ಯುವ ವೇದಿಕೆ

Spread the News...

ಹಳೆ ಬೇರು ಹೊಸ ಚಿಗುರು”
“ಯುವ ವೇದಿಕೆ”
ವಸಂತ ಕಾಲದಲ್ಲಿ ಹೊಸ ಚಿಗುರಿನ ಹಸಿ-ಹಸಿ ನೋಡುವವರ ಕಣ್ಮನ ಸೆಳೆಯುತ್ತದೆ. ಮರ ಹಳೆತಾದರೂ ಹೊಸ ಚಿಗುರಿನ ಕಂಪು ಎಳೆತನದ ಸೊಗಡನ್ನು ಸೂಸುತ್ತದೆ. ಹಾಗೆಯೇ ಮರ ಚಿಗುರಲು ವಸಂತ ಕಾಲ ಕಾರಣವಾದಂತೆ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ನ ಬೇರಿನಲ್ಲಿ ಯುವ ವೇದಿಕೆಯ ಚಿಗುರಿನ ಅಂಕುರವಾಯಿತು. 2004 ರ ಇಸವಿ ದೀಪಾವಳಿಯ ದಿನ ವಿವಿಧ ಉದ್ಧೇಶಗಳನ್ನು ಇಟ್ಟುಕೊಂಡು ನಿರ್ಮಾಣಗೊಂಡ ಮಂಚವೇ ಈ “ಯುವ ವೇದಿಕೆ”.
ಯಾವುದೇ ಸಮಾಜದ ಕ್ರಾಂತಿಯಲ್ಲಿ ಯುವ ಪೀಳಿಗೆಯ ಕೊಡುಗೆ ಅಪಾರವಾಗಿರುತ್ತದೆ. ಯುವ ಜನರ ಕ್ರೀಯಾಶೀಲತೆಯನ್ನು ಸಾಂಘಿಕ ಕಾರ್ಯಕ್ರಮಗಳಿಗಾಗಿ ತೊಡಗಿಸಿಕೊಲ್ಳುದರಿಂದ ಪರಿವರ್ತನೆಯ ಹಾದಿ ಸುಗಮವಾಗುತ್ತದೆ. ಹಾಗೆಯೇ ಯುವ ವೇದಿಕೆಯು ದೇವಾಡಿಗ ಸಮಾಜದ ಯುವ ಜನರ ಮನಸ್ಸನ್ನು ಗೆಲ್ಲುವ ಹಾಗೂ ಸಂಘಕ್ಕೆ ಹೊಸತನವನ್ನು ಕೊಡುವ ಉದ್ದೇಶವನ್ನು ಇಟ್ಟುಕೊಂಡು ಘಟಿಸಲ್ಪಟ್ಟಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ತಿಳಿಸುದಕ್ಕೆ ಸಂತೋಷ ಪಡುತ್ತಿದ್ದೇವೆ.
ನಮ್ಮ ಯುವ ವೇದಿಕೆಯ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ.
1. ಸಂಘದ ಸದಸ್ಯತನದ ವೃದ್ಧಿಗಾಗಿ ಸತತ ಪ್ರಯತ್ನ.
2. ಎಲ್ಲಾ ಸ್ಥರದ ದೇವಾಡಿಗರನ್ನು ಸಾಂಘಿಕವಾಗಿ ಒಟ್ಟುಗುದಿಸುದು.
3. ಸಂಘದ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವುದು.
4. ಸಂಘದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವಂತೆ ಪ್ರೇರೇಪಿಸುವುದು.
5. ಸಂಘದ ಚಟುವಟಿಕೆಗಳಲ್ಲಿ ಸಮಾಜ ಬಾಂಧವರಲ್ಲಿ ಆಸಕ್ತಿ ಮೂಡಿಸುವುದು.
ಈ ನಿಟ್ಟಿನಲ್ಲಿ ನಾವು ಮುಂದುವರಿಯುತ್ತ ನಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತಾರಗೊಳಿಸುವುದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಪ್ರಾರಮ್ಬಿಸತೊಡಗಿದೇವು.
ಈ ಕಾರ್ಯಕ್ರಮಗಳಲ್ಲಿ ಮುಖ್ಯವಾದವುಗಳು :-
ಮುಂಬೈಯಲ್ಲಿ ದೇವಾಡಿಗ ಬಾಂಧವರು ಹೆಚ್ಚಾಗಿ ನೆಲೆಸಿರುವ ತಾಣಗಳಲ್ಲಿ ಸ್ತಾನೀಯ ಮುಖಂಡರನ್ನು ನೇಮಿಸಲಾಯಿತು. ಇದರಿಂದ ಜಾತಿ ಬಾಂಧವರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಮತ್ತು ಸಂಘದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಸಹಾಯವಾಗಬಲ್ಲದು – ಎಂಬುದು ನಮ್ಮ ಉದ್ದೇಶ.

