30 ನೇ ವಾರ್ಷಿಕೋತ್ಸವ ಸಮಾರಂಭವು ಜನವರಿ 14 ರಂದು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮುಂಬಯಿ - ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ ಇದರ 30 ನೇ ವಾರ್ಷಿಕೋತ್ಸವ ಸಮಾರಂಭವು ಜನವರಿ 14 ರಂದು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ವಿಜೃಂಭಣೆಯಿಂದ ನೆರವೇರಿತು.ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಪ್ರೋಮೋಸ್ ಇಂಜಿನಿಯರ್ಸ್ ಪ್ರೈ. ಲಿ. ಇದರ ವ್ಯವಸ್ಥಾಪಕ ನಿರ್ದೇಶಕ ಶ್ರೀ ಬಿ.ಬಿ. ಘಟಕಲ್, ವಿಶೇಷ ಅತಿಥಿಗಳಾಗಿ ದುಬೈ ದೇವಾಡಿಗ ಸಂಘ ಕದಂ ಇದರ ಸಂಸ್ಥಾಪಕ ಹಾಗೂ ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಕಟ್ಟಡ ಸಮಿತಿಯ ಟ್ರಸ್ಟಿ ಶ್ರೀ ಶೀನ ದೇವಾಡಿಗ, ಲೋಟಸ್ ಇಂಟರ್ನೇಷನಲ್ ಪ್ರೈಟ್ ಎಕ್ಸ್ಪೋರ್ಟ್ ಪ್ರೈ,ಲಿ. ಡೆಲ್ಲಿ ಇದರ ಆಡಳಿತ ನಿರ್ದೇಶಕ ಶ್ರೀ ಮಹಾಬಲ ದೇವಾಡಿಗ, ಸಂಘದ ಗೌ. ಅಧ್ಯಕ್ಷರಾದ ಶ್ರೀ ಸುರೇಶ ಡಿ. ಪಡುಕೋಣೆ, ಅಧ್ಯಕ್ಷರಾದ ಶ್ರೀ ಸುಬ್ಬ ಜಿ. ದೇವಾಡಿಗ, ಗೌ. ಉಪಾಧ್ಯಕ್ಷರಾದ ಶ್ರೀ ನಾಗರಾಜ ಪಡುಕೋಣೆ, ಉಪಾಧ್ಯಕ್ಷರಾದ ಶ್ರೀ ಎನ್. ಎನ್. ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಶ್ರೀ ಮಂಜುನಾಥ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ ಉಪಸ್ಥಿತರಿದ್ದರು.
ಸಾಂಸ್ಕ್ರತಿಕ ಕಾರ್ಯಕ್ರಮದ ನಂತರ ಸಂಘ ಮಹಿಳಾ ವಿಭಾಗದವರಿಂದ ಹಳದಿ-ಕುಂಕುಮ ಕಾರ್ಯಕ್ರಮವು ನೆರವೇರಿತು.ಶ್ರೀಮತಿ ವಿಮಲಾ ದೇವಾಡಿಗರ ಪ್ರಾರ್ಥನೆ ಹಾಗೂ ಕುಮಾರಿ ಹರ್ಷಿತಾ ದೇವಾಡಿಗರ ಪೂಜಾ ನ್ರತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಅತಿಥಿಗಣ್ಯರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ಬಿ.