರಂಭಗಳಿಗೆ ಹೋಗುವುದು ಸನ್ಮಾನ ಸ್ವೀಕರಿಸುವುದು ತುಂಬಾ ಕಡಿಮೆ. ಇವತ್ತಿನ ಸನ್ಮಾನ ನನ್ನ ಮೊದಲನೇ ಸನ್ಮಾನವಾಗಿದ್ದು ತುಂಬಾ ಹೆಮ್ಮೆಯೆನಿಸುತ್ತಿದ್ದು ಇದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನೂ ಕೂಡ ದೇವಾಡಿಗ ಸಮಾಜದ ಕಾರ್ಯಕರ್ತನಾಗಿದ್ದು, ದೇವಾಡಿಗ ಸಮುದಾಯದಲ್ಲಿ ಹುಟ್ಟಿರುವುದೇ ನನ್ನ ಹೆಮ್ಮೆ. ಯಾವುದೇ ಸಮುದಾಯದವರಿಗೆ ಕಮ್ಮಿ ಇಲ್ಲ ಎಂಬಂತೆ ಅಣ್ಣಯ್ಯ ಶೇರಿಗಾರ್ ಅವರ ಮುಂದಾಳತ್ವದಲ್ಲಿ ಕಟ್ಟಿದ ಶ್ರೀ ಏಕನಾಥೇಶ್ವರಿ ದೇವಸ್ಥಾನ ನಮ್ಮ ದೇವಾಡಿಗ ಸಮುದಾಯ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಅಲ್ಲದೆ, ಸಂಘ ಸಂಸ್ಥೆಗಳ ಮೂಲಕ ಸಮಾಜದ ಸಂಘಟನೆ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿ, ನಿಮ್ಮ ಸಂಘಕ್ಕೆ ಎಲ್ಲಾ ರೀತಿಯ ಬೆಂಬಲ- ಪ್ರೋತ್ಸಹವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ನಾರಾಯಣ ದೇವಾಡಿಗ ಬಡಾಕೆರೆ ಮಾತನಾಡುತ್ತ, ದೇವಾಡಿಗ ಸಮುದಾಯದ ಘಟಾನುಘಟಿ ಸಾಧಕರ ನಡುವೆ ನನ್ನನ್ನು ಗುರುತಿಸಿದ್ದು ನನಗೆ ತುಂಬಾ ಅಭಿಮಾನ ಉಂಟುಮಾಡಿದೆ. ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘವು ಸಂಘ ಸಂಸ್ಥೆಗಳಲ್ಲಿ ನನಗೆ ಮಾತೃ ಸಂಸ್ಥೆಯಾಗಿದೆ. ಆರಂಭದಲ್ಲಿ ನಾನೂ ಕೂಡ ಈ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಮೆಲುಕು ಹಾಕಿ, ಇಳೀಯ ಅನುಭವವೇ ನನಗೆ ದುಬಾಯಿ ಯಲ್ಲಿ ಕುಂದಾಪುರ ದೇವಾಡಿಗ ಮಿತ್ರ (ಕದಂ) ಈ ಸಂಸ್ಥೆಯ ಸ್ಥಾಪಕ ಸದಸ್ಯನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಯಿತು ಎಂದರು. ದೇವಾಡಿಗ ಸಮುದಾಯಕ್ಕೆ ನಾವೆಲ್ಲರೂ ನಮ್ಮಿಂದಾದಷ್ಟು ಸಹಾಯ - ಸಹಕಾರ ಮಾಡೋಣ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಸಂಘದ ಗೌ. ಉಪಾಧ್ಯಕ್ಷರಾದ ಅಣ್ಣಯ್ಯ ಶೇರಿಗಾರ್ ಮಾತನಾಡಿ, ಹಿರಿ ಕಿರಿಯರು ಎನ್ನದೆ ಎಲ್ಲರು ಅನ್ಯೋನ್ಯತೆ ಇಂದ ಸಂಘದ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಕರೆನೀಡಿದರು. ಸಂಘದಿಂದ ನಮಗೇನು ಲಾಭ ಎನ್ನುವ ಬದಲು ನಮ್ಮಿಂದ ಸಂಘಕ್ಕೇನು ಕೊಡುಗೆ
ನೀಡಬಹುದು ಎನ್ನುವ ಭಾವನೆ ಬೆಳೆಸಿಕೊಳ್ಳಿ ಎಂದರು. ಶ್ರೀ ಏಕನಾಥೇಶ್ವರಿ ದೇವಸ್ಥಾನದ ಬಗ್ಗೆ ತಿಳಿಸುತ್ತ, ಮುಂಬರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಸ್ತ ದೇವಾಡಿಗ ಬಾಂಧವರು ಭಾಗಿಯಾಗಬೇಕೆಂದು ಮನವಿ ಮಾಡಿದರು. ದೇವಾಲಯವನ್ನು ಉಳಿಸಿ ಬೆಳೆಸುವಲ್ಲಿ ತಾವೆಲ್ಲರೂ ಮುಂದುವರಿಯಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಗೌ. ಅಧ್ಯಕ್ಷರಾದ ಸುರೇಶ ಪಡುಕೋಣೆ ಅಧ್ಯಕ್ಷೀಯ ಭಾಷಣದಲ್ಲಿ ಸಮಾಜದ ಯುವಕರಿಗೆ ಮುಂದೆ ಬಂದು ಸಮಾಜಪರ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಮಾನವರಿಕೆಮಾಡಿಕೊಟ್ಟರು. ಸಂಘದ ಸರ್ವತೋಮುಖ ಬೆಳವಣಿಗೆಗಾಗಿ ಪ್ರತಿಯೊಬ್ಬ ಸದಸ್ಯರು ತಮ್ಮ ಯೋಗದಾನ ನೀಡಿ ಸಹಕರಿಸಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಚಟುವಟಿಕೆಯಲ್ಲಿ ಸುಧೀರ್ಘ ಕಾಲದಿಂದ ಸೇವೆ ಸಲ್ಲಿಸಿ,ಪದಾಧಿಕಾರಿಗಳಾಗಿ ಸಕ್ರಿಯವಾಗಿ ದುಡಿಯುತ್ತಿರುವ ಪ್ರಭಾಕರ್ ದೇವಾಡಿಗ ಹಾಗೂ ಸುರೇಶ ಕೆ. ದೇವಾಡಿಗರನ್ನು ಸನ್ಮಾನಿಸಲಾಯಿತು.