31ನೇ ವಾರ್ಷಿಕ ಮಹಾಸಭೆ : ಸಂಘದ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
2018/09/08
ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ 31ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 2 ರ ರವಿವಾರ ಮೈಸೂರು ಅಸೋಸಿಯೇಶನ್ ಮಾಟುಂಗದಲ್ಲಿ ಸಂಘದ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಶ್ರೀ ಸುಬ್ಬ ಜಿ. ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಕೋಶಾಧಿಕಾರಿ ಶ್ರೀ ಮಂಜುನಾಥ್ ದೇವಾಡಿಗ ಉಪಸ್ಥಿತರಿದ್ದರು.
ನಾಗರಾಜ್ ಕ್ಕ. ದೇವಾಡಿಗರ ಪ್ರಾರ್ಥನೆಯೊಂದಿಗೆ ಮಹಾಸಭೆಯು ಆರಂಭಗೊಂಡಿತು.
31ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ ದೇವಾಡಿಗ ಇವರು ವಾಚಿಸಿದರೆ, ಗತ ವರ್ಷದ ವಾರ್ಷಿಕ ವರದಿಯನ್ನು ಜತೆ ಕಾರ್ಯದರ್ಶಿ ಶ್ರೀ ಪ್ರಭಾಕರ ದೇವಾಡಿಗ ಸಭೆಯ ಮುಂದೆ ಪ್ರಸ್ತುತಪಡಿಸಿದರು. 2017-18 ರ ಲೆಕ್ಕಪತ್ರ ವರದಿಯನ್ನು ಕೋಶಾಧಿಕಾರಿ ಶ್ರೀ ಮಂಜುನಾಥ್ ದೇವಾಡಿಗ ಮಂಡಿಸಿದರು. ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸುಬ್ಬ ಜಿ. ದೇವಾಡಿಗರು ಮಾತನಾಡುತ್ತಾ, ಸಂಘದ ಸರ್ವ ಕಾರ್ಯಕಲಾಪಗಳಿಗೆ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರ ಪಾಲ್ಗೊಳ್ಳುವಿಕೆ ಅತಿ ಅವಶ್ಯಕವಾಗಿದೆ. ಸಂಘದ ಏಳಿಗೆಯೂ ಅವರ ಮೇಲೆ ನಿಂತಿದ್ದು, ಸಾಧ್ಯವಾದಷ್ಟು ಸಂಘದ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಂಡು ತನು ಮನ ಧನದ ಸಹಾಯ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು. ನಿಮ್ಮ ಎಲ್ಲ ಕೆಲಸ ಕಾರ್ಯದ ಒತ್ತಡದ ನಡುವೆಯೂ ಸಂಘದ ಕಾರ್ಯಕ್ರಮವನ್ನೂ ಒಂದು ಭಾಗವಾಗಿ ತೆಗೆದುಕೊಳ್ಳುವಂತೆ ವಿನಂತಿಸಿದರು.
ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ, ಶ್ರೀ ನಾಗರಾಜ್ ಕೆ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ ಅವರು ಸಂದರ್ಭಯೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ 2018-2020 ಸಾಲಿಗೆ ನೂತನವಾಗಿ ಆಯ್ಕೆಯಾದ ಯುವ ವಿಭಾಗವನ್ನು ಅಭಿನಂದಿಸಲಾಯಿತು. ಅಲ್ಲದೆ, ಸಂಘದ ಕಾರ್ಯ ಕಲಾಪಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು. ಮಹಾಸಭೆಯಲ್ಲಿ ಹೆಚ್ಚಿನ ಸದಸ್ಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಮಹಾಸಭೆಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ದೇಣಿಗೆಯನ್ನು ಕೆಲವು ಸದಸ್ಯರು ಘೋಷಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಬಿ.ಎಂ ದೇವಾಡಿಗ ಹಾಗೂ ನಾಗರಾಜ್ ಕೆ. ದೇವಾಡಿಗ ಸಭೆಯ ನಿರೂಪಣೆ ಮಾಡಿ ವಂದಿಸಿದರು.
ಕೊನೆಯಲ್ಲಿ ಲಘು ಉಪಹಾರವನ್ನು ವಿತರಿಸಲಾಯಿತು.
