"ಯುವ ಚಂಡೆ ಬಳಗ"ದ ನಿಧಿಗೆ ಸಹಾಯಹಸ್ತ.
ದೇವಾಡಿಗರ ಒಕ್ಕೂಟ (ರಿ.)ಬೈಂದೂರು ಹಮ್ಮಿಕೊoಡ ಹೊಸ ಯೋಜನೆ "ಯುವ ಚಂಡೆ ಬಳಗ"ದ ನಿಧಿಗೆ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುoಬೈ ವತಿಯಿoದ ಒಂದು ಚಂಡೆಯ ಮೊತ್ತ ರೂ. 14,000 ದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ ಹಾಗೂ ಯುವ ಘಟಕದ ಸಕ್ರಿಯ ಸದಸ್ಯ ಶ್ರೀ ಅವಿನಾಶ್ ದೇವಾಡಿಗ ಜೊತೆಯಿದ್ದರು.
ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಶ್ರೀ ನಾರಾಯಣ ದೇವಾಡಿಗ ಬಸವನಕೆರೆ, ಗೌರವಾಧ್ಯಕ್ಷ ಶ್ರೀ ನಾರಾಯಣ ದೇವಾಡಿಗ ಹೊಸಾಡು, ಮಾಜಿ ಅಧ್ಯಕ್ಷ ಶ್ರೀ ಕೆ.ಜಿ ಸುಬ್ಬ ದೇವಾಡಿಗ, ಉಪಾಧ್ಯಕ್ಷ ಶ್ರೀ ನಾರಾಯಣರಾಜು, ಕಾರ್ಯದರ್ಶಿ ಶ್ರೀ ಚಂದ್ರದೇವಾಡಿಗ, ಚಂಡೆ ಬಳಗದ ಉಸ್ತುವಾರಿಗಳಾದ ಶ್ರೀ ರಾಜಶೇಖರ್ ಬೈಂದೂರು, ಶ್ರೀ ನಾರಾಯಣ ದೇವಾಡಿಗ ಕೋಣೂರು, ಸಂಘಟನಾ ಕಾರ್ಯದರ್ಶಿ ಶ್ರೀ ರಾಘವೇಂದ್ರ ದೇವಾಡಿಗ ಕಳವಾಡಿ, ಖಜಾಂಚಿ ಶ್ರೀ ರಘುರಾಮ್ ಬೈಂದೂರು ಹಾಗೂ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸುಶೀಲ ದೇವಾಡಿಗ ಉಪಸ್ಥಿತರಿದ್ದರು.
ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುoಬೈ ಸಂಘದ ಸಹಕಾರಕ್ಕೆ ಒಕ್ಕೂಟವು ಆಭಾರಿ ವ್ಯಕ್ತಪಡಿಸಿದೆ.
