31 ನೇ ವಾರ್ಷಿಕೋತ್ಸವ ಪ್ರಯುಕ್ತ ಪೂರ್ವಭಾವಿ ಸ್ಪರ್ಧೆ ಯಶಸ್ವಿಯಾಗಿ ನೆರವೇರಿಸಿತು.
2019/01/19/31
ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಇದರ ವಾರ್ಷಿಕೋತ್ಸವ ಸಮಾರಂಭವು ಜನವರಿ 20 ರಂದು ಎನ್ ಕೆ ಇ ಎಸ್ ಶಾಲೆ ವಡಾಲ ಇಲ್ಲಿ ನಡೆಯಲಿದ್ದು, ಆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಅಂದು ಏರ್ಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಂದು ಸಮಯದ ಅಭಾವ ಇರುವ ಕಾರಣಕ್ಕೆ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಕೆಲವೊಂದು ಸ್ಪರ್ಧೆಗಳನ್ನು ಮೈಸೂರು ಅಸೋಸಿಯೇಷನ್ ಮಾತುಂಗ ಇಲ್ಲಿ ಡಿಸೆಂಬರ್ 31 ರಂದು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು - ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಹಾಡುಗಾರಿಕೆ, ಮೆಹಂದಿ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀ ಸುಬ್ಬ ಜಿ ದೇವಾಡಿಗ, ಉಪಾಧ್ಯಕ್ಷ ಶ್ರೀ ಎನ್.ಎನ್ ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಧೆಗಳ ತೀರ್ಪುಗಾರರಾಗಿ ರಮಾ ವಸಂತ್ ಹಾಗೂ ಲೀಲಾ ಬನವಾಸಿ ಸಹಕರಿಸಿದರು. ಅವರಿಗೆ ಸಂಘದ ಪರವಾಗಿ ಧನ್ಯವಾದ ಸಲ್ಲಿಸಲಾಯಿತು.
ಫೋಟೋ : ಪ್ರಭಾಕರ್ ದೇವಾಡಿಗ
[
