ಮುಂಬಯಿ, ಜ.೨೧: ದೇವರುಗಳ ಸಾಮೀಪ್ಯವುಳ್ಳ ದೇವಾಡಿಗರು ನಿಷ್ಕಲಂಕ ಮನೋಧರ್ಮದ ಬಂಧುಗಳಾಗಿದ್ದಾರೆ. ಅವರ ಮಹಾ ಪ್ರಯತ್ನ ಮತ್ತು ಭಕ್ತಿಯ ಶ್ರಮ ಇಂದು ಫಲಪ್ರದವಾಗಿದೆ. ದೇವರ ಉಪಾಸನೆಯಿಂದ ಸಮಾಜದ ರಕ್ಷಣೆ ಸಾಧ್ಯವಾಗಿದ್ದು ಇದನ್ನು ಪೂರೈಸುವಲ್ಲಿ ದೇವಾಡಿಗ ಭಕ್ತರ ಆಶಯಗಳು ತಮ್ಮ ಸ್ವಕ್ಷೇತ್ರದ ಮುಖೇನ ಒಂದಾಗಿವೆ. ವಿಶ್ವದಾದ್ಯಂತ ದೇವಡಿಗ ಬಂಧುಗಳು ತಮ್ಮ ಆರಾಧ್ಯದೇವರ ಕ್ಷೇತ್ರವನ್ನು ಬೆಳಗಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ. ದೇವಸ್ಥಾನವು ಶೀಘ್ರವೇ ರೂಪ ತಳೆದು ಸಮಗ್ರ ಭಗವದ್ಭಕ್ತರಿಗೆ ಸಮೃದ್ಧಿಯ ತಾಣವಾಗಿ ಪರಿಣಮಿಸಲಿ ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಎಂದರು.
ಉಡುಪಿ ಜಿಲ್ಲೆಯ ಬಾರಕೂರು ಕಚ್ಚೂರು ಗ್ರಾಮದ ಸಿಂಹಾಸನ ಗುಡ್ಡೆಯ ದೇವಸ್ಥಾನ ನಿರ್ಮಾಣ ಆವರಣದಲ್ಲಿ ಇಂದಿಲ್ಲಿ ಗುರುವಾರ ಬೆಳಿಗ್ಗೆ ದೇವಾಡಿಗರ ಆರಾಧ್ಯ ದೇವತೆ ಶ್ರೀ ಏಕನಾಥೇಶ್ವರೀ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿ ನೆರೆದ ಭಕ್ತರನ್ನು ಹರಸಿ ಪಲಿಮಾರು ಶ್ರೀಪಾದರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ನಡೆಸಲ್ಪಟ್ಟ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಗೌರವ ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸೈಂಟ್ ಪೀಟರ್ಸ್ ಚರ್ಚ್ನ ಸಹಾಯಕ ಧರ್ಮಗುರು ಫಾ| ಐವಾನ್ ಸಿಕ್ವೇರಾ, ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಡಿ’ಸೋಜಾ, ಉದ್ಯಮಿಗಳಾದ ವಾಕ್ವಾಡಿ ಪ್ರವೀಣ್ ಶೆಟ್ಟಿ ದುಬಾಯಿ, ಬಾಬು ಶಿವ ಪೂಜಾರಿ (ವಿಶ್ವಸ್ಥ ಸದಸ್ಯ), ನಾಗರಾಜ ಪಡುಕೋಣೆ ಮುಂಬಯಿ, ಬಿ.ಶಾಂತರಾಮ್ ಶೆಟ್ಟಿ, ಕೆ.ವಿಶ್ವನಾಥ ಭಂಡಾರಿ, ಶ್ರೀನಿವಾಸ ಶೆಟ್ಟಿಗಾರ್, ನಿವೃತ್ತ ಉಪನ್ಯಾಸಕ ಡಾ| ಬಿ.ಮಂಜುನಾಥ ಸೋಮಾಯಜಿ, ಧರ್ಮದರ್ಶಿಗಳಾ ದ ಕೃಷ್ಣಪ್ಪ ಉಪ್ಪೂರು, ಬಿ.ಮಂಜುನಾಥ ರಾವ್, ಕೆ.ಗೋಪಾಲ ರಾವ್ ಕಿನ್ನಿಗೋಳಿ, ವೆಂಕಟ್ರಾಮಣ ಭಂಡಾರ್ಕ್ರ್, ಡಿ.ಎಸ್ ಚೆನ್ನಪ್ಪ, ಅನಂತ ಪದ್ಮನಾಭ, ಸತ್ಯನಾರಾಯಣ ಉಡುಪ, ಕೆ.ಮಧುಸೂಧನ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ವಾಸು ಎಸ್.ದೇವಾಡಿಗ ಮುಂಬಯಿ, ಆನಂದ ದೇವಾಡಿಗ ದುಬಾಯಿ, ವಾಮನ ಮರೋಳಿ ಮಂಗಳೂರು, ಕೆ.ವಿ ಸುಬ್ಬಣ್ಣ, ಸುಬ್ಬಯ ದೇವಾಡಿಗ ದುಬಾಯಿ, ಗಣಪತಿ ಭಟ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಅಸೀನರಾಗಿದ್ದರು.
