2018 -20 ನೇ ಸಾಲಿನ ಯುವ ವೇದಿಕೆಯ ಕಾರ್ಯಕಾರಿ ಸಮಿತಿಯ ಆಯ್ಕೆ: ರವೀಂದ್ರ ದೇವಾಡಿಗ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕ.
ಮುಂಬೈ : ದಿನಾಂಕ 15 / 06 / 2018 ರಂದು ಸಂಘದ ಕಚೇರಿಯಲ್ಲಿ ಹಮ್ಮಿಕೊಂಡ ಮಾಸಿಕ ಸಭೆಯಲ್ಲಿ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಇದರ ಅಂಗವಾಗಿರುವ ಯುವ ವೇದಿಕೆಯ 2018 -20 ನೇ ಸಾಲಿನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಶ್ರೀ ಉಮೇಶ್ ಆರ್ ದೇವಾಡಿಗರ ಅಧ್ಯಕ್ಷತೆಯ 2016 -18 ರ ಅವಧಿಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಮುಂದಿನ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. 2018 -20 ರ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ರವೀಂದ್ರ ದೇವಾಡಿಗ ಅವಿರೋಧವಾಗಿ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಶ್ರೀ ಚಂದ್ರ ಎನ್. ದೇವಾಡಿಗ ಇವರು ಆಯ್ಕೆಯಾದರೆ ಕಾರ್ಯದರ್ಶಿಯಾಗಿ ಶ್ರೀಮತಿ ಅಶ್ವಿತ ವಿಜಯ್ ದೇವಾಡಿಗ ನೇಮಕಗೊಂಡರು. ಅಂತೆಯೆ ಜೊತೆ ಕಾರ್ಯದರ್ಶಿಯಾಗಿ ಶ್ರೀ ಅಶೋಕ್ ಆರ್. ದೇವಾಡಿಗ, ಖಜಾಂಚಿಯಾಗಿ ಶ್ರೀ ದಿನೇಶ್ ಆರ್. ದೇವಾಡಿಗ, ಸದಸ್ಯತ್ವ ಸಂಚಾಲಕರಾಗಿ ಶ್ರೀ ಸುರೇಶ ಕೆ. ದೇವಾಡಿಗ ಮತ್ತು ಮಾಧ್ಯಮ ಪ್ರತಿನಿಧಿಯಾಗಿ ಶ್ರೀ ನಾಗರಾಜ್ ಕೆ. ದೇವಾಡಿಗ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಈ ಕೆಳಗಿನವರನ್ನು ನೇಮಿಸಲಾಯಿತು.
ಶ್ರೀ ಅಶೋಕ ಜಿ. ದೇವಾಡಿಗ, ಶ್ರೀ ಉಮೇಶ್ ಅರ್. ದೇವಾಡಿಗ, ಶ್ರೀಮತಿ ರೇವತಿ ಜಿ. ದೇವಾಡಿಗ, ಶ್ರೀ ಅವಿನಾಶ್ ಬಿ. ದೇವಾಡಿಗ, ಶ್ರೀ ಸಂತೋಷ್ ಕೆ. ದೇವಾಡಿಗ, ಶ್ರೀ ವಿಜಯಲಕ್ಷ್ಮಿ ದೇವಾಡಿಗ, ಶ್ರೀ ಹರ್ಷವರ್ಧನ್ ದೇವಾಡಿಗ, ಕು. ಮಂಜುಳಾ ದೇವಾಡಿಗ, ಕು. ಪ್ರತೀಕ್ಷಾ ದೇವಾಡಿಗ, ಕು. ಪದ್ಮ ದೇವಾಡಿಗ, ಶ್ರೀ ಗಣೇಶ್ ಆರ್. ದೇವಾಡಿಗ, ಶ್ರೀ ಸುಧೀರ್ ಬಿಜೂರ್, ಶ್ರೀ ನಾಗರಾಜ್ ಆರ್. ದೇವಾಡಿಗ, ಶ್ರೀ ರಾಮಪ್ರಸನ್ನ ಮರವಂತೆ. ನೂತನ ಕಾರ್ಯಕಾರಿ ಸಮಿತಿ ನೇಮಕಕ್ಕೂ ಮುನ್ನ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಶ್ರೀ ಉಮೇಶ್ ಆರ್ ದೇವಾಡಿಗ, 2016 -18 ರ ಅವಧಿಯಲ್ಲಿ ಸಹಕರಿಸಿದ ಯುವ ವೇದಿಕೆಯ ಎಲ್ಲ ಸದಸ್ಯರಿಗೆ, ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರಿಗೂ ಹಾಗೆ ಮಹಿಳಾ ವಿಭಾಗಕ್ಕೂ ಧನ್ಯವಾದ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸದಸ್ಯರು ಉಮೇಶ್ ಆರ್. ದೇವಾಡಿಗರ ನೇತೃತ್ವದ ಹಿಂದಿನ ಯುವ ವೇದಿಕೆಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರವೀಂದ್ರ ದೇವಾಡಿಗ ಇವರು ತನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದರಲ್ಲದೆ, ಹಿಂದಿನ ಅವಧಿಯಂತೆ ಮುಂದೂ ಕೂಡ ಸಂಘದ ಕೆಲಸ ಕಾರ್ಯಗಳಲ್ಲಿ ತಾವೆಲ್ಲರೂ ಸಹಕಾರ, ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡರು.

