ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ : ಯಶಸ್ವಿಯಾಗಿ ನೆರವೇರಿದ ವಾರ್ಷಿಕ ಕ್ರೀಡಾಕೂಟ ಮತ್ತು DPL-2016 ಕ್ರಿಕೆಟ್ ಟೂರ್ನಮೆಂಟ್.

Spread the News...

ಮುಂಬಯಿ : ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ D P L – 2016  ಕ್ರಿಕೆಟ್ ಟೂರ್ನಮೆಂಟ್ ಯುವ ವಿಭಾಗದ ಮುಂದಾಳತ್ವದಲ್ಲಿ ನ.27ರ ಭಾನುವಾರ ಡೊಂಬಿವಲಿ ಜಿಮ್ಖಾನಾ ಗ್ರೌಂಡ್ ಇಲ್ಲಿ ಯಯಶಸ್ವಿಯಾಗಿ ನೆರವೇರಿತು. ಕ್ರೀಡಾಕೂಟವನ್ನು ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ ಇವರು ದೀಪ ಪ್ರಜ್ವಲಿಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೊಲಕ ಉದ್ಘಾಟಿಸಿದರು. ನಂತರ ಬ್ಯಾಟಿಂಗ್ ಮಾಡುವ ಮುಖೇನ D P L – 2016  ಕ್ರಿಕೆಟ್ ಟೂರ್ನಮೆಂಟ್ ಗೆ ಸಾಂಕೇತಿಕವಾಗಿ ಚಾಲನೆ ನೀಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಳುಗಳಿಗೆ ಶುಭಕೋರಿ, ಪ್ರತಿಯೊಬ್ಬರೂ ಕ್ರೀಡಾಕೂಟವನ್ನು ಯಶಶ್ವಿಗೊಳಿಸುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌ. ಅಧ್ಯಕ್ಷರಾದ ಶ್ರೀ ಸುರೇಶ್ ಡಿ. ಪಡುಕೋಣೆ, ಮಾಜಿ ಅಧ್ಯಕ್ಷರಾದ ಶ್ರೀ ಜಿ.ಎ. ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಕ್ರೀಡಾಕೂಟದ ಮುಂದಾಳತ್ವವನ್ನು ವಹಿಸಿಕೊಂಡ ಯುವ ವೇದಿಕೆಯ ಅಧ್ಯಕ್ಷ ಶ್ರೀ ಉಮೇಶ್ ಆರ್. ದೇವಾಡಿಗ ಹಾಗೂ ಕಾರ್ಯದರ್ಶಿ ಶ್ರೀ  ಅವಿನಾಶ್ ಬಿ. ದೇವಾಡಿಗ ಮತ್ತು ಯುವ ವೇದಿಕೆಯ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು & ಮಹಿಳಾ ವಿಭಾಗದ ಸದಸ್ಯೆಯರು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು.

ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ವಿವಿಧ ಆಟೋಟಗಳನ್ನು ಸಮಾಜ ಬಾಂಧವರಿಗಾಗಿ ಏರ್ಪಡಿಸಲಾಗಿದ್ದು, ವಿಶೇಷವಾಗಿ  D P L – 2016  ಕ್ರಿಕೆಟ್ ಟೂರ್ನಮೆಂಟಿನಲ್ಲಿ 10 ತಂಡಗಳು ಭಾಗವಹಿಸಿದ್ದು, ಲಾವೇಶ್ ದೇವಾಡಿಗ ನೇತ್ರತ್ವದ ಅನುಧ್ಯಾ XI ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ರಾಘವೇಂದ್ರ ದೇವಾಡಿಗ ನಾಯಕತ್ವದ ಶ್ರೀ ಹನುಮಾನ್ ಫ್ರೆಂಡ್ಸ್ ನಾಗೂರ್ ತಂಡವು ರನ್ನರ್ ಆಪ್ ಪಟ್ಟ ಅಲಂಕರಿಸಿಕೊಂಡಿತು.

