ಯಶಸ್ವಿಯಾಗಿ ನೆರವೇರಿದ ವಾರ್ಷಿಕ ಕ್ರೀಡಾಕೂಟ ಹಾಗೂ ಡಿಪಿಎಲ್ -2024 ಕ್ರಿಕೆಟ್ ಟೂರ್ನಮೆಂಟ್

 

2025/01/04

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ ಡಿಪಿಎಲ್ -2024 ಕ್ರಿಕೆಟ್ ಟೂರ್ನಮೆಂಟ್ ಡಿ. 22 ರಂದು ವೀನಸ್‌ ಕ್ರಿಕೆಟ್‌ ಗ್ರೌಂಡ್ ಗೋರೆಗಾಂವ್‌ ಇಲ್ಲಿ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ 8.30ಕ್ಕೆ ಆರಂಭವಾದ ಕ್ರೀಡಾಕೂಟವನ್ನು ಸಂಘದ ಗೌರವ ಅಧ್ಯಕ್ಷರಾದ ನಾಗರಾಜ್‌ ಡಿ. ಪಡುಕೋಣೆ ಅವರ ಪತ್ರ ಗುರು ಕಾರ್ತಿಕ್ (ನಿರ್ದೇಶಕರು , ಟೆಕ್ನಿಕ್ ಇಂಜಿನಿರ್ಸ್‌ ಆ್ಯಂಡ್ ಸರ್ವಿಸ್ ), ಸಂಘದ ಅಧ್ಯಕ್ಷರಾದ ಸುಬ್ಬಾ ಜಿ. ದೇವಾಡಿಗ, ಕಾರ್ಯದರ್ಶಿ ಬಿ. ಎಂ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೀತಾ ಎಂ. ದೇವಾಡಿಗ, ಉಪಾಧ್ಯಕ್ಷೆ ಸುಶೀಲಾ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ  ರವೀಂದ್ರ ದೇವಾಡಿಗ, ಮತ್ತಿತರ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.ಡಿ.ಪಿ ಲ್ - 2024 ಕ್ರಿಕೆಟ್ ಟೂರ್ನಮೆಂಟಿನಲ್ಲಿ ಸಾನ್ವಿ ಕ್ರಿಕೆಟರ್ಸ್ ನಾಗೂರು ಇವರು ಟ್ರೋಪಿಯನ್ನು ತನ್ನದಾಗಿಸಿಕೊಂಡರೆ. ವಿ. ದೇವಾಡಿಗ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.


ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದವರಿಗಾಗಿ ವಿವಿಧ ಆಟೋಟಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇಲ್ಲಿ ವಿಜೇತರಿಗೂ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಕ್ರೀಡಾಕೂಟದ ಅಂಗವಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕ್ರೀಡಾಕೂಟಕ್ಕೆ ಪ್ರಾಯೋಜಕತ್ವವನ್ನು ವಹಿಸಿಕೊಂಡ ಹಾಗೂ ಜಾಹಿರಾತುಗಳನ್ನು ನೀಡಿ ಪ್ರೋತ್ಸಾಹಿಸಿದ ದಾನಿಗಳನ್ನು ಈ ಸಂದರ್ಭ ಅಭಿನಂದಿಸಲಾಯಿತು.


ಕ್ರೀಡಾಕೂಟದ ಪ್ರಾಯೋಜಕರು :

 

Next Post Previous Post
No Comment
Add Comment
comment url
sr7themes.eu.org