ವಾರ್ಷಿಕ ವಿಹಾರ ಕೂಟ 2018, ಸಾಂಗ್ರಿಲಾ ವಾಟರ್ ಅಂಡ್ ಅಮ್ಯೂಸ್ಮೆಂಟ್ ಪಾರ್ಕ್, ಭೀವಂಡಿ ಇಲ್ಲಿ ಆಯೋಜಿಸಿತ್ತು.
2018/11/09
ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿಯ ಯುವ ವಿಭಾಗವು 3ನೇ ವರ್ಷದ ವಾರ್ಷಿಕ ವಿಹಾರ ಕೂಟವನ್ನು ನವೆಂಬರ್ 4 ರ ರವಿವಾರ ಸಾಂಗ್ರಿಲಾ ವಾಟರ್ ಅಂಡ್ ಅಮ್ಯೂಸ್ಮೆಂಟ್ ಪಾರ್ಕ್, ಭೀವಂಡಿ ಇಲ್ಲಿ ಆಯೋಜಿಸಿತ್ತು.
ಸಮಾಜ ಬಾಂಧವರಿಗಾಗಿ ಏರ್ಪಡಿಸಲಾದ ಒಂದು ದಿನದ ವಿಹಾರಕೂಟಕ್ಕೆ ಬೆಳಿಗ್ಗೆ ದಾದರ್ ನಿಂದ ಹೊರಟು ನಿಗದಿತ ಸಮಯಕ್ಕೆ ರೆಸಾರ್ಟ್ ತಲುಪಲಾಯಿತು.
ವಿಹಾರಕೋಟದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ ಇವರು ಉಪಸ್ಥಿತರಿದ್ದು ವಿಹಾರಕೋಟಾದ ಯಶಸ್ಸಿಗೆ ಸಹಕರಿಸಿದರು.
ಅಲ್ಲದೆ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ, ಉಪಾಧ್ಯಕ್ಷ ಚಂದ್ರ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಅಶ್ವಿತಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಅಂತಿಮವಾಗಿ ರವೀಂದ್ರ ದೇವಾಡಿಗರು ವಿಹಾರಕೂಟಕ್ಕೆ ಬಂದಿರುವ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
