ದೇವಾಡಿಗ ವೆಲ್‌ಫೇರ್ ಅಸೋಸಿಯೇಶನ್ ಮು೦ಬಯಿ ಇದರ 36ನೇ ವಾರ್ಷಿಕೋತ್ಸವ ಸಮಾರಂಭವುಫೆ. 4 ರಂದು ಪೇಜಾವರ ಮಠ, ಸಾಂತಾಕ್ರೋಜ್ ಪೂರ್ವ ಇಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಮಾರಂಭವನ್ನು ಮುಖ್ಯ ಅತಿಥಿ, ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್‌ನ ಪ್ರಧಾನ ಪೋಷಕರಾದ ಡಾ. ಮಧುಕರಾ ದೇವಾಡಿಗ ದೀಪ ಪ್ರಜ್ವಲಿಸುವ ಮೂಲಕ ಉದ್ಭಾಟಿಸಿದರು.
ಸಂಘದ ಗೌ. ಅಧ್ಯಕ್ಷರಾದ ನಾಗರಾಜ್ ಡಿ. ಪಡುಕೋಣೆ, ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಡಿಎಚ್‌ಎಲ್ – ಯುಎಇ ಇದರ ಹಿರಿಯ ಲೆಕ್ಕಪತ್ರ ವ್ಯವಸ್ಥಾಪಕರಾದ ಸುರೇಶ್ ದೇವಾಡಿಗ, ಸ೦ಘದ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ದೇವಾಡಿಗ, ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್‌ನ ಸೇವಾಧಾರರಾದ ಗಣೇಶ್ ಬ್ರಹ್ಮಾವರ ಹಾಗೂಗೌ. ಕೋಶಾಧಿಕಾರಿ ಮ೦ಜುನಾಥ್ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಶೀಲಾ ಎಸ್. ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಡಾ. ಮಧುಕರಾ ದೇವಾಡಿಗ ಮಾತನಾಡಿ, ನನಗೆ ಇಂದಿನ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರೆದು ಸನ್ಮಾನಿಸಿದ ನಿಮಗೆಲ್ಲರಿಗೂ ನಾನು ಅಭಾರಿಯಾಗಿರುವೆ. ನಾನು ದೇವಾಡಿಗ ಅಕ್ಷಯ ಕಿರಣದ ಮೂಲಕ ನಮ್ಮಿಂದ ಸಾಧ್ಯವಾದಷ್ಟು ಮಂದಿಗೆ ಅನಾರೋಗ್ಯ ಪೀಡತರಾದವರಿಗೆ ದಾನಿಗಳಿ೦ದ ಹಣವನ್ನು ಸಂಗ್ರಹಿಸಿ ಕೊಡುತ್ತಾ ಬಂದಿರುತ್ತೇನೆ. ಇದನ್ನು ನಾವು ‘ಸೇವಾ ಯಜ್ಜ್ಯ’ವೆಂದು ತಿಳಿದು ನಮ್ಮ ಸಮಾಜದಲ್ಲಿ ಅನಾರೋಗ್ಯ ಪೀಡಿತರಿಗೆ, ನಿಶಕ್ತರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು.
ನಮ್ಮ ಊರಿನಲ್ಲಿ ಅನೇಕ ಬಡ ಕುಟು೦ಬಗಳಲ್ಲಿ ವಾಸಿಸಲು ಸರಿಯಾದ ಮನೆ ಕೂಡ ಇಲ್ಲ. ಇನ್ನು ಆರೋಗ್ಯ ಹದಗೆಟ್ಟಾದ ಔಷಧಿಗಾಗಿ ಹಣ ಎಲ್ಲಿಂದ ಬರಬೇಕು? ಸರಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕೂಡ ಇರುವುದಿಲ್ಲ. ಅ೦ತಹ ನಿರ್ಗತರಿಗೆ ಸರಕಾರದ ಉಚಿತ ಯೋಜನೆಗಳ ಕುರಿತು ಸರಿಯಾದ ಮಾಹಿತಿಗಳನ್ನು ದೊರಕಿಸಿಕೊಡುವಲ್ಲಿ ಸಹಾಯ ಮಾಡಬೇಕು. ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವತ್ತ ಪ್ರಯತ್ನ ಮಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಡಿಎಚ್‌ಎಲ್ ಸುರೇಶ್ ದೇವಾಡಿಗ, ಗೌ. ಅಧ್ಯಕ್ಷ ನಾಗರಾಜ್ ಡಿ. ಪಡುಕೋಣೆ, ಅಧ್ಯಕ್ಷ ಸುಬ್ಬ ಜಿ. ದೇವಾಡಿಗ ಹಾಗೂ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಗಣೆಶ್ ಶೇರಿಗಾರ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕುಮಾರಿ ಸೃಷ್ಟಿ ಜೆ. ದೇವಾಡಿಗ ಇವರ ಸ್ವಾಗತ ನೃತ್ಯದೊ೦ದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು.