ಬಿ. ಘಟಕಲ್ ಅವರು ಸಭಾಯೆನ್ನುದ್ದೇಶಿಸಿ ಮಾತನಾಡುತ್ತ, ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಸಮಾಜ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡಿರುವುದು ಪ್ರಶಂಶನೀಯವಾಗಿದೆ. ಇನ್ನು ಮುಂದೆಯೂ ಕೂಡ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ತಿಳಿಸಿದರು. ಅಲ್ಲದೆ ಯೋಗದ ಬಗ್ಗೆ ತಿಳಿಸುತ್ತಾ, ಯೋಗಾಭ್ಯಾಸ ಮಾತು ಶಿಸ್ತು ಜೀವನದಲ್ಲಿ ಅಳವಡಿಸಿಕೊಂಡರೆ ಕೊನೆತನಕ ಉತ್ತಮ ಹಾಗೂ ಆರೋಗ್ಯಕರ ಜೀವನ ನಡೆಸಬಹುದು ಎಂದರಲ್ಲದೆ, ಆರೋಗ್ಯವೇ ಭಾಗ್ಯ ಎಂಬ ಮಂತ್ರವನ್ನು ಸಭೆಗೆ ತಿಳಿಸಿದರು.ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಮಹಾಬಲ ದೇವಾಡಿಗ ಅವರು ಮಾತನಾಡುತ್ತಾ, ನಮ್ಮಲ್ಲಿ ಸುಶಿಕ್ಷಿತರು ಕಡಿಮೆ ಎನ್ನುವ ಭಾವನೆಯಿದ್ದು, ಇದೀಗ ನಮ್ಮಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರು, ಉನ್ನತ ಹುದ್ದೆಯಲ್ಲಿರುವುದು ತುಂಬಾ ಸಂತೋಷವನ್ನುಂಟುಮಾಡಿದೆ. ನಾವು ಯಾವುದೇ ಕೀಳರಿಮೆ ಇಟ್ಟುಕೊಳ್ಳಬಾರದು. ಯಾವುದೇ ವೃತ್ತಿಯಿರಲಿ ಅದರಲ್ಲಿ ಉತ್ತಮ ತರಬೇತು ಪಡೆದು, ಕಠಿಣ ಪರಿಶ್ರಮದಿಂದ ಮುಂದುವರಿದರೆ ಖಂಡಿತಾ ಯಶಸ್ಸು ಸಿಗುತ್ತದೆ ಎಂದರಲ್ಲದೆ, ಸಂಘದ ಕಾರ್ಯಕಲಾಪಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ವಿಶೇಷ ಅತಿಥಿ ಶ್ರೀ ಶೀನ ದೇವಾಡಿಗ ದುಬೈ ಮಾತನಾಡುತ್ತಾ, ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಹಾಗೂ ಕಳಕಳಿ ಇರಬೇಕು. ಅಗತ್ಯವಿದ್ದ ನಮ್ಮ ಸಮಾಜ ಬಾಂಧವರಿಗೆ ನಮ್ಮಲ್ಲಿ ಆಗುವಷ್ಟು ಸಹಾಯಹಸ್ತ ಚಾಚಬೇಕು ಎನ್ನುವ ಹಿತನುಡಿಯನ್ನು ತಿಳಿಸಿದರು.ಸಭಾಧ್ಯಕ್ಷ ಸುರೇಶ ಡಿ. ಪಡುಕೋಣೆಯವರು ಮಾಅತನಾಡಿ, ನಮ್ಮ ಸಂಘವು ಸಾಕಷ್ಟು ಸಾಧನೆಗಳನ್ನು ಮಾಡಿದೆ. ಅಧ್ಯಕ್ಷರಾದ ಸುಬ್ಬ ಜಿ ದೇವಾಡಿಗ ಅವರು ಸುದೀರ್ಘ ಕಾಲದಿಂದ ಸಂಘಕ್ಕೆ ಯೋಗ್ಯ ಹಾಗೂ ಉತ್ಕ್ರಷ್ಟ ಯೋಗದಾನ ನೀಡುತ್ತಿದ್ದಾರೆ ಎಂದರು, ಮುಂದುವರಿದು ಮಾತನಾಡುತ್ತಾ, ನಮ್ಮ ಸಂಘಕ್ಕೆ ಅತೀ ಅವಶ್ಯಕವಾದ ನಮ್ಮದೇ ಆದ ಸಮಾಜ ಭವನ ಸ್ಥಾಪಿಸುವಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಮುಖ್ಯ ಅತಿಥಿಗಳಾದ ಶ್ರೀ ಬಿ.