ದೇವಾಡಿಗರು ಸಮರಸ ಸಂಬಂಧಗಳನ್ನು ಬೆಸೆದು ಬಾಳುತ್ತಿರುವ ಬಾಂಧವರು. ಚಿಕ್ಕ ಸಮುದಾಯವಾಗಿ ಇದ್ದರೂ ರಾಷ್ಟ್ರ ಜಗತ್ತಿನಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದವರಾಗಿದ್ದಾರೆ. ಇವರು ತಮ್ಮ ಆರಾಧ್ಯ ದೇವತೆಗಾಗಿ ಸರ್ಮಪಿಸಲಿರುವ ಈ ದೇವಸ್ಥಾನ ಸರ್ವರಿಗೂ ಸನ್ಮಂಗಳವಾಗಲಿ ಎಂದು ಸೊರಕೆ ಶುಭ ಹಾರೈಸಿದರು.ಕೋಟ ಶ್ರೀನಿವಾಸರು ಮಾತನಾಡಿ ದೇವರು ಅಂದರೆ ದೇವರ ಪರಮ ಸೇವಕರು. ಇವರ ಸ್ನೇಹಶೀಲತೆ, ಸೌಮ್ಯತ್ವ ಮತ್ತು ಸಾಮರಸ್ಯದ ಬದುಕು ಸರ್ವರಿಗೂ ಮಾದರಿ. ಇಂತಹ ಬಂಧುಗಳ ಕುಲದೇವರ ಪ್ರತಿಷ್ಠಾಪನೆ ಸ್ತುತ್ಯರ್ಹ. ತಮ್ಮೆಲ್ಲರ ಧರ್ಮನಿಷ್ಠೆ ಸಫಲತೆ ಹೊಂದಲಿ. ಈ ದೇವಸ್ಥಾನ ಸಾರ್ಥಕವಾಗಿಸುವಲ್ಲಿ ಧನ ಸಹಾಯ ಸಾಧ್ಯವಾಗದವರು ಕರ ಸೇವೆಗೈದಾದರೂ ಸೇವೆಗೆ ಮುಂದಾಗಿರಿ ಎಂದರು. ದೇವಸ್ಥಾನ ಸಮಿತಿ ಉಪಾಧ್ಯಕ್ಷರುಗಳಾದ ನಾರಾಯಣ ಎಂ. ದೇವಾಡಿಗ, ದಿನೇಶ್ ಬಿ.ದೇವಾಡಿಗ, ಹರೀಶ್ ಶೇರಿಗಾರ್ ದುಬಾಯಿ, ಜನಾರ್ದನ ಎಸ್.ದೇವಾಡಿಗ ಮುಂಬಯಿ, ಎನ್.ರಘುರಾಮ ದೇವಾಡಿಗ ಶಿವಮೊಗ್ಗ, ಗೌ| ಪ್ರ| ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ ಉಡುಪಿ, ಗೌರವ ಕೋಶಾಧಿಕಾರಿ ಜನಾರ್ಧನ ದೇವಾಡಿಗ ಬಾರ್ಕೂರು, ವಿಶ್ವಸ್ಥ ಸದಸ್ಯರಾದ ಸುರೇಶ ಡಿ.ಪಡುಕೋಣೆ, ಹಿರಿಯಡ್ಕ ಮೋಹನ್ದಾಸ್, ಗೌರವ ಸಲಹಾದಾರರಾದ ಸೀನ ದೇವಾಡಿಗ ದುಬಾಯಿ, ರಾಜು ದೇವಾಡಿಗ, ನರಸಿಂಹ ದೇವಾಡಿಗ, ಆನಂದ್ ಎಸ್.ದೇವಾಡಿಗ, ಶಾಂತರಾಮ ಶೆಟ್ಟಿ, ಮಂಜುನಾಥ ಸೋಮಯಾಜಿ ಬಾರ್ಕೂರು, ವಿಶ್ವನಾಥ್ ಭಂಡಾರಿ ಹಾಗೂ ದೇವಸ್ಥಾನ ನಿರ್ಮಾಣ ಸಮಿತಿ ಸದಸ್ಯರು, ವಲಯ ಸಮಿತಿಗಳ ಮುಖ್ಯಸ್ಥರುಗಳು, ವಿವಿಧ ದೇವಾಡಿಗ ಸಂಸ್ಥೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ದೇವಸ್ಥಾನ ಸಮಿತಿ ಗೌ| ಪ್ರ| ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ ಉಡುಪಿ, ಗೌರವ ಕೋಶಾಧಿಕಾರಿ ಜನಾರ್ದನ ದೇವಾಡಿಗ ಬಾರ್ಕೂರು, ದೇವಾಡಿಗ ಸಮುದಾಯದ ಮುಂದಾಳುಗಳಾದ ಎಸ್.