ವಾರ್ಷಿಕ ಕ್ರಿಡಾಕೂಟ, ಕ್ರಿಕೆಟ್‌ ಟೂರ್ನಮೆಂಟ್‌ – 2023

Spread the News...

ವಾರ್ಷಿಕ ಕ್ರಿಡಾಕೂಟ, ಕ್ರಿಕೆಟ್‌ ಟೂರ್ನಮೆಂಟ್‌ – 2023

ಮುಂಬೈಯ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಇದರ ಯುವ ವಿಭಾಗದ ನೇತೃತ್ವದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಡಿ.ಪಿ.ಎಲ್ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 24 ರಂದು ಸಾಯನ್ ಕೋಳಿವಾಡ ಜಿ.ಟಿ.ಬಿ ನಗರ, ಗುರುನಾನಕ್ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ಜರಗಿತು.

ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ದೇವಾಡಿಗ ಬಾಂಧವರಿಗಾಗಿ ಆಯೋಜಿಸಲಾಗಿದ್ದು, ವಿಶೇಷವಾಗಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ 6 ತಂಡಗಳು ಭಾಗವಹಿಸಿದ್ದು, ಅಂತಿಮ ಸುತ್ತಿನಲ್ಲಿ ದುರ್ಗಾ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೇ, ಬಿಜೂರ್ ಫ್ರೆಂಡ್ಸ್ ತಂಡವು ರನ್ನರ್ ಅಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಬೆಳಿಗ್ಗೆ 8.30 ರಿಂದ ಆರಂಭಗೊಂಡ ಈ ಕ್ರೀಡಾಕೂಟವನ್ನು ಸಂಘದ ಗೌರವ ಅಧ್ಯಕ್ಷರಾದ ನಾಗರಾಜ್ ಪಡುಕೋಣೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ವಿವಿಧ ವಯೋಮಾನದವರಿಗೆ ಹಾಗೂ ಚಿಕ್ಕ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದು ಹೆಚ್ಚಿನ ದೇವಾಡಿಗ ಬಾಂಧವರು ಭಾಗವಹಿಸಿದ್ದರು.ಈ ವರ್ಷದ ಕ್ರೀಡಾಕೂಟಕ್ಕೆ ಪ್ರಾಯೋಜಕತ್ವ ವಹಿಸಿಕೊಂಡ ಹಾಗೂ ಕ್ರೀಡಾ ಕೂಟಕ್ಕೆ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.ಕ್ರಿಕೆಟ್ ಪಂದ್ಯಾಟದ ತೀರ್ಪುಗಾರರಾಗಿ ಸಹಕರಿಸಿದ ಶ್ರೀ ಶೇಖರ್ ದೇವಾಡಿಗ ನಾಗೂರ್ , ಶ್ರೀ ರಾಜ್ ಕಂಚಿಖಾನ್ ಇವರುಗಳನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.

ಫೋಟೋ : ಪ್ರಭಾಕರ್ ದೇವಾಡಿಗ