ಇತ್ತೀಚಿಗೆ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಎಂ.ಫಿಲ್ ಪದವಿ ಪಡೆದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಶೀಲಾ ಎಸ್. ದೇವಾಡಿಗ ಅವರನ್ನು ಸಂಘದ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೆಯೇ, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಶಾಲ್ ಕೆ. ದೇವಾಡಿಗ ಇವರನ್ನು ವೇದಿಕೆಯ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಕು. ಅರ್ಣವಿ ಜೆ ದೇವಾಡಿಗ ಇವರ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸ್ಪರ್ಧಾ ವಿಜೇತರಿಗೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಅಂದು ಬೆಳಿಗ್ಗೆ ದೇವಾಡಿಗ ಬಾಂಧವರಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಹಿಳಾ ವಿಭಾಗದ ಸದಸ್ಯರ ಪ್ರಾರ್ಥನೆಯೊಂದಿಗೆ ಸಾಂಸ್ಕ್ರತಿಕ ಕಾರ್ಯಕ್ರಮ ಆರಂಭಗೊಂಡಿತು. ವಿವಿಧ ವಯೋಮಿತಿಯ ಸ್ಪರ್ಧಾಳುಗಳಿಂದ ವ್ಯವಿಧ್ಯಮಯಯವಾಗಿ ಮೂಡಿಬಂದವು.ಸ್ಪರ್ಧೆಯ ತೀರ್ಪುಗಾರರಾಗಿ ಗೀತಾ ...., ರಜನಿ ಕುಲಕರ್ಣಿ, ಓಂಕಾರ ಭಾಗವತ್ ಇವರುಗಳು ಸಹಕರಿಸಿದರು. ಇವರಿಗೆ ಸಂಘದ ಅಧ್ಯಕ್ಷರು ಹೂಗುಚ್ಛ ನೀಡಿ ಅಭಿನಂದಿಸಿದರು.
ಸಂಘದ ಕಾರ್ಯಕಲಾಪಗಳ ಚುಟುಕು ಮಾಹಿತಿಯನ್ನು ಗೌ.ಪ್ರ. ಕಾರ್ಯದರ್ಶಿ ಬಿ.ಎಂ. ದೇವಾಡಿಗ ಅವರು ಸಭಿಕರಿಗೆ ತಿಳಿಸಿದರು.ಸಂಘದ ಮಾಜಿ ಅಧ್ಯಕ್ಷರಾದ ಜಿ.ಎ. ದೇವಾಡಿಗ ಅವರು ಅಥಿತಿಗಳ ಪರಿಚಯ ಮಾಡಿದರು. ಮಹಿಳಾ ವಿಭಾಗದ ಕಾರ್ಯಚಟುವಟಿಕೆಯ ಬಗ್ಗೆ ಅಧ್ಯಕ್ಷೆ ಸೀತ ಎಂ. ದೇವಾಡಿಗ ತಿಳಿಸಿದರೆ, ಯುವ ವಿಭಾಗದ ಕಾರ್ಯಚಟುವಟಿಕೆಯ ಬಗ್ಗೆ ಅಧ್ಯಕ್ಷ ರವೀಂದ್ರ ದೇವಾಡಿಗ ತಿಳಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮದ ನಂತರ ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಿತು. ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ಅವರು ಎಲ್ಲರನ್ನು ಸ್ವಾಗತಿಸಿದರು.ಸಾಂಸ್ಕ್ರತಿಕ ಕಾರ್ಯಕ್ರಮದ ನಿರೂಪಣೆಯನ್ನು ಅಶೋಕ್ ಕೆ. ದೇವಾಡಿಗ, ಸುರೇಶ ಕೆ.ದೇವಾಡಿಗ, ಸುಶೀಲಾ ದೇವಾಡಿಗ, ಚಂದ್ರಮತಿ ದೇವಾಡಿಗ, ಪ್ರೇಮಾ ದೇವಾಡಿಗ ಮಾಡಿದರೆ, ಸಭಾಕಾರ್ಯಕ್ರಮವನ್ನು ಬಿ.ಎಂ. ದೇವಾಡಿಗ ನಿರೂಪಿಸಿದರು. ಅಂತಿಮವಾಗಿ ಪ್ರಭಾಕರ ದೇವಾಡಿಗರು ವಂದನಾರ್ಪಣೆ ಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮ ದಂಗವಾಗಿ
ಉಪಹಾರ ಹಾಗು ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