ಹಾಗೆಯೇ ಮುಂದುವರಿಯುತ್ತ ಮಹಿಳಾ ವಿಭಾಗದ ಸಹಯೋಗದೊಂದಿಗೆ ಪ್ರತಿ ತಿಂಗಳು ಜಂಟಿಯಾಗಿ ಸ್ಥಾನಿಯ ಸಭೆಗಳನ್ನು ಏರ್ಪಡಿಸಿ ಅಲ್ಲಿಯ ಜನರ ಅಭಿಪ್ರಾಯಗಳನ್ನು ತಿಳಿಯತೊಡಗಿದೆವು. ಹಾಗೆಯೇ ದೇವಾಡಿಗ ಯುವ ಜನರಿಗೆ ಸಹಾಯವಾಗುವಂತೆ ಮತ್ತು ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ಉದ್ಯೋಗ ವಿನಿಮಯ ಮಾಹಿತಿಯನ್ನೊಳಗೊಂಡ “Job Guide” ನ್ನು ಪ್ರಸ್ತುತಪಡಿಸಲಾಯಿತು.
ಹಲವಾರು ಸದುದ್ದೇಶ ಇಟ್ಟುಕೊಂಡು ದೇವಾಡಿಗ ಯುವ ಜನರ “ಯುವವೇದಿಕೆ”ಯು ಪ್ರಾರಂಭದಿಂದಲೇ ಜನರಿಂದ ಹಲವಾರು ಪ್ರತಿಕ್ರಿಯೆಗಳನ್ನು ಪಡೆಯತೊಡಗಿತು.ಜನರ ಅನಿಸಿಕೆಗಳಿಗೆ ಸ್ಪಂದಿಸುತ್ತಾ, ಅವರಿಗೆ ನಮ್ಮ ಉದ್ದೇಶಗಳನ್ನು ವಿವರಿಸುತ್ತ ಮುಂದುವರಿದ ನಮಗೆ ಮೊದಮೊದಲು ಎಡರು ತೊಡರುಗಳು ಎದುರಾದರೂ ಬರಬರುತ್ತ ನಮ್ಮ ಚಟುವಟಿಕೆಗಳಲ್ಲಿ ನಾವು ಸಪಲರಾಗತೊಡಗಿದೇವು. ಪ್ರಾರಂಭದಲ್ಲಿ ಅನಾಸಕ್ತಿ ತೋರಿದ ನಮ್ಮ ಜಾತಿ ಬಾಂಧವರು ನಮ್ಮ ಸದುದ್ದೇಶ ಮತ್ತು ಉತ್ಶಾಹ ನೋಡಿ ತಾವೂ ಸಹಕರಿಸತೊಡಗಿದರು. ಆದ್ಧರಿಂದ ಸಂಘದ ಸದಸ್ಯತನ ವ್ರದ್ಧಿಗೊಳಿಸುವ ನಮ್ಮ ಉದ್ಧೇಶವು ಭಾಗಶಃ ಯಶಸ್ಹ್ವಿಯಾಯಿತು ಎಂದು ತಿಳಿಸಲು ನಮಗೆ ಹೆಮ್ಮೆಯೆನಿಸುತ್ತದೆ.ಜನರು ಸಂಘದ ಕಾರ್ಯಚಟುವಟಿಕೆಗಳಲ್ಲಿ ನಿರುಸ್ತಾಹಿಯಾದರೂ ಸಂಘದ ಬಗ್ಗೆ ಸದಭಿಪ್ರಾಯ ಹೊಂದಿರುತ್ತಾರೆ. ಸಮಯದ ಅಭಾವದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ಸಂಘದ ಧ್ಯೇಯ ಹಾಗೂ ಉದ್ದೇಶಗಳ ಬಗ್ಗೆ ಆಶಾವಾಧಿಯಾಗಿದ್ದಾರೆ ಎಂಬುದು ನಮಗೆ ತಿಳಿದು ಬರಲು ಹೆಚ್ಚು ಸಮಯ ತಗುಲಲಿಲ್ಲ. ಇದರಿಂದ ನಮ್ಮ ಉತ್ಸಾಹ ಇಮ್ಮಡಿಯಾಯಿತು. ಹಾಗೆಯೇ ಸಂಘದಿಂದ ತಮಗೇನು ಲಾಭವಿದೆ ಎನ್ನುವವರಿಗೆ ತಿಳಿ ಹೇಳುತ್ತ ಅವರಿಗೆ ಸಂಘಕ್ಕಾಗಿ ತಾವೇನು ಮಾಡಿದ್ದಿರಿ ಮತ್ತು ಮಾಡಬಲ್ಲೆವು ಎಂದು ತಮ್ಮನ್ನು ತಾವು ಕೇಳಿಕೊಳ್ಳುವಂತೆ ತಿಳಿಸಿದೇವು.
ಸಂಘಕ್ಕಾಗಿ ತಮ್ಮಿಂದ ಏನೋ ಸಹಯೋಗವಾಗದೇ ಸಂಘದಿಂದ ಯಾವುದೇ ಪ್ರಯೋಜನವಿಲ್ಲ, ಅಪೇಕ್ಷೆ ಪಡುವುದು ಸರಿಯಲ್ಲವೆಂದು ಜನರಿಗೆ ತಿಳಿದುಬಂದ ಕೂಡಲೇ ತಾವಾಗಿಯೇ ಮುಂದೆ ಬಂದು ಸಂಘದ ಸದಸ್ಯತನವನ್ನು ಪಡೆಯತೊಡಗಿದರು!.