ಕೆ ಶ್ರೀಯಾನ್, ಗೋಪಾಲ ಎಂ.ಮೊಲಿ, ಕೆ.ಮೋಹನ್ದಾಸ್, ಗಣೇಶ್ ದೇವಾಡಿಗ, ನರಸಿಂಹ ದೇವಾಡಿಗ, ರತ್ನಾಕರ್ ಜಿ.ಎಸ್., ಸುರೇಶ್ ದೇವಾಡಿಗ, ರವಿ ಎಸ್.ದೇವಾಡಿಗ, ಸುಶೀಲಾ ಎಸ್.ದೇವಾಡಿಗ, ಸುರೇಖಾ ದೇವಾಡಿಗ ಮುಂಬಯಿ ಮತ್ತು ಪ್ರಕಾಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ವಿದ್ವಾನ್ ವೇ| ಮೂ| ಲಕ್ಷ್ಮೀ ನಾರಾಯಣ ಸೋಮಾಯಜಿ ಅವರು ತಮ್ಮ ಪೌರೋಹಿತ್ಯದಲ್ಲಿ ವಾಸ್ತು ಮತ್ತು ಶಿಲಾನ್ಯಾಸ ಪೂಜೆ, ಗಣಪತಿ, ಶಿಲಾ ಮತ್ತು ವೇ| ಮೂ| ಕೆ.ಗಣಪತಿ ಉಡುಪ ಮತ್ತು ವೇ| ಮೂ| ಸತೀಶ್ ಮಂಜರು ಅವರು ಭೂಪೂಜೆ ನೆರವೇರಿಸಿ ಪ್ರಸಾದವನ್ನಿತ್ತು ಹರಸಿದರು. ದೇವಸ್ಥಾನ ಸಮಿತಿ ಗೌ| ಪ್ರ| ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ ಉಡುಪಿ ಸ್ವಾಗತಿಸಿದರು. ಅಧ್ಯಕ್ಷ ಬಿ.ಅಣ್ಣಯ್ಯ ಶೇರಿಗಾರ್ ಪುಣೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಮಾ ದೇವಾಡಿಗ ಮತ್ತು ಬಳಗ ಪ್ರಾರ್ಥನೆಯನ್ನಾಡಿದರು. ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥ ಮತ್ತು ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ ದೇವಸ್ಥಾನ ನಿರ್ಮಾಣದ ಬಗ್ಗೆ ಮಾಹಿತಿಯನ್ನೀಡಿದರು. ಹಿರಿಯಡ್ಕ ಮೋಹನ್ದಾಸ್ (ಮಾಜಿ ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ) ದಾನಿಗಳ ಪಟ್ಟಿ ವಾಚಿಸಿದರು. ಪ್ರವೀಣ್ ಬ್ರಹ್ಮವಾರ ಅತಿಥಿಗಳನ್ನು ಪರಿಚಯಿಸಿದರು. ವಸಂತ್ ಕುಮಾರ್ ನಿಟ್ಟೆ, ರಾಘವೇಂದ್ರ ನಿಟ್ಟೆ, ಗಣೇಶ್ ಶೇಇಗಾರ್ ಬ್ರಹ್ಮವಾರ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ದೇವಾಡಿಗ ಅಂಕದಕಟ್ಟೆ ವಂದನಾರ್ಪಣೆಗೈದರು.