ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿ : ವಾರ್ಷಿಕ ವಿಹಾರ ಕೂಟ 2019
2019/12/25/
ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿ ಇದರ ಯುವ ವಿಭಾಗದ ನೇತೃತ್ವದಲ್ಲಿ 4ನೇ ವರ್ಷದ ಒಂದು ದಿನದ ವಾರ್ಷಿಕ ವಿಹಾರ ಕೂಟವನ್ನು ಡಿಸೇಂಬರ್ 22 ರ ರವಿವಾರ ವಾಟರ್ ಕಿಂಗ್ಡಮ್ , ಬೋರಿವ್ಲಿ ಇಲ್ಲಿ ಆಯೋಜಿಸಿತ್ತು.
ಈ ವಾರ್ಷಿಕ ವಿಹಾರ ಕೂಟದಲ್ಲಿ 35 ಜನರು ಪಾಲ್ಗೊಂಡು ವಿಹಾರಕೂಟದ ಮೋಜನ್ನು ಸವಿದರು.
ಸಮಾಜ ಬಾಂಧವರಿಗಾಗಿ ಏರ್ಪಡಿಸಲಾದ ವಿಹಾರಕೂಟಕ್ಕೆ ಬೆಳಿಗ್ಗೆ ದಾದರ್ ನಿಂದ ಬಸ್ ಮೂಲಕ ಹೊರಟು ನಿಗದಿತ ರೆಸಾರ್ಟ್ ತಲುಪಿ, ದೈನಂದಿನ ಚಟುವಟಿಕೆಯ ಜಂಜಾಟದಿಂದ ಹೊರಬಂದು ಮೋಜು ಮಸ್ತಿಯಲ್ಲಿ ತೊಡಗಿ ಸಂತಸಪಟ್ಟರು.
ವಿಹಾರಕೋಟದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ ಶ್ರೀ ಪ್ರಭಾಕರ್ ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದು ವಿಹಾರಕೋಟಾದ ಯಶಸ್ಸಿಗೆ ಸಹಕರಿಸಿದರು.
ಅಂತಿಮವಾಗಿ ರವೀಂದ್ರ ದೇವಾಡಿಗರು ವಿಹಾರಕೂಟಕ್ಕೆ ಬಂದಿರುವ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
