ದೇವಾಡಿಗ ಕ್ರಿಕೆಟ್ ಟೂರ್ನಮೆಂಟ್ ಶ್ರೀ ಆದ್ಯಂತ-೧೧ ವಿನ್ನರ್, ಬಿಜೂರ್ ಫ್ರೆಂಡ್ಸ್ ರನ್ನರ್ ಅಪ್.
2020/02/21
ಮುಂಬಯಿ, ಶ್ರೀ ಆಧ್ಯಂತ ಕ್ರಿಕೆಟ್ ಕ್ಲಬ್ ದಹಿಸರ್ ಇವರ ಆಯೋಜನೆಯಲ್ಲಿ ಫೆಬ್ರವರಿ 16, 2020 ರಂದು ದಹಿಸರ್ ನ ಎನ್. ಎಲ್. ಗ್ರೌಂಡ್ (ಎನ್. ಎಲ್. ಕಾಂಪ್ಲೆಸ್, ಆನಂದ್ ನಗರ್ ದಹಿಸರ್ (ಪೂ.)) ಇಲ್ಲಿ ದೇವಾಡಿಗ ಕ್ರಿಕೆಟ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಆಯೋಜನೆಗೊಂಡಿತು.ಭಾಸ್ಕರ್ ದೇವಾಡಿಗ (ಉಪಾಧ್ಯಕ್ಷ - ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ - ದಹಿಸರ್ ತಾಲ್ಲೂಕು) ಅವರ ಅಧ್ಯಕ್ಷತೆ ಹಾಗೂ ಶೇಖರ್ ದೇವಾಡಿಗರ ಉಪಾಧ್ಯಕ್ಷತೆಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಯಶಶ್ವಿಯಾಗಿ ಜರಗಿತು.ಉತ್ತರ ಮುಂಬಯಿಯ ದಹಿಸರ್ ತಾಲ್ಲೂಕು ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ, ವಕೀಲ ವಿಜಯ್ ಮಾನೆ, ಉತ್ತರ ಮುಂಬಯಿಯ ಜಿಲ್ಲಾ ಗೌರವ ಕಾರ್ಯದರ್ಶಿ ಮಯೂರ್ ಜೋಶಿ, ಉತ್ತರ ಮುಂಬಯಿಯ ಜಿಲ್ಲಾ ಕಾರ್ಯದರ್ಶಿ ಶ್ಯಾಮ್ ಗಾವ್ಕರ್, ಬೊರಿವಲಿ 17 ನೇ ವಾರ್ಡಿನ ಕಾರ್ಯದರ್ಶಿ ಪರಿ ಹಾಗೂ ದಹಿಸರ್ ಹೋಟೆಲ್ ಅಸ್ಸೊಸಿಯೆಷನ್ ನ ದಯಾನಂದ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಕ್ರೀಡಾಕೊಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ನಡೆದ ಫೈನಲ್ ಹಣಾಹಣಿಯಲ್ಲಿ ಶ್ರೀ ಆದ್ಯಂತ-11 ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ರನ್ನರ್ ಅಪ್ ಪ್ರಶಸ್ತಿಯನ್ನು ಬಿಜೂರ್ ಫ್ರೆಂಡ್ಸ್ ತಂಡವು ತನ್ನದಾಗಿಸಿಕೊಂಡಿತು. ಶ್ರೀನಿಧಿ ಕ್ಯಾಟರರ್ಸ್ ನ ಉದಯ್ ಕೋಟೇಶ್ವರ್ ಅವರು ಜಾಹೀರಾತು ನೀಡಿ ಪ್ರೋತ್ಸಹಿಸಿದರು.ಕ್ರೀಡಾಳುಗಳಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಟೂರ್ನಮೆಂಟ್ ನ ಉತ್ತಮ ಬೌಲರ್ ಆಗಿ ಅರುಣ್ ದೇವಾಡಿಗ, ಉತ್ತಮ ಬ್ಯಾಟ್ಸ್ಮೆನ್ ಮಾತು ಸರಣಿ ಶ್ರೇಷ್ಠ ಆಟಗಾರನಾಗಿ ಶ್ರೀಧರ್ ದೇವಾಡಿಗ ಮೂಡಿಬಂದರು. ಪಂದ್ಯಾಟಗಳ ತೀರ್ಪುಗಾರರಾಗಿ ಮಾಧವ ದೇವಾಡಿಗ, ರಾಜೇಂದ್ರ ಪೂಜಾರಿ, ಜಗದೀಶ್ ಮೊಗವೀರ ಇವರುಗಳು ಸಹಕರಿಸಿದರು.
