ಸಂಘದ ಗುರಿ ಮತ್ತು ಉದ್ದೇಶಗಳು:
ಸಂಘವು ಈ ಕೆಳಗಿನ ಗುರಿ ಮತ್ತು ಉದ್ದೇಶಗಳನ್ನು ಹೊಂದಿದೆ.
01. ಸಮಾಜದಲ್ಲಿ ಪರಸ್ಪರ ಭಾತ್ರತ್ವ, ಐಕ್ಯತೆ, ರಾಷ್ಟ್ರೀಯ ಭಾವೈಕ್ಯತೆ, ಸಹಕಾರ ಇತ್ಯಾದಿ ಭಾವನೆಗಳನ್ನು ಸದಸ್ಯರಲ್ಲಿ, ಸಾರ್ವಜನಿಕರಲ್ಲಿ, ಕಾರ್ಯಕ್ರಮ ಸಭೆ ಪ್ರವಚನ ಈ ಸಾಧನೆಗಳ ಮೂಲಕ ಮೂಡಿಸುವುದು.
02. ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಮುಂದುವರೆದು ಕಾಲೇಜು ಸ್ಥಾಪನೆಯ ಬಗ್ಗೆ ಪ್ರಯತ್ನಶೀಲರಾಗಿ, ಸಮಾಜದಲ್ಲಿ ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸುವುದು.
03. ವಿದ್ಯಾರ್ಥಿ ವೇತನ, ಸಹಾಯ, ಸಾಲ, ಪಠ್ಯ ಮತ್ತು ಪಠ್ಯೇತರ ಪುಸ್ತಕ, ಸಮವಸ್ತ್ರ ಇತ್ಯಾದಿ ಸವಲತ್ತುಗಳನ್ನು ಶಾಲಾ ಮಕ್ಕಳಿಗೆ ನೀಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು.
04. ತೀರಾ ಬಡತನಕ್ಕೊಳಗಾದವರಿಗೆ ಅಗತ್ಯವಿದ್ದಲ್ಲಿ ಆರ್ಥಿಕ ನೆರವನ್ನು ನೀಡುವುದು.
05. ವಿವಿಧ ಪುಸ್ತಕಗಳನ್ನೋಳಗೊಂಡ ಗ್ರಂಥಾಲಯವನ್ನು ಸದಸ್ಯರ ಹಿತಕ್ಕಾಗಿ ನಡೆಸುವುದು.
06. ಕಾಲಕಾಲಕ್ಕೆ ಮಕ್ಕಳಿಗಾಗಿ ವಾಕ್ ಸ್ಪರ್ಧೆಗಳನ್ನು ಏರ್ಪಡಿಸಿ ಅವರನ್ನು ಯೋಗ್ಯ ಮತ್ತು ಜ್ಞಾನ ಸಂಪನ್ನ ನಾಗರಿಕರನ್ನಾಗಿ ರೂಪಿಸುವುದು.
07. ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಬಡವರಿಗೆ ನೆರವಾಗುವುದು.
08. ಉಪನ್ಯಾಸ, ಪ್ರವಚನ, ಸಾಂಸ್ಕ್ರತಿಕ, ಮನೋರಂಜನಾ ಇತ್ಯಾದಿ ಕಾರ್ಯಕ್ರಮಗಳನ್ನು ಸಾಧಿಸುವುದು. ಈ ನಿಟ್ಟಿನಲ್ಲಿ ನಿಯತಕಾಲಿಕೆ ಮತ್ತು ಪುಸ್ತಕಗಳ ಪ್ರಕಾಶನ ಮಾಡುವುದು.
09. ಸಾಂಸ್ಕ್ರತಿಕ, ಧಾರ್ಮಿಕ, ಹಾಗೂ ರಾಷ್ಟ್ರೀಯ ಹಬ್ಬ, ಉತ್ಸವಗಳ ಆಚರಣೆ.
10. ಪ್ರಥಮ ಚಿಕಿತ್ಸೆ ಸವಲತ್ತುಗಳು ಹಾಗೂ ಅಂಬುಲೆನ್ಸ್ ಸೇವೆಯನ್ನು ಸಮಾಜದ ಬಡವರ್ಗ, ದೀನ ದಲಿತರಿಗಾಗಿ ನಡೆಸುವುದು.
