ದೇವಾಡಿಗ ವೆಲ್ಫೇರ್ ಅಸೋಸಿಯೇಷನ್‌ನ 39ನೇ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿವೇತನ ವಿತರಣೆ.
ಮುಂಬೈ: ದೇವಾಡಿಗ ವೆಲ್ಫೇರ್ ಅಸೋಸಿಯೇಷನ್, ಮುಂಬೈ ಇದರ 39ನೇ ವಾರ್ಷಿಕ ಮಹಾಸಭೆ (AGM) ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಆಗಸ್ಟ್ 30, 2026ರ ಭಾನುವಾರ ಮಧ್ಯಾಹ್ನ 2 ಗಂಟೆಗೆ, ಮೈಸೂರು ಅಸೋಸಿಯೇಷನ್ ಮುಂಬೈ ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ್ ಡಿ. ಪಡುಕೋಣೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಸುಬ್ಬ ಜಿ. ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ಶ್ರೀ ಉಮೇಶ್ ಆರ್. ದೇವಾಡಿಗ, ಉಪಾಧ್ಯಕ್ಷರಾದ ಶ್ರೀ ಭಾಸ್ಕರ್ ದೇವಾಡಿಗ, ಶ್ರೀ ಬಿ. ಎಂ. ದೇವಾಡಿಗ, ಕೋಶಾಧಿಕಾರಿ ಶ್ರೀ ಮಂಜುನಾಥ್ ಎಂ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ಚಂದ್ರ ಎಂ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್ . ದೇವಾಡಿಗ, ಯುವ ವೇದಿಕೆಯ ಕಾರ್ಯಾಧ್ಯಕ್ಷ ಶ್ರೀ ಅವಿನಾಶ್ ಬಿ. ದೇವಾಡಿಗ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಶ್ರೀ ನಾಗರಾಜ್ ಡಿ. ಪಡುಕೋಣೆಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ , ನಮ್ಮ ಸಂಘಕ್ಕೆ ಆರ್ಥಿಕವಾಗಿ, ಸುದೃಢವಾಗಿ ಬಲಿಷ್ಠವಾಗಲು ಆಸ್ತಿಯನ್ನು ವಿಸ್ತರಿಸುವ, ದೇಣಿಗೆ ಸಂಗ್ರಹ, ನೂತನ ಸದಸ್ಯರ ನೋಂದಾವಣಿ ತುಂಬಾ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕೆಲವು ಯೋಜನೆಗಳ್ಳು ಕಾರ್ಯಕಾರಿ ಮಂಡಳಿಯಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇವೆ. ಯಾವುದೇ ಸಮಾಜ ಮುಂದುವರಿಯಬೇಕಾದರೆ ಶಿಕ್ಷಣದಲ್ಲಿ ಹೊಸ ಕ್ರಾಂತಿಯಾಗಬೇಕು.
ಆಗಲೇ ಸಂಘದ ಏಳಿಗೆಗೆ ಪೂರಕವಾಗಿರುತ್ತದೆ. ನಮ್ಮ ಸಂಘವು ಶಿಕ್ಷಣ ಮತ್ತು ವೈದ್ಯಕೀಯ ಸಹಾಯವನ್ನು ಆಗಾಗ ಕೊಡುತ್ತ ಬಂದಿದೆ. ಇಂದು ನಾವು ಈ 39ನೇ ವಾರ್ಷಿಕ ಮಹಾ ಸಭೆಯ ಸಂದರ್ಭದಲ್ಲಿ ಸುಮಾರು 2.40 ಲಕ್ಷ ಮೊತ್ತವನ್ನು ವಿದ್ಯಾರ್ಥಿವೇತನ ರೂಪದಲ್ಲಿ ನಮ್ಮ ಎಲ್.ಜಿ. ಫೌಂಡೇಶನ್ ಮತ್ತು ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನೀಡಲಾಗಿದೆ. ಈ ವಿದ್ಯಾರ್ಥಿವೇತನವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದ್ದು, ಅದಕ್ಕಾಗಿ ದಾನಿಗಳ ನೆರವು ಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಉಮೇಶ್ ಆರ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಸರ್ವರನ್ನು ಸ್ವಾಗತ ಕೋರಿದರು. ಶ್ರೀಮತಿ ಲತಾ ದೇವಾಡಿಗ ಪ್ರಾರ್ಥನೆ ಹಾಡಿದರು.
38ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಸುರೇಶ ದೇವಾಡಿಗ ಹಾಗೂ 2025-26 ರ ವಾರ್ಷಿಕ ವರಧಿಯನ್ನು ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಶೀಲ ಎಸ್. ದೇವಾಡಿಗ ವಾಚಿಸಿದರು. ಸಂಘದ ಗತ ವಾರ್ಷಿಕ ಲೆಕ್ಕಪತ್ರ ವರಧಿಯನ್ನು ಕೋಶಾಧಿಕಾರಿ ಶ್ರೀ ಮಂಜುನಾಥ್ ಎಂ. ದೇವಾಡಿಗ ಮಂಡಿಸಿದರು. ವಿದ್ಯಾರ್ಥಿವೇತನದ ಯಾದಿಯನ್ನು ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಅವಿನಾಶ್ ಬಿ. ದೇವಾಡಿಗ ವಾಚಿಸಿದರು. ಜೊತೆ ಕಾರ್ಯದರ್ಶಿ ಶ್ರೀ ಚಂದ್ರ ಎಂ. ದೇವಾಡಿಗ ವಂದನಾರ್ಪಣೆ ಗೈದರು.
ಸಭೆಯಲ್ಲಿ ವರಧಿ ವರ್ಷದಲ್ಲಿ ನಿಧನರಾದ ಸಂಘದ ಸದಸ್ಯರುಗಳ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

.jpeg)



.jpeg)
.jpeg)

.jpeg)

.jpeg)
.jpeg)

.jpeg)
.jpeg)

.jpeg)

.jpeg)

.jpeg)

.jpeg)



.jpeg)


.jpeg)

.jpeg)


.jpeg)

.jpeg)

.jpeg)
.jpeg)



.jpeg)

