ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿ : 2 ನೇ ವರ್ಷದ ವಾರ್ಷಿಕ ವಿಹಾರ ಕೂಟ.

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿಯ ಯುವ ವಿಭಾಗವು 2 ನೇ ವರ್ಷದ ವಾರ್ಷಿಕ ವಿಹಾರ ಕೂಟವನ್ನು ಅಕ್ಟೊಬರ್ 2 ರ ರವಿವಾರ ಟಿಕುಜಿ ನೀ ವಾಡಿ ಥಾಣೆ, ಮುಂಬಯಿ ಇಲ್ಲಿ ಆಯೋಜಿಸಿತ್ತು.

ಯುವ ವಿಭಾಗದ ಮುಂದಾಳತ್ವದಲ್ಲಿ ಸಂಘದ ಹಾಗೂ ಸಮಾಜ ಬಾಂಧವರಿಗಾಗಿ ಏರ್ಪಡಿಸಲಾದ ವಿಹಾರಕೂಟವು ಬೆಳಿಗ್ಗೆ 7 ಗಂಟೆಗೆ ದಾದರ್ ನಿಂದ ಹೊರಟು ಸುಮಾರು 9 ಗಂಟೆಗೆ ನಿಗಧಿಪಡಿಸಿದ ಸ್ಥಳಕ್ಕೆ ತಲುಪಿತು.

ಅಲ್ಲಿ ಬೆಳಿಗ್ಗಿನ ಉಪಹಾರ ಸೇವನೆಯ ನಂತರ ವಿಹಾರಕೂಟದ ಸವಿಯನ್ನು ಸವಿದರು. ಮಕ್ಕಳು-ಹಿರಿಯರೆನ್ನದೆ ಎಲ್ಲರೂ ಭಾಗವಹಿಸಿ ಸಂತೋಷಪಟ್ಟರು. ಹಾಗೆಯೇ ಮಧ್ಯಾಹ್ನ ಭೋಜನದ ನಂತರ ಮತ್ತೆ ಎಲ್ಲರೂ ಮೋಜು ಮಸ್ತಿಯಲ್ಲಿ ಪಾಲ್ಗೊಂಡರು. ದಿನಪೂರ್ತಿ ಮೋಜು ಮಾಡಲು ಅಲ್ಲಿ ಎಲ್ಲಾ ತರಹದ ವ್ಯವಸ್ಥೆ ಲಭ್ಯವಿತ್ತು. ಎಲ್ಲರೂ ಅದರ ಸದುಪಯೋಗ ಪಡೆದುಕೊಂಡರು.

ಸಂಜೆ 4 ಗಂಟೆಯ ನಂತರ ಮಕ್ಕಳು, ಮಹಿಳೆಯರು ಮತ್ತು ಹಿರಿಯರಿಗೆ ವಿವಿಧ ಮನೋರಂಜೆಯ ಗೇಮ್ಸ್ ಗಳನ್ನೂ ಏರ್ಪಡಿಸಲಾಗಿತ್ತು. ಇದು ವಿಹಾರಕೂಟಕ್ಕೆ ಇನ್ನಷ್ಟು ಮೆರುಗು ನೀಡುವಲ್ಲಿ ಯಶಸ್ವಿಯಾಯಿತು. ಪ್ರತಿಯೋರ್ವರೂ ಕೂಡ ಅದರಲ್ಲಿ ಪಾಲ್ಗೊಂಡು ಆಕರ್ಷಕ ಬಹುಮಾನಗಳನ್ನು ಪಡೆದರು.

ಕೊನೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗಿ, ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ. N N  ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಶ್ರೀ. B M  ದೇವಾಡಿಗ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ದೇವಾಡಿಗ, ಯುವ ವೇದಿಕೆಯ ಅಧ್ಯಕ್ಷ ಶ್ರೀ ಉಮೇಶ್ ದೇವಾಡಿಗರು ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಾದ ಶ್ರೀ S V ದೇವಾಡಿಗ, ಶ್ರೀ ಮಂಜುನಾಥ್ ದೇವಾಡಿಗ, ಶ್ರೀ. ಶೇಖರ ದೇವಾಡಿಗ, ಕು. ಸಿಂಚನ ದೇವಾಡಿಗ, ಕು. ಪೂರ್ವಿ ದೇವಾಡಿಗ  ಮತ್ತು ತುಷಾರ್ ದೇವಾಡಿಗ ಇವರುಗಳಿಗೆ ಈ ಸಂಧರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಉಪಾಧ್ಯಕ್ಷರಾದ ಶ್ರೀ N N  ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಶ್ರೀ B M  ದೇವಾಡಿಗ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ದೇವಾಡಿಗ, S V  ದೇವಾಡಿಗರು ಮಾತನಾಡಿ, ವಾರ್ಷಿಕ ವಿಹಾರಕೂಟವನ್ನು ಆಯೋಜಿಸಿದ ಯುವ ವಿಭಾಗದ ಕಾರ್ಯ ಶ್ಲಾಗನೀಯ ಎಂದರಲ್ಲದೆ, ಇವತ್ತಿನ ವಿಹಾರಕೂಟವು ಅತ್ಯಂತ ಯಶಸ್ವಿಯಾಗಿದ್ದು, ಮುಂದೆಯೂ ಕೂಡ ಯುವ ವಿಭಾಗದವರು ಇದೆ ರೀತಿ ಯಶಶ್ವಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಹುರಿದುಂಬಿಸಿದರು. ಅದೇ ರೀತಿ ಮುಂದಿನ ತಿಂಗಳು ನ. 27 ರಂದು ನಡೆಯಲಿರುವ ವಾರ್ಷಿಕ ಕ್ರೀಡಾಕೂಟ ಹಾಗೂ DPL ಕ್ರಿಕೆಟ್ ಟೂರ್ನಮೆಂಟ್ ಗೆ ಆಗಮಿಸಲು ನೆರೆದಿರುವ ಸಮಾಜ ಭಾಂಧವರಲ್ಲಿ ವಿನOತಿಸಿಕೊಂಡರು.
ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಆರ್. ದೇವಾಡಿಗರು ಸಂಘದ ಹಿರಿಯರ ಸಹಕಾರವನ್ನು ಶ್ಲಾಘಿಸುತ್ತ ವಿಹಾರ ಕೂಟದ ಯಶಸ್ಸಿಗೆ ಸಹಕರಿಸಿದ  ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಹಾರಕೂಟದಲ್ಲಿ ಉಪಸ್ಥಿತರಿದ್ದ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ S V ದೇವಾಡಿಗ, ಮಾಜಿ ಉಪಾಧ್ಯಕ್ಷರಾದ ಶ್ರೀ ಆನಂದ್ ದೇವಾಡಿಗ, ಆಂತರಿಕ ಲೆಕ್ಕಪರಿಶೋದಕರಾದ ಶ್ರೀ ಮಂಜುನಾಥ್ ದೇವಾಡಿಗ, ದೇವಾಡಿಗ ಸಂಘ ಮುಂಬೈ ಸಿಟಿ ರಿಜಿನ್ LCCಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ L ಗೀತಾ ದೇವಾಡಿಗ, ಧಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಜ್ರತೆ ಕು. ದೀಕ್ಷಾ L ದೇವಾಡಿಗ, ದೇವಾಡಿಗ ಕಲಾವಿದರ ತಂಡದ ಸದಸ್ಯರಾದ ಕು. ದೀಪ ದೇವಾಡಿಗ, ಕು. ಪೂರ್ವಿ ದೇವಾಡಿಗ, ಕು. ದೀಕ್ಷಾ L ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, Helping hands whatsapp ಗ್ರೂಪ್ ನ ಸದಸ್ಯರಾದ ಶ್ರೀ ರಮೇಶ್ ದೇವಾಡಿಗ ಮತ್ತು ಶ್ರೀ ಪ್ರವೀಣ್ ದೇವಾಡಿಗ, ಸಂಘದ ಅಧಿಕೃತ website www.devadigawelfare.com ನ ವಿನ್ಯಾಸಕರಾದ ಶ್ರೀ ನಾಗರಾಜ್ K  ದೇವಾಡಿಗ (ಉದಯವಾಣಿ) ಮತ್ತು ಸಂಪಾದಕರಾದ ಶ್ರೀ ಅಶೋಕ್ R ದೇವಾಡಿಗ (ಕರ್ನಾಟಕ ಮಲ್ಲ), ವಿಹಾರ ಕೂಟಕ್ಕೆ ಬಸ್ಸಿನ ಪ್ರಯೋಜಕ್ತ್ವವನ್ನು ಮಾಡಿದ ಶ್ರೀ ಸುಬ್ಬ ದೇವಾಡಿಗ, ಶ್ರೀ S V ದೇವಾಡಿಗ, ಶ್ರೀ B M  ದೇವಾಡಿಗ ಮತ್ತು ಶ್ರೀ ಪ್ರಭಾಕರ್ ದೇವಾಡಿಗ,ಸಂಘಕ್ಕೆ ಪ್ರಯೋಜಕತ್ವನ್ನು ನೀಡುತ್ತಾ ಬಂದಿರುವ ಶ್ರೀ. ನಾಗರಾಜ್ ಬಿಜೂರ್, ಶ್ರೀ ಲಕ್ಷ್ಮಣ್ ದೇವಾಡಿಗ ಮತ್ತು ಶ್ರೀ. ಶೇಖರ್ ದೇವಾಡಿಗ ಹಾಗೂ  ವಿಹಾರಕೂಟಕ್ಕೆ ಸಹಕರಿಸಿದವರನ್ನು ಯುವ ವೇದಿಕೆಯ ಪರವಾಗಿ ಹೂಗುಚ್ಛ ನೀಡುವುದರ ಮುಖೆನ ಗೌರವಿಸಲಾಯಿತು.

ವಿಹಾರಕೂಟದಲ್ಲಿ ಭಾಗವಹಿಸಿದ ಎಲ್ಲರೂ ಆಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಸಭಾ ಕಾರ್ಯಕ್ರಮವನ್ನು ಯುವ ವೇದಿಕೆಯ ಕಾರ್ಯದರ್ಶಿ ಶ್ರೀ ಅವಿನಾಶ್ ಬಿ. ದೇವಾಡಿಗ ಇವರು ನಿರೂಪಿಸಿದರೆ ಅಶೋಕ್ ಆರ್. ದೇವಾಡಿಗ ಇವರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಪೂರ್ಣ ವಿರಾಮವನ್ನಿಟ್ಟು ವಿಹಾರಕೂಟದಿಂದ ಹಿಂತಿರುಗಾಲಾಯಿತು.