11. ಶಾರೀರಿಕ ತರಭೇತಿ ಕೇಂದ್ರಗಳನ್ನು ಸ್ಥಾಪಿಸಿ, ನಡೆಸುವುದು.
12. ವಿಭಿನ್ನ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡುವುದು.
13. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ, ಅವರನ್ನು ಉತ್ತಮ ಕಲಿಕೆ, ಸಂಶೋಧನೆ ಮತ್ತು ಸಾಹಿತ್ಯದತ್ತ ಪ್ರೋತ್ಸಾಹಿಸುವುದು.
14. ವ್ರತ್ತಿಪರ ತರಬೇತು ಅವಕಾಶಗಳನ್ನು ಕಲ್ಪಿಸಿ, ಸಮಾಜದ ಬಡ ವರ್ಗದವರಿಗೆ ನೆರವಾಗುವುದು.
15. ಕಡು ಬಡವರು, ಅಸಹಾಯಕರಿಗೆ ವೈದ್ಯಕೀಯ ನೆರವು, ವ್ರದ್ಧಾಪ್ಯ ನೆರವು, ಮರಣೋತ್ತರ ಖರ್ಚುಗಳನ್ನು ಭರಿಸುವುದು.
16. ಅಂಧಶ್ರದ್ಧೆ, ಸಾಮಾಜಿಕ ಪಿಡುಗಾದ ವರದಕ್ಷಿಣೆ ನಿರ್ಮೂಲನೆ ಮತ್ತು ಯುವ ವ್ರಂದವನ್ನು ವೈಜ್ಞಾನಿಕ ದ್ರಷ್ಟಿಕೊನದತ್ತ ಪ್ರೋತ್ಸಾಹಿಸುವುದು.
17. ಸೇವಾದಳ, ರಕ್ತದಾನ ಶಿಭಿರ, ಸ್ವಾತಂತ್ರ್ಯೋತ್ಸವಗಳನ್ನು ಆಚರಿಸಿ, ಸಮಾಜದ ಯುವ ವ್ರಂದವನ್ನು ದೇಶ ಪ್ರೇಮ ಹೆಚ್ಚಿಸುವಲ್ಲಿ ಪ್ರೇರೇಪಿಸುವುದು.
18. ಭೂಕಂಪ, ತ್ಸುನಾಮಿ, ಬೆಂಕಿ ಅನಾಹುತ, ನೆರೆಹಾವಳಿ, ಬರಗಾಲ ಇತ್ಯಾದಿ ಪ್ರಕ್ರತಿ ವಿಕೋಪಕ್ಕೆ ತುತ್ತಾದ ನತದ್ರಷ್ಟರಿಗೆ ಶೀಘ್ರ ಸಹಾಯ ಒದಗಿಸುವುದು.
19. ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಸುಸಾಂಗಿಕವಾಗಿ ನೆರವೇರಿಸುವ ಸಲುವಾಗಿ, ಭವಿಷ್ಯದಲ್ಲಿ ಒಂದು ಸಮಾಜ ಭವನ ನಿರ್ಮಾಣಕ್ಕಾಗಿ ಶ್ರಮಿಸುವುದು.
20. ಸಮಾಜದ ಹಿತದ್ರಷ್ಟಿಯಲ್ಲಿ ಹಾಗೂ ಸಂಘದ ಗುರಿ ಮತ್ತು ಉದ್ದೇಶಗಳ ಪೂರೈಕೆಗೆ ಪೂರಕವಾಗಿ ಕಾರ್ಯಚಟುವಟಿಕೆಗಳನ್ನು ಏರ್ಪಡಿಸುವುದು.
ನಮ್ಮ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷದಂತೆ ಪ್ರತಿಭಾ ಪುರಸ್ಕಾರಗಳನ್ನು ಕೊಡಲಾಗುವುದು.ಈ ಪ್ರತಿಭಾ ಪುರಸ್ಕಾರಕ್ಕೆ ಅರ್ಹತೆ ಕೆಳಗಿನಂತಿದೆ.
* 1ನೇ ತರಗತಿಯಿಂದ 7ನೇ ತರಗತಿ ತನಕ ಶೇಕಡಾ 85 ರಷ್ಟು ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು.
* 8ನೇ ತರಗತಿಯಿಂದ 12 ನೇ ತರಗತಿ ತನಕ ಶೇಕಡಾ 80 ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು.
