ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 10, 2021 ರಂದು ನೆರವೇರಿಸಲಾಯಿತು.

Spread the News...

ಸಂಘದ ಕಚೇರಿಯಲ್ಲಿ ಪ್ರತಿ ವರ್ಷ ಜರುಗುವ  ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 10, 2021 ರಂದು ನೆರವೇರಿಸಲಾಯಿತು.

ಕೋವಿಡ್ ಪರಿಣಾಮದಿಂದ ಮಹಾರಾಷ್ಟ್ರ ಮುಂಬೈ ಇನ್ನು ಸಂಪೂರ್ಣವಾಗಿ ಚೇತರಿಸಿ ಕೊಳ್ಳದ ಕಾರಣ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮಕೆ ಹಾಜರಿರಲು ಸಾಧ್ಯವಾಗಲಿಲ್ಲ. ಆದರೂ ನಮ್ಮ ಸಂಘದ ಕೆಲವು ಸದಸ್ಯರು ನಮ್ಮ ಸಂಘದ ಪರಂಪರೆಯಾಗಿ ನಡೆಸಿ ಕೊಂಡು ಬರುತ್ತಿರುವ ಶಾರದಾ ಪೂಜೆಯನ್ನು ಆಚರಿಸುವಲ್ಲಿ ಸಫಲರಾದರು. ಮಧ್ಯಾಹ್ನ 2 ಗಂಟೆಗೆ  ಆರಂಭಗೊಂಡ ಶಾರದಾ ಪೂಜೆ, ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಯುವ ವೇದಿಕೆಯಾ ಸದಸ್ಯರು ಶಾರದಾ ಪೂಜೆಯನ್ನು ಆರಂಭಿಸಿದರು. ಮಂಗಳಾರತಿಯ ನಂತರ ಗಂಧ ಪ್ರಸಾದವನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ಸುಬ್ಬ ಜಿ ದೇವಾಡಿಗರು ತಮ್ಮ ಕುಟುಂಬ ಸಮೇತ ಶಾರದಾ ಪೂಜೆಗೆ ಹಾಜರಿದ್ದರು ಯುವ ವೇದಿಕೆಯ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.