ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಸಂಘದ ಕಚೇರಿಯಲ್ಲಿ ಕಾರ್ಯಕ್ರಮ.

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ ಜನವರಿ 17 ರಂದು ನಡೆಯುವ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಸಂಘದ ಕಚೇರಿಯಲ್ಲಿ ಜನವರಿ 3 ರಂದು ಡ್ರಾಯಿಂಗ್, ಮೆಹೆಂದಿ, ಸಿಂಗಿಂಗ್ ಹಾಗೂ ಅಡುಗೆ ಸ್ಪರ್ಧೆಗಳನ್ನು ಯಶಸ್ವಿಯಾಗಿ ನೆರವೇರಿಸಿತು.ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ನೆರವಾದರು. ಅಧಿಕ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಇನ್ನುಳಿದ ಸ್ಪರ್ಧೆಗಳನ್ನು ವಾರ್ಷಿಕೋತ್ಸವದ ದಿನ ನಡೆಸಲಾಗುವುದು.ಹಾಗೆಯೇ ಇಂದಿನ ಸ್ಪರ್ಧಾ ವಿಜೇತರಿಗೆ ಜನವರಿ 17ರ ವಾರ್ಷಿಕೋತ್ಸವದ ದಿನ ಬಹುಮಾನಗಳನ್ನು ನೀಡಲಾಗುವುದು.ಇಂದಿನ ಸ್ಪರ್ಧೆಯ ತೀರ್ಪುಗಾರರಾಗಿ ಸೌಮ್ಯ ಪ್ರಸಾದ್ ಹಾಗೂ ವೀಣಾ ಪ್ರಭು ಇವರು ಸಹಕರಿಸಿದರು. ಸಂಘದ ಉಪಾದ್ಯಕ್ಷರಾದ ಶ್ರೀ ಎನ್. ಎನ್. ದೇವಾಡಿಗ ಹಾಗೂ ಗೌ.ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ ಅವರು ತೀರ್ಪುಗಾರರಿಗೆ ಹೂಗುಚ್ಛ ನೀಡಿ ಗೌರವಿಸಿದರು.ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಿ.ಎ. ದೇವಾಡಿಗ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸೂಚಿಸಿ, ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಸಾಂಸ್ಕ್ರತಿಕ ವಿಭಾಗದ ಸಂಚಾಲಕ ಶ್ರೀ ಅಶೋಕ್ ಕೆ. ದೇವಾಡಿಗ ಅವರು ನಿರೂಪಿಸಿದರು.