* ತ್ರತೀಯ ವರ್ಷ ಪದವಿ (BA, Bcom, Bsc) ತನಕ ಶೇಕಡಾ 75 ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು.
* ಹಾಗೂ MA, Mcom, Msc ಮತ್ತು ಇನ್ನಿತರ ಉನ್ನತ ಮಟ್ಟದ ವ್ಯಾಸಂಗದಲ್ಲಿ ಪದವಿ ಪಡೆದವರಿಗೂ ಪ್ರತಿಭಾ ಪುರಷ್ಕರಗಳನ್ನು ನೀಡಲಾಗುದು.
* 10 ಮತ್ತು 12 ನೇ ತರಗತಿ ಹಾಗೂ ತ್ರತೀಯ ವರ್ಷ ಪದವಿಯಲ್ಲಿ ಅತ್ಯಂತ ಗರಿಷ್ಟ ಅಂಕಗಳನ್ನು ಪಡೆದ ಒಬ್ಬರಿಗೆ ಬಹುಮಾನವನ್ನು ಕೊಡಲಾಗುವುದು.ಇದಲ್ಲದೆ ವೃತ್ತಿಪರ ಪದವಿಗಳಾದ ಇಂಜಿನಿಯರ್ , ಡಾಕ್ಟರ್ ಸಿ .ಏ , ಮತ್ತು ಸಿ .ಎಸ್ ಮೊದಲಾದ ವನ್ನು ಗುರುತಿಸಿ ಸತ್ಕಾರ ಮಾಡಲಾಗುದು.
ಮೇಲೆ ನಮೂದಿಸಲ್ಪಟ್ಟ ಅಹ್ರತೆ ಪಡೆದಿರುವ ವಿದ್ಯಾರ್ಥಿ -ವಿದ್ಯಾರ್ಥಿನಿಯರು, ಸಂಘಧ ವಾರ್ಷಿಕ ಅಂಕಪಟಿಯ ಪ್ರತಿಯನ್ನು ಮಹಾಸಭೆಯ ದಿವಸ ತಲುಪಿಸುವವರೇ ಸದಸ್ಯರಲ್ಲಿ ವಿನಂತಿ. ಪುರಸ್ಕಾರ ವಿತರಣೆಯನ್ನು ವಾರ್ಷಿಕ ಸಮಾರಂಭದಲ್ಲಿ ನೀಡಲಾಗುದು
ವಿದ್ಯಾರ್ಥಿವೇತನದ ಅರ್ಜಿ ಪರಿಶೀಲನೆಯಲ್ಲಿ ಸಮಿತಿಯ ನಿರ್ಣಯವೇ ಅಂತಿಮ ನಿರ್ಧಾರವಾಗಿದೆ.
ಸದಸ್ಯರಲ್ಲಿ ವಿನಂತಿ :
1. ಸದಸ್ಯರು ತಮ್ಮ ವಿಳಾಸ ಬದಲಾಯಿಸಿದಲ್ಲಿ ನೂತನ ವಿಳಾಸವನ್ನು ಸಂಘಕ್ಕೆ ಬರೆದು ತಿಳಿಸಬೇಕಾಗಿ ವಿನಂತಿ.
2. ಸಂಘವು ನಡೆಸುವ ವಿಶೇಷ ಕಾರ್ಯಕ್ರಮಗಳಿಗೆ ತಪ್ಪದೆ ಬಂದು ಭಾಗವಹಿಸಿರಿ.
3. ಇದುವರೆಗೆ ಸಂಘದ ಸದಸ್ಯರಾಗದೇ ಇದ್ದವರು, ಆದಷ್ಟು ಬೇಗನೇ ‘ಸದಸ್ಯತನ’ವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
4. ಪ್ರತಿಯೊಬ್ಬ ಹಳೆಯ ಸದಸ್ಯರು ಹೊಸ ಸದಸ್ಯರನ್ನು ದೊರಕಿಸಿಕೊಟ್ಟು ಸಂಘದ ಸದಸ್ಯತನವನ್ನು ಹೆಚ್ಚಿಸಬೇಕಾಗಿ ವಿನಂತಿ.ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ತನ್ನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಸದಸ್ಯ ಬಾಂಧವರನ್ನು ಹಾರ್ಧಿಕವಾಗಿ ಸ್ವಾಗತಿಸುತ್ತದೆ.