ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ 32ನೇ ವಾರ್ಷಿಕ ಮಹಾಸಭೆ.
2019/08/29
ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ 32ನೇ ವಾರ್ಷಿಕ ಮಹಾಸಭೆಯು ರವಿವಾರ ಆಗಸ್ಟ್ 25 ರಂದು ಸಂಘದ ಅಧ್ಯಕ್ಷ ಶ್ರೀ ಸುಬ್ಬ ಜಿ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಮೈಸೂರು ಅಸೋಸಿಯೇಶನ್ ಮಾಟುಂಗದಲ್ಲಿ ಜರುಗಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಶ್ರೀ ಸುಬ್ಬ ಜಿ. ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಕೋಶಾಧಿಕಾರಿ ಶ್ರೀ ಮಂಜುನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ಪ್ರಭಾಕರ್ ದೇವಾಡಿಗ ಉಪಸ್ಥಿತರಿದ್ದರು.
ಶ್ರೀ ಬಿ.ಎಂ. ದೇವಾಡಿಗರು ಪ್ರಾರ್ಥನೆ ಹಾಡಿ ಮಹಾಸಭೆಗೆ ಚಾಲನೆ ನೀಡಿದರು.
32ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ ದೇವಾಡಿಗ ಇವರು ವಾಚಿಸಿದರೆ, ಗತ ವರ್ಷದ ವಾರ್ಷಿಕ ವರದಿಯನ್ನು ಶ್ರೀ ಸುರೇಶ ದೇವಾಡಿಗ ಸಭೆಯ ಮುಂದೆ ಪ್ರಸ್ತುತಪಡಿಸಿದರು.
2018-19 ರ ಸಾಲಿನ ಲೆಕ್ಕಪತ್ರ ವರದಿಯನ್ನು ಕೋಶಾಧಿಕಾರಿ ಶ್ರೀ ಮಂಜುನಾಥ್ ದೇವಾಡಿಗ ಮಂಡಿಸಿದರು. ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸುಬ್ಬ ಜಿ. ದೇವಾಡಿಗರು ಮಾತನಾಡುತ್ತಾ, ಸಂಘದ ಬೆಳವಣಿಗೆಗಾಗಿ ಸದಸ್ಯರು ತಮ್ಮ ಪ್ರೋತ್ಸಹವನ್ನು ಹಾಗೆಯೇ ಯೋಜನೆಯನ್ನು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸದಸ್ಯರು ತಮ್ಮ ಅನಿಸಿಕೆಗಳನ್ನು ಸಭೆಗೆ ತಿಳಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಬಿ.ಎಂ ದೇವಾಡಿಗ ನಿರೂಪಣೆ ಮಾಡಿ ವಂದಿಸಿದರು.
ಕೊನೆಯಲ್ಲಿ ಲಘು ಉಪಹಾರವನ್ನು ವಿತರಿಸಲಾಯಿತು.
