ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ಶಾರದಾ ಪೂಜೆ-2020.

Spread the News...

ಸಂಘದ ಕಚೇರಿಯಲ್ಲಿ ಪ್ರತಿ ವರ್ಷ ಜರುಗುವ  ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 18, 2020 ರಂದು ನೆರವೇರಿಸಲಾಯಿತು.

ಕೋವಿಡ್ – 19 ಕಾರಣದಿಂದ ರಾಜ್ಯದಲ್ಲಿ ಲೊಕ್ಡೌನ್ ಇದ್ದ ಕಾರಣ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮಕೆ ಹಾಜರಿರಲು ಸಾಧ್ಯವಾಗಲಿಲ್ಲ . ಶಾರದಾ ಪೂಜೆ ಮಧ್ಯಾಹ್ನ 2 ಗಂಟೆಗೆ  ಆರಂಭಗೊಂಡು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಯುವ ವೇದಿಕೆಯಾ ಸದಸ್ಯರು ಶಾರದಾ ಪೂಜೆಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಭಜನೆಯನ್ನು ಶ್ರದ್ಧಾ ಭಕ್ತಿಯಿಂದ ಹಾಡಿದರು. ಮಂಗಳಾರತಿಯ ನಂತರ ಗಂಧ ಪ್ರಸಾದವನ್ನು ವಿತರಿಸಲಾಯಿತು.

ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್ ದೇವಾಡಿಗ ಯುವ ವೇದಿಕೆಯ ಅಧ್ಯಕ್ಷ ಶ್ರೀ ರವೀಂದ್ರ ದೇವಾಡಿಗ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.