ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ ಇದರ 29 ನೇ ವಾರ್ಷಿಕ ಮಹಾಸಭೆಯು ದಿನಾಂಕ 18 / 09 / 2016 ರಂದು ಸಂಘದ ಕಚೇರಿಯಲ್ಲಿ ಶ್ರೀ ಸುಬ್ಬ ಜಿ. ದೇವಾಡಿಗರ ಅಧ್ಯಕ್ಷತೆಯಲ್ಲಿ ನೆರವೇರಿತು. ವೇದಿಕೆಯಲ್ಲಿ ಸಂಘದ ಗೌರವ ಉಪಾಧ್ಯಕ್ಷ ಶ್ರೀ ನಾಗರಾಜ್ ಪಡುಕೋಣೆ, ಉಪಾಧ್ಯಕ್ಷ ಶ್ರೀ N N ದೇವಾಡಿಗ, ಶ್ರೀ ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಟ್ರಷ್ಟಿ ಶ್ರೀ ಅಣ್ಣಯ್ಯ ಬಿ. ಶೇರಿಗಾರ್, ಗೌ. ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಜತೆ ಕಾರ್ಯದರ್ಶಿ ಶ್ರೀ ಅಶೋಕ್ ಕೆ. ದೇವಾಡಿಗ, ಕೋಶಾಧಿಕಾರಿ ಶ್ರೀ ಶ್ರೀನಿವಾಸ ದೇವಾಡಿಗ, ಯುವ ವೇದಿಕೆ ಅಧ್ಯಕ್ಷ ಶ್ರೀ ಉಮೇಶ್ ಆರ್. ದೇವಾಡಿಗರು ಆಸೀನರಾಗಿದ್ದರು.ಶ್ರೀ ಅಶೋಕ್ ಕೆ. ದೇವಾಡಿಗರ ಪ್ರಾರ್ಥನೆಯೊಂದಿಗೆ ಮಹಾಸಭೆಯು ಆರಂಭಗೊಂಡಿತು.28 ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಅಶೋಕ್ ಕೆ. ದೇವಾಡಿಗ ಇವರು ವಾಚಿಸಿದರೆ, ಗತ ವರ್ಷದ ವಾರ್ಷಿಕ ವರಧಿಯನ್ನು ಉಮೇಶ್ ಆರ್. ದೇವಾಡಿಗರು ಪ್ರಸ್ತುತಪಡಿಸಿದರು. 2015-16 ರ ಲೆಕ್ಕಪತ್ರ ವರಧಿಯನ್ನು ಶ್ರೀನಿವಾಸ್ ದೇವಾಡಿಗರು ಮಂಡಿಸಿದರು.
ಮಹಾಸಭೆಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣದ ಬಗ್ಗೆ ವಿವರವಾದ ಚರ್ಚೆ ನಡೆದು, ಸಭಿಕರಿಂದಲೂ ಉತ್ತಮ ಸಲಹೆ ಸೂಚನೆಗಳು ಲಭಿಸಿತು.ಶ್ರೀ ಅಣ್ಣಯ್ಯ ಶೇರಿಗಾರ್ ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀ ಏಕನಾಥೇಶ್ವರಿ ದೇವಸ್ಥಾನದ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನೆರವನ್ನು ಕೋರಿದರು.ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸುಬ್ಬ ಜಿ. ದೇವಾಡಿಗರು ಮಾತನಾಡುತ್ತಾ, ಸಂಘವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ಧಾರಿ ಯುವಕರ ಮೇಲಿದ್ದು, ಎಲ್ಲರ ಸಹಕಾರ ಸಂಘಕ್ಕೆ ಇರಲಿ ಎಂದು ಮನವಿ ಮಾಡಿಕೊಂಡರು. ಎಲ್ಲರು ಒಂದಾಗಿ ಸಂಘಕ್ಕೆ ಬಹು ಅಗತ್ಯವಿರುವ ಭವನವನ್ನು ಆದಷ್ಟು ಬೇಗ ನಿರ್ಮಾಣ ಮಾಡೋಣ ಎಂದು ತಿಳಿಸಿದರು. ಅಲ್ಲದೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ಮನವಿ ಮಾಡಿದರು.
ಯುವ ವಿಭಾಗದ ಅಧ್ಯಕ್ಷ ಉಮೇಶ್ ಆರ್ ದೇವಾಡಿಗರು ಯುವ ವಿಭಾಗಕ್ಕೆ ಸಂಘದ ಹಿರಿಯರ ಹಾಗು ಎಲ್ಲರಿಂದ ಉತ್ತಮ ಸಹಕಾರ ದೊರಕಿದ್ದು, ಮುಂದೆಯೂ ಇದೇ ರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ಹಾಗೆಯೇ ಅಕ್ಟೋಬರ್ 2 ರಂದು ಯುವ ವಿಭಾಗ ಆಯೋಜಿಸಿರುವ ವಾರ್ಷಿಕ ವಿಹಾರ ಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಕೇಳಿಕೊಂಡರು.ಮಹಿಳಾ ವಿಭಾಗ ಉಪಾಧ್ಯಕ್ಷೆ ಶ್ರೀಮತಿ ಸುಶೀಲ ಎಸ್ ದೇವಾಡಿಗರು ಅಕ್ಟೋಬರ್ 9 ರಂದು ಸಂಘದ ಕಚೇರಿಯಲ್ಲಿ ಮಹಿಳಾ ವಿಭಾಗದವರು ಆಯೋಜಿಸಿಯಿರುವ ಶಾರದಾ ಪೂಜೆಗೆ ಎಲ್ಲರನ್ನೂ ಆಹ್ವಾನಿಸಿದರು.
ಮಹಾಸಭೆಯಲ್ಲಿ ಸ್ಥಾಪಕ ಸದಸ್ಯರಾದ G. A. ದೇವಾಡಿಗ, S. V. ದೇವಾಡಿಗ ಹಾಗೆಯೇ ಸುಮಾರು 50 ಕ್ಕೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.B. M. ದೇವಾಡಿಗರು ಸಭೆಯ ನಿರೂಪಣೆ ಮಾಡಿದರೆ, ಅಶೋಕ್ ಕೆ. ದೇವಾಡಿಗರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.