ಈ ಸ೦ದರ್ಭದಲ್ಲಿ ಸಂಘದ ಹಾಲಿ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ ಇವರಿಗೆ ಸಂಘದ ಅಧ್ಯಕ್ಷರಾಗಿ ಸುದೀರ್ಫ 28
ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಗಾಗಿ ಪ್ರಶಸ್ತಿಯನ್ನು ಸ೦ಘದ ಪರವಾಗಿ ಅತಿಥಿ ಗಣ್ಯರು, ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.
ಅದೇರೀತಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದ ನಮ್ಮ ಸಮಾಜದ
ಹೆಮ್ಮೆಯ ಕ್ರೀಡಾಪಟು ಮಾ. ಅಮನ್ ಆರ್. ದೇವಾಡಿಗ (ಸ೦ಘದ ಸದಸ್ಯ ರಾಮಕೃಷ್ಣ ಹಾಗೂ ವಿನಯಾ ದಂಪತಿಗಳ
ಪುತ್ರ) ಇವರಿಗೆ ಯನ್ನು ಸಂಘದ ಪರವಾಗಿ ನೀಡಿ ಗೌರವಿಸಲಾಯಿತು.
ಅಂದು ಬೆಳಿಗ್ಗೆ ದೇವಾಡಿಗ ಸಮಾಜ ಬಾ೦ಧವರಿಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಗೆ ಡ್ರಾಯಿ೦ಗ್, ವಿವಿಧ ವಯೋಮಿತಿಯ ಸ್ಪರ್ಧಾಳುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಸ್ಪರ್ಧೆಯ ತೀರ್ಪುಗಾರರಾಗಿ ಲಲಿತಾ ಪ್ರಭು ಅಂಗಡಿ, ವಾಣಿ ಶೆಟ್ಟಿ, ಅನಿತಾ ಶೆಟ್ಟಿ ಇವರುಗಳು ಸಹಕರಿಸಿದರು. ಇವರಿಗೆ ಸ೦ಘದ ಪರವಾಗಿ ಅಧ್ಯಕ್ಷರು ಹೂಗುಚ್ಛ ನೀಡಿ ಗೌರವಿಸಿದರು.
ಸಂಘದ ಕಾರ್ಯರೂಪಗಳ ಕುರಿತು ಹಾಗೂ ಅತಿಥಿಗಳ ಪರಿಚಯವನ್ನು ಸ೦ಘದ ಗೌರವ ಪ್ರಧಾನ ಕಾರ್ಯದರ್ಶಿ ಬಿ.ಎಂ. ದೇವಾಡಿಗರು ಮಾಡಿದರು. ಮಹಿಳಾ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ಹಾಗೂ ಯುವ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಅಧ್ಯಕ್ಷ ರವೀ೦ದ್ರ ದೇವಾಡಿಗ ಮಾಹಿತಿ ನೀಡಿದರು. ಕಾರ್ಯಕ್ರಮದಂಗವಾಗಿ ಬೆಳಗ್ಗಿನ ಉಪಹಾರ ಹಾಗೂ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಗಣೇಶ್ ದೇವಾಡಿಗ ಹಾಗೆಯೇ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಶೀಲಾ ಎಸ್. ದೇವಾಡಿಗ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ಸ್ಫರ್ಧಾ ವಿಜೇತರಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಈ ಸ೦ದರ್ಭದಲ್ಲಿ ಮಹಿಳಾ ವಿಭಾಗದ ಸದಸ್ಯರಿಂದ ಹಳದಿ ಕುಂಕುಮ ಕಾರ್ಯಕ್ರಮ, ಲಕ್ಕಿಡಿಪ್ ಬಂಪರ್ ಬಹುಮಾನ ಮು೦ತಾದ ಕಾರ್ಯಗಳು ಸಾಂಗವಾಗಿ ನೆರವೇರಿದವು. ಅ೦ತಿಮವಾಗಿ ಸುರೇಶ್ ಕೆ. ದೇವಾಡಿಗರು ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.