ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ : 29ನೇ ವಾರ್ಷಿಕೋತ್ಸವ ಸಮಾರಂಭ ದೇವಾಡಿಗರೆಲ್ಲ ಒಂದೇ ಎನ್ನುವ ಭಾವನೆಯೊಂದಿಗೆ ಮುನ್ನಡೆಯೋಣ : ನರಸಿಂಹ ದೇವಾಡಿಗ.
ಮುಂಬಯಿ – ಮುಂಬಯಿಯ ದೇವಾಡಿಗ ಸಮಾಜ ಬಾಂಧವರ ಪ್ರತಿಷ್ಠಿತ ಸಂಸ್ಥೆಯಾದ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ ಇದರ 29 ನೇ ವಾರ್ಷಿಕೋತ್ಸವ ಸಮಾರಂಭವು ಜನವರಿ 22 ರಂದು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ನೆರವೇರಿತು.ವೇದಿಕೆಯಲ್ಲಿ ಸಮಾರಂಭದ ಮುಖ್ಯ ಅತಿಥಿಯಾದ ಸುಮೀರಾ ಫುಡ್ ಪ್ರಾಡಕ್ಟ್ಸ್ ಪ್ರೈ. ಲಿಮಿಟೆಡ್ ಇದರ ನಿರ್ದೇಶಕ ನರಸಿಂಹ ದೇವಾಡಿಗ ಪುಣೆ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ಬಿ. ಶೇರಿಗಾರ್, ಸಂಘದ ಅಧ್ಯಕ್ಷರಾದ ಶ್ರೀ ಸುಬ್ಬ ಜಿ. ದೇವಾಡಿಗ, ಗೌ. ಉಪಾಧ್ಯಕ್ಷರಾದ ಶ್ರೀ ನಾಗರಾಜ ಪಡುಕೋಣೆ, ಉಪಾಧ್ಯಕ್ಷರಾದ ಶ್ರೀ ಎನ್. ಎನ್. ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಬಿ.ಎಂ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ಉಮೇಶ್ ಆರ್. ದೇವಾಡಿಗ, ವಿಶೇಷ ಆಮಂತ್ರಿತರಾದ ಶ್ರೀ ರಾಜೇಶ್ ಆರ್. ದೇವಾಡಿಗ, ಪುಣೆ ದೇವಾಡಿಗ ಸಂಘದ ಸ್ಥಾಪಕಾಧ್ಯಕ್ಷ ಶ್ರೀ ಪ್ರಭಾಕರ ಆರ್. ದೇವಾಡಿಗ, ಶ್ರೀ ಮಹಾಬಲೇಶ್ವರ ದೇವಾಡಿಗ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನರಸಿಂಹ ದೇವಾಡಿಗರು ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ, ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ನ ಇಂದಿನ ಕಾರ್ಯಕ್ರಮಕ್ಕೆ ಆಹ್ವಾಅನಿಸಿದ್ದಕ್ಕೆ ತುಂಬಾ ಅಭಾರಿಯಾಗಿದ್ದೇನೆ. ವಿಶೇಷವಾಗಿ ಇಂದಿನ ಕಾರ್ಯಕ್ರಮದಲ್ಲಿ ಸೇರಿರುವವರು ನಮ್ಮ ಕುಂದಾಪುರದವರು ಎನ್ನುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದರಲ್ಲದೆ, ದೇವಾಡಿಗ ಬಾಂಧವರಾದ ನಮ್ಮಲ್ಲಿ ಪ್ರಾಂತೀಯ, ಭಾಷಿಯವಾದ ಭಿನ್ನಾಭಿಪ್ರಾಯ, ವೈಮನಸ್ಸು ಇರದಂತೆ ನೋಡಿಕೊಂಡು, ನಾವೆಲ್ಲಾ ದೇವಾಡಿಗರು, ದೇವಾಡಿಗರು ಎಲ್ಲಾ ಒಂದೇ ಎನ್ನುವ ಭಾವನೆಯಿಂದ ಮುಂದುವರಿಯಬೇಕೆಂದು ಮನವಿ ಮಾಡಿದರು.
ಕುಂದಾಪುರದಲ್ಲಿ ನಮ್ಮ ದೇವಾಡಿಗ ಸಮಾಜ ಬಾಂಧವರಿಗೆ ಉಪಯುಕ್ತವಾಗುವ ಒಂದು ದೇವಾಡಿಗ ಭವನದ ಅವಶ್ಯಕತೆಯಿದ್ದು, ಅದರ ನಿರ್ಮಾಣದ ಬಗ್ಗೆ ಮುಂದಿನ ದಿನಗಳಲ್ಲಿ ಪಣತೊಡುವಂತೆ ತಮ್ಮ ಮನದಿಚ್ಚೆಯನ್ನು ತೆರೆದಿಟ್ಟರು.ಸಂಘವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಲ್ಲಿ ಪ್ರೋತ್ಸಹವನ್ನು ತುಂಬುತ್ತಿರುವುದು ಉತ್ತಮವಾದ ಕಾರ್ಯಕ್ರಮವಾಗಿದೆ ಎಂದರಲ್ಲದೆ, ಸಂಘದ ಮುಂದಿನ ಎಲ್ಲ ಕಾರ್ಯಕ್ರಮಗಳಿಗೂ ತನ್ನ ಸಹಾಯ – ಸಹಕಾರ ನೀಡುವುದಾಗಿ ಭರವಸೆಯಿತ್ತರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ಬಿ. ಶೇರಿಗಾರ್ ಮಾತನಾಡಿ, ಇಂದಿನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಅವಕಾಶ ಕೊಟ್ಟಿದ್ದಕ್ಕೆ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.೨೯ ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ವೆಲ್ಫೇರ್ ಅಸೋಸಿಯೇಶನ್ ಗೆ ಶುಭ ಹಾರೈಸುತ್ತಾ, ವಾರ್ಷಿಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಅಭಿನಂದನೀಯ.ಬೈಂದೂರಿನಲ್ಲಿ ದೇವಾಡಿಗ ಒಕ್ಕೂಟ ಬೈಂದೂರು ಇವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡ ದೇವಾಡಿಗ ವೈಭವ – ೨೦೧೬ ಕಾರ್ಯಕ್ರಮದಲ್ಲಿ ನೀಡಿದ ವಿದ್ಯಾರ್ಥಿವೇತನಕ್ಕೆ ವಿಶೇಷವಾಗಿ ಅಭಿನಂದಿಸಿ, ಸಂಘವು ಹಮ್ಮಿಕೊಂಡಂತಹ ಪಿಕ್ನಿಕ್, ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಶ್ರೀ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿ ಈಗಾಗಲೇ ಅರ್ಧಕ್ಕೂ ಹೆಚ್ಚಿನ ಕಾರ್ಯ ನೆರವೇರಿದ್ದು, ಭಾಷೆ, ಪ್ರಾಂತೀಯ ಭೇದವಿಲ್ಲದೆ ಎಲ್ಲರೂ ಸಹಕರಿಸಿದ್ದು, ಮುಂದೆಯೂ ಸಮಾಜ ಬಾಂಧವರ ಸಹಕಾರವನ್ನು ಕೋರಿದರು.
