ಮುಂಬೈ : ಡೊಂಬಿವಿಲಿ ನಿವಾಸಿಯಾದ ಮೂಲತಃ ಬೈಂದೂರು ತಾಲೂಕಿನ ಖಂಬದಕೋಣೆ ಹೆದ್ದಾರಿ ಮನೆಯವರಾದ ನಾರಾಯಣ ಎನ್ ದೇವಾಡಿಗ (೫೯) ಅವರು ಡಿ ೨೪ ರ ಗುರುವಾರ ನಿಧನ ಹೊಂದಿದರು. ಮೃತರು ಕುಟುಂಬಸ್ಥರು, ಅಪಾರ ಬಂಧು ಮಿತ್ರರ ಬಳಗವನ್ನು ಅಗಲಿದ್ದಾರೆ. ಇವರು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮುಖ್ಯ ಪ್ರಬಂಧಕರೂ, ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ನ ಸ್ಥಾಪಕ ಸದಸ್ಯರು ಹಾಗೂ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ಅವರ ನಿಧನಕ್ಕೆ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.