ದೇವಾಡಿಗ ಸಂಘ ಮುಂಬಯಿ ಯುವ ವಿಭಾಗ ಆಯೋಜನೆಯ DPL – 2016, ಸೀಸನ್ – 5 ಚಾಂಪಿಯನ್ ಪಟ್ಟ ಅಲಂಕರಿಸಿದ ‘ಬಿಜೂರ್ ಫ್ರೆಂಡ್ಸ್’

Spread the News...

ಮುಂಬಯಿ, ದೇವಾಡಿಗ ಸಂಘ ಮುಂಬಯಿ ಯುವ ವಿಭಾಗದವರು ಆಯೋಜಿಸಿದ್ದ ದೇವಾಡಿಗ ಪ್ರಿಮಿಯರ್ ಲೀಗ್ – 2016 ಸೀಸನ್ – 5 (ಡಿಪಿಎಲ್ – 2016) ಕ್ರಿಕೆಟ್ ಟೂರ್ನಮೆಂಟ್ ಜೂನ್ 5 ರಂದು ಸೀತಾರಾಮ್ ಪಾಟಿಲ್ ಗ್ರೌಂಡ್ ಸಾನ್ಪಾಡಾ ಇಲ್ಲಿ ನೆರವೇರಿದ್ದು, ಚಾಂಪಿಯನ್ ಆಗಿ ‘ಬಿಜೂರ್ ಫ್ರೆಂಡ್ಸ್’ ಹೊರಹೊಮ್ಮಿತು.ಕ್ರೀಡಾಕೂಟದ ಉದ್ಘಾಟನೆಯನ್ನು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ ಅವರು ನೆರವೇರಿಸಿದರು. ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಮುಂಬಯಿಯ ಉಪಾಧ್ಯಕ್ಷ ಶ್ರೀ ರವಿ ದೇವಾಡಿಗ, ಕಾರ್ಯದರ್ಶಿ ಶ್ರೀ ಪದ್ಮನಾಭ ದೇವಾಡಿಗ ಹಾಗೂ ಶ್ರೀ ಗಣೇಶ್ ಶೇರಿಗಾರ್, ಕ್ರೀಡಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ರಂಜನಿ ಮೊಯ್ಲಿ, ಕ್ರೀಡಾ ಕಾರ್ಯದರ್ಶಿ ಸತೀಶ್ ಕಣ್ವತಿರ್ಥ ಹಾಗೂ ಮಹೇಶ್ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕಾರ್, ಎಜುಕೇಶನ್ ಕಮಿಟಿ ಮುಖ್ಯಸ್ಥೆ ಶ್ರೀಮತಿ ಮಾಲತಿ ಮೊಯ್ಲಿ, ಅಂತರಾಷ್ಟ್ರಿಯಾ ಕ್ರೀಡಾಪಟು ಶ್ರೀಮತಿ ಜಯಂತಿ ಎಂ. ದೇವಾಡಿಗ ಹಾಗೂ ಯುವ ವಿಭಾಗದ ಅಧ್ಯಕ್ಷ ದೀಕ್ಷಿತ್ ದೇವಾಡಿಗ ಉಪಸ್ಥಿತರಿದ್ದರು.

ಡಿಪಿಎಲ್ – 2016 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಸುಧೀರ್ ಬಿಜೂರ್ ನೇತ್ರತ್ವದ ‘ಬಿಜೂರ್ ಫ್ರೆಂಡ್ಸ್’ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಯಥಿನ್ ದೇವಾಡಿಗ ನೇತ್ರತ್ವದ ಡೊಂಬಿವಲಿ LCC  ತಂಡವು ರನ್ನರ್ ಅಪ್ ಆಗಿ ಮೂಡಿಬಂತು.ಸರಣಿ ಶ್ರೇಷ್ಟ ಆಟಗಾರನಾಗಿ ಬಿಜೂರ್ ಫ್ರೆಂಡ್ಸ್ ತಂಡದ ಅರುಣ್ ಕುಮಾರ್ ಆಯ್ಕೆಯಾದರೆ, ಬಿಜೂರ್ ಫ್ರೆಂಡ್ಸ್ ನ ಸುಧೀರ್ ಬಿಜೂರ್ ಶ್ರೇಷ್ಟ ಬ್ಯಾಟ್ಸಮನ್ ಆಗಿ ಆಯ್ಕೆಯಾದರು. ಅತ್ಯ್ತುತ್ತಮ ಫಿಲ್ದರ್ ಆಗಿ ವೀರ ಮಾರುತಿ ನಾಗೂರು ತಂಡದ ಮಹೇಶ್ ದೇವಾಡಿಗ ಆಯ್ಕೆಯಾದರು. ಅಲ್ಲದೆ ಮಹಿಳಾ ಕ್ರಿಕೆಟ್ ಕೂಡ ಆಯೋಜಿಸಲಾಗಿದ್ದು ನಿಲಿಶಾ ಮೊಯ್ಲಿ ಮತ್ತು ತಂಡ ವಿಜೇತರಾದರೆ, ಕಿಶೋರಿ ದೇವಾಡಿಗ ಮತ್ತು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು.ಸಂಜೆ ನಡೆದ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ಸಂಘದ ಮಾಜೀ ಅಧ್ಯಕ್ಷ ಎಚ್ ಮೋಹನದಾಸ್, ಲೀಗಲ್ ಶೆಲ್ ಹೆಡ್ ಅಡ್ವೋಕೇಟ್ ಪ್ರಭಾಕರ್, ವಾಸು ದೇವಾಡಿಗ, ಗಣೇಶ್ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.