ಹಾಗೆಯೇ ವಿವಿಧ ವಯೋಮಿತಿಯವರಿಗಾಗಿ ಮತ್ತು ಚಿಕ್ಕಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮುಖ್ಯವಾಗಿ ರನ್ನಿಂಗ್ ರೇಸ್, ಲೆಮನ್ & ಸ್ಪೂನ್, ಬಕೆಟ್ & ಬಾಲ್, ಶಾಟ್ ಪುಟ್, ವಾಕೆಟೊನ್ ಮುಂತಾದ ಸ್ಪರ್ಧೆಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಬಹುಮಾನಗಳನ್ನು ಪಡೆದರು.

ಆಟೋಟಗಳಲ್ಲಿ ವಿಜೇತರಾದವರಿಗೆ ಪದಕಗಳನ್ನು ಸಂಘದ ಅಧ್ಯಕ್ಷರು, ಗೌ.ಪ್ರ. ಕಾರ್ಯದರ್ಶಿ ಬಿ. ಎಂ. ದೇವಾಡಿಗ ಇವರುಗಳು ನೀಡಿ ಗೌರವಿಸಿದರು. ಕ್ರಿಕೆಟ್ ಟೂರ್ನಮೆಂಟ್ ನ ತೀರ್ಪುಗಾರರಾಗಿ ಸಹಕರಿಸಿದ ಗಣೇಶ್ ಶೆಟ್ಟಿ, ನವೀನ್ ಶೆಟ್ಟಿ, ಹರೀಶ್ ಗೋವಾರಿ & ಗೌರವ್ ತಿವಾರಿ  ಇವರುಗಳನ್ನು ಸಂಘದ ಪರವಾಗಿ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.  ಕ್ರೀಡಾಕೂಟದಲ್ಲಿ ಭಾಗವಹಿಸಿ, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದವರಿಗೆ ಕೂಡ ಹೂಗುಚ್ಛ ನೀಡಿ ಗೌರವಿಸಲಾಯಿತು.

ಕ್ರೀಡಾಕೂಟದ ಪ್ರಾಯೋಜಕತ್ವವನ್ನು IRB Infrastructure Developers Ltd ವಹಿಸಿತ್ತುDPL-2016 ಕ್ರಿಕೆಟ್ ಟೂರ್ನಮೆಂಟ್ ನ  ನಗದು ಬಹುಮಾನವನ್ನು ಪುಣೆಯ ಉಧ್ಯಮಿ, ಶ್ರೀ ಏಕನಾಥೇಶ್ವರಿ ದೇವಸ್ಥಾನದ ಕಟ್ಟಡ ಸಮಿತಿಯ ಅಧ್ಯಕ್ಷರು ಹಾಗೂ ಟ್ರಸ್ಟಿ ಶ್ರೀ ಅಣ್ಣಯ್ಯ ಶೇರಿಗಾರ್ ಇವರು ಪ್ರಾಯೋಜಿಸಿದರು. ಮೆಡಲ್ ಮತ್ತು ಟ್ರೋಫಿ ಪ್ರಾಯೋಜಕತ್ವವನ್ನು  ಕ್ರಮವಾಗಿ ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ ಮತ್ತು  ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗರು ವಹಿಸಿಕೊಂಡಿದ್ದರು.ಕ್ರೀಡಾಕೊಟಕ್ಕೆ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಹಾಗೆಯೇ ಕ್ರೀಡಾಕೂಟಕ್ಕೆ ಗ್ರೌಂಡ್ ನ ವ್ಯವಸ್ಥೆ ಕಲ್ಪಿಸಿದ ಜಿಮ್ಖಾನಾ ಗ್ರೌಂಡ್ ಡೊಂಬಿವಲಿ ಇದರ ಪದಾಧಿಕಾರಿಗಳಿಗೆ,  ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಕೂಡ ಸಂಘದ ಪರವಾಗಿ ಧನ್ಯವಾದ ಸಮರ್ಪಿಸಲಾಯಿತು. ಕ್ರೀಡಾಕೂಟದಲ್ಲಿ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಪ್ರೀತಿ ಭೋಜನ ಹಾಗೂ ಸಂಜೆ ಚಹಾ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.ಕೊನೆಯಲ್ಲಿ ಕಾರ್ಯದರ್ಶಿ ಬಿ.ಎಂ. ದೇವಾಡಿಗ ಅವರು ಧನ್ಯವಾದ ಸಮರ್ಪಿಸಿದರು.