ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ಶಾರದಾ ಪೂಜೆ-2020.

 

2020/10/23

ಸಂಘದ ಕಚೇರಿಯಲ್ಲಿ ಪ್ರತಿ ವರ್ಷ ಜರುಗುವ  ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 18, 2020 ರಂದು ನೆರವೇರಿಸಲಾಯಿತು.

ಕೋವಿಡ್ - 19 ಕಾರಣದಿಂದ ರಾಜ್ಯದಲ್ಲಿ ಲೊಕ್ಡೌನ್ ಇದ್ದ ಕಾರಣ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮಕೆ ಹಾಜರಿರಲು ಸಾಧ್ಯವಾಗಲಿಲ್ಲ . ಶಾರದಾ ಪೂಜೆ ಮಧ್ಯಾಹ್ನ 2 ಗಂಟೆಗೆ  ಆರಂಭಗೊಂಡು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಯುವ ವೇದಿಕೆಯಾ ಸದಸ್ಯರು ಶಾರದಾ ಪೂಜೆಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಭಜನೆಯನ್ನು ಶ್ರದ್ಧಾ ಭಕ್ತಿಯಿಂದ ಹಾಡಿದರು. ಮಂಗಳಾರತಿಯ ನಂತರ ಗಂಧ ಪ್ರಸಾದವನ್ನು ವಿತರಿಸಲಾಯಿತು.

ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್ ದೇವಾಡಿಗ ಯುವ ವೇದಿಕೆಯ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Next Post Previous Post
No Comment
Add Comment
comment url
sr7themes.eu.org