ಸಂಘದ ಅಧ್ಯಕ್ಷರಾದ ಸುಬ್ಬ ಜಿ ದೇವಾಡಿಗರು ಸಂಘದ ಕಾರ್ಯಕಲಾಪಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುನೆಯೂ ಎಲ್ಲರ ಸಂಪೂರ್ಣ ಸಹಕಾರವನ್ನು ಕೋರಿದರು.ದೇವಾಡಿಗ ಸಂಘ ಪುಣೆ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರಭಾಕರ ದೇವಾಡಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಅಂದು ಬೆಳಿಗ್ಗೆ ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಸುಂದರವಾಗಿ ಮೂಡಿಬಂದಿತು. ಸಾಂಸ್ಕೃತಿಕ ಸ್ಪರ್ಧೆಗಳ ತೀರ್ಪುಗಾರರಾಗಿ ಅಂಬರೀಷ್ ಪಾಟೀಲ್ ಹಾಗೂ ವಿಜಯಲಕ್ಷ್ಮಿ ಭಾರ್ಗವ್ ಇವರುಗಳು ಸಹಕರಿಸಿದರು. ಅವರನ್ನು ಸಂಘದ ಅಧ್ಯಕ್ಷರು ಹೂಗುಚ್ಛ ನೀಡಿ ಅಭಿನಂದಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಮಹಿಳಾ ವಿಭಾಗದವರಿಂದ ಅರಶಿನ – ಕುಂಕುಮ ಕಾರ್ಯಕ್ರಮ ನೆರವೇರಿತು.ಮಧ್ಯಾಹ್ನದ ಭೋಜನದ ನಂತರ ಕು. ಪ್ರತೀಕ್ಷಾ ಪಿ. ದೇವಾಡಿಗರ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮವು ಆರಂಭಗೊಂಡಿತು.ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಿ.ಎ. ದೇವಾಡಿಗ ದಂಪತಿ ಮತ್ತು ಗೌ. ಉಪಾಧ್ಯಕ್ಷ ಶ್ರೀ ನಾಗರಾಜ್ ಪಡುಕೋಣೆ ದಂಪತಿ, ಉಪಾಧ್ಯಕ್ಷ ಶ್ರೀ ಎನ್. ಎನ್. ದೇವಾಡಿಗ ಇವರುಗಳನ್ನು ವಿಶೇಷವಾಗಿ ಸಂಘದ ಪರವಾಗಿ ವೇದಿಕೆಯ ಗಣ್ಯರು ಸನ್ಮಾನಿಸಿದರು.
ಉಪಾಧ್ಯಕ್ಷರಾದ ಎನ್. ಎನ್. ದೇವಾಡಿಗರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು.ಸಂಘದ ಮಾಜಿ ಅಧ್ಯಕ್ಷರಾದ ಜಿ.ಎ. ದೇವಾಡಿಗ, ಎಸ್,ವಿ. ದೇವಾಡಿಗ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಸಂಘದ ಕಾರ್ಯಕಲಾಪಗಳ ಚುಟುಕು ಮಾಹಿತಿಯನ್ನು ಗೌ.ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ ಅವರು ತಿಳಿಸಿದರು. ಮಹಿಳಾ ವಿಭಾಗದ ಕುರಿತು ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ ಮಾಹಿತಿ ನೀಡಿದರೆ, ಯುವ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಯುವ ವಿಭಾಗದ ಅಧ್ಯಕ್ಷ ಶ್ರೀ ಉಮೇಶ್ ಆರ್. ದೇವಾಡಿಗ ತಿಳಿಸಿದರು.ವಿಮಲಾ ದೇವಾಡಿಗರು ಪ್ರಾರ್ಥನೆ ಹಾಡಿಗಾದರೆ, ಬಿ.ಎಂ. ದೇವಾಡಿಗ ಹಾಗೂ ಅಶೋಕ್ ಕೆ. ದೇವಾಡಿಗ ಸಭಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುರೇಶ ಕೆ. ದೇವಾಡಿಗರು ನಿರೂಪಿಸಿದರು. ಶಶಿಕಲಾ ಎಂ. ದೇವಾಡಿಗ ಧನ್ಯವಾದ ಸಮರ್ಪಿಸಿದರು.



















