ಬಿ. ಘಟಕಲ್ , ವಿಶೇಷ ಅತಿಥಿಗಳಾದ ಶ್ರೀ ಶೀನ ದೇವಾಡಿಗ ಹಾಗೂ ಶ್ರೀ ಮಹಾಬಲ ದೇವಾಡಿಗ ಅವರನ್ನು ಪ್ರೀತಿ ಗೌರವದಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಸದಸ್ಯರುಗಳಾದ ಶ್ರೀ ಎನ್. ಎನ್. ದೇವಾಡಿಗ, ಶ್ರೀ ಎಸ್. ವಿ, ದೇವಾಡಿಗ, ಶ್ರೀ. ಜಿ.ವಿ. ದೇವಾಡಿಗ ಮತ್ತು ಶ್ರೀ ಎ.ಎನ್, ದೇವಾಡಿಗ ಇವರುಗಳನ್ನು ಹಾಗೂ ಸಂಘದ ಗೌ.ಪ್ರ. ಕಾರ್ಯದರ್ಶಿ ಶ್ರೀ. ಬಿ.ಎಂ. ದೇವಾಡಿಗ - ಪತ್ನಿ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ ದಂಪತಿಯನ್ನು ಅತಿಥಿಗಣ್ಯರು ಸನ್ಮಾನಿಸಿದರು. ಅಂತೆಯೇ ಕಾನೂನು ಪದವಿ ಗಳಿಸಿ ವಕೀಲಿ ವೃತ್ತಿಯನ್ನು ಆರಂಭಿಸಿದ ಕುಮಾರಿ ದೀಪಾ ಮಹಾಬಲ ದೇವಾಡಿಗ ಇವರನ್ನೂ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತರು ಸನ್ಮಾನಕ್ಕೆ ಅಭಾರ ವ್ಯಕ್ತಪಡಿಸಿದರು.
ಸಂಘದ ವಾರ್ಷಿಕ ಕ್ರೀಡೋತ್ಸವ ಹಾಗೂ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ವಿದ್ಯಾರ್ಥಿವೇತನವನ್ನು ಪ್ರತಿ ವರ್ಷದಂತೆ ಶ್ರೀ ಸುರೇಶ ಕಂಚೀಕಾನ್ ಇವರು ಪ್ರಾಯೋಜಿಸಿದರು. ಬಹುಮಾನ ಪಡೆದವರ ಯಾದಿಯನ್ನು ಶ್ರೀ ರವೀಂದ್ರ ದೇವಾಡಿಗ, ಶ್ರೀಮತಿ ಪ್ರೇಮ ದೇವಾಡಿಗ ವಾಚಿಸಿದರು.ಸಮಾರಂಭದ ಅಂಗವಾಗಿ ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೋಜನ ಏರ್ಪಡಿಸಲಾಗಿತ್ತು.ಶ್ರೀ ಜಿ.ಎ. ದೇವಾಡಿಗ ಅವರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರೆ, ಗೌರವ ಅತಿಥಿಗಳನ್ನು ಶ್ರೀ ಬಿ.ಎಂ. ದೇವಾಡಿಗರು ಪರಿಚಯಿಸಿದರು.ಸಭಾ ಕಾರ್ಯಕ್ರಮವನ್ನು ಶ್ರೀ ಬಿ.ಎಂ. ದೇವಾಡಿಗ ಹಾಗೂ ಶ್ರೀ ಅಶೋಕ್ ಕೆ. ದೇವಾಡಿಗ ನಿರೂಪಿಸಿದರೆ, ಬೆಳಿಗ್ಗಿನ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಅಶೋಕ್ ಕೆ. ದೇವಾಡಿಗ ನೆರವೇರಿಸಿದರು.ಬೆಳಿಗ್ಗಿನ ಸಾಂಸ್ಕ್ರತಿಕ ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ಶ್ಯಾಮಲಾ ರಾಧೇಶ್ ಹಾಗೂ ಶ್ರೀಮತಿ ರೇಶ್ಮಾ ಗಣಪತಿ ಶಂಕರಲಿಂಗ ಇವರುಗಳು ಸಹಕರಿಸಿದರು. ಇವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಆರ್. ದೇವಾಡಿಗ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
