ದೇವಾಡಿಗ ಸಂಘ- ಮುಂಬೈ, ಸಿಟಿ ರೀಜನ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮ.

Spread the News...

ಮುಂಬೈ, ದಾದರ್ ದೇವಾಡಿಗ ಸಂಘ ಮುಂಬೈ ಇದರ ದಾದರ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಸಿಟಿ ರೀಜನ್ ಪ್ರಾದೇಶಿಕ ಸಮಿತಿಯ ಪ್ರಾಯೋಜಕತ್ವದಲ್ಲಿ ಮಹಾತ್ಮ ಗಾಂಧೀ ಬ್ಲಡ್ ಬಾಂಕ್ ನ ಸಹಕಾರದಲ್ಲಿ ರಕ್ತದಾನ ಶಿಬಿರವು ಇತ್ತೀಚಿಗೆ ನಡೆಯಿತು.

ರಕ್ತದಾನ ಶಿಬಿರದ ಉದ್ಘಾಟನೆಯನ್ನು ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ಶ್ರೀ ವಾಸು ದೇವಾಡಿಗ ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಈ ಸಂಧರ್ಭದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲ್ ಎಂ. ಮೊಯ್ಲಿ, ದೇವಾಡಿಗ ಸಂಘ ಮುಂಬಯಿ ಇದರ ಗೌ. ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ. ಮೊಯ್ಲಿ, ಕೋಶಾಧಿಕಾರಿ ಶ್ರೀ ವಿಶ್ವನಾಥ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಗೋಪಿನಾಥ್ ಎಸ್. ರಾವ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ  ರಂಜನಿ ಮೊಯ್ಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ದೀಕ್ಷಿತ್ ಎಲ್. ದೇವಾಡಿಗ, ಸಿಟಿ ರೀಜನ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಶ್ರೀಧರ್ ಶೇರಿಗಾರ್ ಮತ್ತು ಸಿಟಿ ರೀಜನ್ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ಗೀತಾ ಎಲ್. ದೇವಾಡಿಗ, ಸಿಟಿ ರೀಜನ್ ಯುವ ವಿಭಾಗದ ಕಾರ್ಯಾಧ್ಯಕ್ಷ ಶಿವಸಾಗರ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು.

ಸುಮಾರು 40ಕ್ಕೂ ಮೇಲ್ಪಟ್ಟು ರಕ್ತದಾನಿಗಳು ಹಾಗೂ ಸಂಘದ ಸದಸ್ಯರುಗಳು ರಕ್ತದಾನ ನೀಡಿದರು. ಬೆಳಗ್ಗಿನ ಉಪಚಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಂಘದ ವತಿಯಿಂದ ಮಾಡಲಾಗಿತ್ತು.CA ಪರೀಕ್ಷೆಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕು. ನಿಲಿಶಾ ಆರ್. ಮೊಯ್ಲಿ ಮತ್ತು MA ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀಮತಿ ಸುರೇಖಾ ಎಚ್. ದೇವಾಡಿಗರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ದೇವಾಡಿಗ ಸಂಘದ ಉಪಾಧ್ಯಕ್ಷರಾದ ಶ್ರೀ ರವಿ ದೇವಾಡಿಗ, ನಿಕಟಪೂರ್ವ ಅಧ್ಯಕ್ಷ ಹಿರಿಯಡ್ಕ ಶ್ರೀ ಮೋಹನ್ ದಾಸ್, ಗೌ. ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ, ಗೌ. ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುರೇಖಾ ಎಚ್. ದೇವಾಡಿಗ, ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಇದರ ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲ ಎಸ್. ದೇವಾಡಿಗ, ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈಯ ಯುವ ವಿಭಾಗದ ಅಧ್ಯಕ್ಷ ಶ್ರೀ ಉಮೇಶ್ ಆರ್. ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು
.ಕು. ನಿಲಿಶಾ ಆರ್. ಮೊಯ್ಲಿ ಮತ್ತು  ಕು. ಶಮಿಕಾ ದೇವಾಡಿಗ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ರಂಜನಿ ಆರ್. ಮೊಯ್ಲಿ ಕಾರ್ಯಕ್ರಮ ನಿರೂಪಿಸಿದರೆ, ನಿತೇಶ್ ದೇವಾಡಿಗ ವಂದಿಸಿದರು.