ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ 30 ನೇ ವಾರ್ಷಿಕ ಮಹಾಸಭೆ.

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ)  ಮುಂಬಯಿ ಇದರ 30 ನೇ ವಾರ್ಷಿಕ ಮಹಾಸಭೆಯು ದಿನಾಂಕ 20 / 08 / 2017 ರಂದು ಮೈಸೂರು ಅಸೋಸಿಯೇಷನ್, ಭಾವುಧಾಜಿ ರೋಡ್, ಮಾತುಂಗ (matunga)  ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸುಬ್ಬ ಜಿ. ದೇವಾಡಿಗರ  ಅಧ್ಯಕ್ಷತೆಯಲ್ಲಿ ನೆರವೇರಿತು.

ವೇದಿಕೆಯಲ್ಲಿ ಸಂಘದ ಗೌರವ ಉಪಾಧ್ಯಕ್ಷ ಶ್ರೀ ನಾಗರಾಜ್ ಪಡುಕೋಣೆ, ವಿಶೇಷ ಅತಿಥಿಯಾಗಿ ಆಗಮಿಸಿದ ಶ್ರೀ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಟ್ರಷ್ಟಿ ಶ್ರೀ ಅಣ್ಣಯ್ಯ ಬಿ. ಶೇರಿಗಾರ್, ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ ಉಪಸ್ಥಿತರಿದ್ದರು.ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್. ದೇವಾಡಿಗರ ಪ್ರಾರ್ಥನೆಯೊಂದಿಗೆ ಮಹಾಸಭೆಯು ಆರಂಭಗೊಂಡಿತು.

29 ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಗೌ.ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ ಇವರು ವಾಚಿಸಿದರೆ, ಗತ ವರ್ಷದ  ವಾರ್ಷಿಕ ವರಧಿಯನ್ನು ಜೊತೆ ಕಾರ್ಯದರ್ಶಿ ಶ್ರೀ ಅಶೋಕ್ ಕೆ. ದೇವಾಡಿಗ ಪ್ರಸ್ತುತಪಡಿಸಿದರು. 2016-17 ರ ಲೆಕ್ಕಪತ್ರ ವರಧಿಯನ್ನು ಶ್ರೀ ಶ್ರೀನಿವಾಸ್ ದೇವಾಡಿಗರು ಮಂಡಿಸಿದರು. ಮಹಾಸಭೆಯಲ್ಲಿ ಹಾಲಿ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ,  ಮುಂದಿನ ೩ ವರ್ಷಗಳ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ಸಂಘಕ್ಕೆ ಅಗತ್ಯವಿರುವ ನಿವೇಶನ ಮುಂತಾದ ವಿಷಯಗಳ ಕುರಿತು ವಿವರವಾಗಿ ಚರ್ಚೆ ನಡೆಯಿತು.ಮುಖ್ಯವಾಗಿ ಸಂಘದ ಗೌರವ ಉಪಾಧ್ಯಕ್ಷರಾದ ಶ್ರೀ ನಾಗರಾಜ್ ಪಡುಕೋಣೆ ಅವರು ಸಂಘದ ನೂತನ ಕಟ್ಟಡದ ಬಗ್ಗೆ, ಅದಕ್ಕೆ ಬೇಕಾದ ಬಂಡವಾಳ ಕ್ರೋಡೀಕರಣದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಅದಕ್ಕೆ ಸಂಬಂಧಪಟ್ಟಂತೆ ಸದಸ್ಯರಲ್ಲಿ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ನಂತರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ನಾಗರಾಜ್ ಪಡುಕೋಣೆಯವರ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ಮಾಣದ ನೂತನ ಕಮಿಟಿಯನ್ನು ರಚಿಸಲಾಯಿತು. ಅಲ್ಲದೆ ಸಭೆಯಲ್ಲಿ ಉಪಸ್ಥಿತರಿದ್ದ ಹಲವು ಸದಸ್ಯರು ಕಟ್ಟಡ ನಿರ್ಮಾಣಕ್ಕೆ ತಮ್ಮ ವಯುಕ್ತಿಕ ನೆಲೆಯಲ್ಲಿ ಹಣಕಾಸಿನ ನೆರವನ್ನು ಘೋಷಿಶಿದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿ ಶೀಘ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾರ್ಯ ಪ್ರವೃತ್ತರಾಗಲು ನಿರ್ಧರಿಸಲಾಯಿತು.

ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಸುಬ್ಬ ಜಿ. ದೇವಾಡಿಗರು ಮಾತನಾಡಿ, ಸಂಘಕ್ಕೆ ಸದಸ್ಯರ ಸಂಪೂರ್ಣ ಸಹಕಾರವನ್ನು ಕೋರಿದರಲ್ಲದೆ, ಸಂಘದ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಸೇರಿ ಮುನ್ನಡೆದು ಸಮಾಜ ಬಾಂಧವರ ಸಹಕಾರಕ್ಕಾಗಿ ನಮ್ಮ ಯೋಜನೆಯನ್ನು ಪೂರ್ಣಗೊಳಿಸೋಣ ಎಂದರು. ವಿಶೇಷ ಅತಿಥಿಯಾಗಿ ಆಗಮಿಸಿದ ಶ್ರೀ ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಟ್ರಷ್ಟಿ ಶ್ರೀ ಅಣ್ಣಯ್ಯ ಬಿ. ಶೇರಿಗಾರ್ ಅವರು ಮುಂಬರುವ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಎಲ್ಲರೂ ಆಗಮಿಸಿ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು. ಸಭಿಕರ ಪರವಾಗಿ ಜಿ.ಎ. ದೇವಾಡಿಗ, ಎಂ. ಸಿ. ಹೆಮ್ಮಾಡಿ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.ಮಹಿಳಾ ವಿಭಾಗ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗರು ಸಂಘದ ಕಚೇರಿಯಲ್ಲಿ ಸೆಪ್ಟೆಂಬರ್ 24 ರಂದು ಮಹಿಳಾ ವಿಭಾಗದವರು ಆಯೋಜಿಸುವ ಶಾರದಾ ಪೂಜೆಗೆ ಎಲ್ಲರನ್ನೂ ಆಹ್ವಾನಿಸಿದರು. ಮಹಾಸಭೆಯಲ್ಲಿ ಸ್ಥಾಪಕ ಸದಸ್ಯರಾದ G. A. ದೇವಾಡಿಗ,  S. V. ದೇವಾಡಿಗ ಹಾಗೆಯೇ ಸುಮಾರು 60 ಕ್ಕೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.
B. M. ದೇವಾಡಿಗರು ಕಾರ್ಯಕ್ರಮದ ನಿರೂಪಣೆ ಮಾಡಿ, ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.ರಾಷ್ಟ್ರಗೀತೆಯೊಂದಿಗೆ ಮಹಾಸಭೆಯು ಮುಕ್ತಾಯವಾಯಿತು.ಕೊನೆಯಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು.