ಪೂರ್ವಭಾವಿ ವಾರ್ಷಿಕೋತ್ಸವ-2017.
ಜನವರಿ 14, 2018 ರಂದ ಎನ್.ಕೆ.ಇ.ಎಸ್. ವಡಾಲಾ ಇಲ್ಲಿ ನಡೆಯಲಿರುವ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಮೈಸೂರು ಅಸೋಸಿಯೇಷನ್ ಮಾತುಂಗ ಮುಂಬೈ ಇಲ್ಲಿ ಸಂಘದ ಸದಸ್ಯರಿಗೆ, ವಿವಿಧ ವಯೋಮಿತಿಯವರಿಗೆ ಡ್ರಾಯಿಂಗ್, ಮೆಹೆಂದಿ, ಸಿಂಗಿಂಗ್ ಹಾಗೂ ಅಡುಗೆ ಸ್ಪರ್ಧೆಗಳನ್ನು ಡಿಸೇಂಬರ್ 24 ರಂದು ಯಶಸ್ವಿಯಾಗಿ ನೆರವೇರಿಸಿತು.
ಇನ್ನುಳಿದ ಸ್ಪರ್ಧೆಗಳನ್ನು ವಾರ್ಷಿಕೋತ್ಸವದ ದಿನ ನಡೆಸಲಾಗುವುದು.ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ನವೆಂಬರ್ 26 ರಂದು ಜರುಗಿದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಜನವರಿ 14ರ ಸಂಘದ ವಾರ್ಷಿಕೋತ್ಸವದ ದಿನ ಬಹುಮಾನಗಳನ್ನು ನೀಡಲಾಗುವುದು.ಇಂದಿನ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಶೈಲಿನಿ ರಾವ್ ಮತ್ತು ಶ್ರೀಮತಿ ವಾಣಿ ಭಟ್ ಇವರು ಸಹಕರಿಸಿದರು.ಕಾರ್ಯಕ್ರಮವನ್ನು ಶ್ರೀ ಅಶೋಕ್ ಕೆ. ದೇವಾಡಿಗ ಅವರು ನಿರೂಪಿಸಿದರು.









